Thursday, November 5, 2026

Dasara Wishes

Happy Dasara
Home Front Page ರಾಜ್ಯದಲ್ಲಿ ಜನಸಾಮಾನ್ಯರಿಗೆ ಮತ್ತೆ ಶಾಕ್: KSRTC ಬಸ್ ಟಿಕೆಟ್  ದರ ಗರಿಷ್ಠ 9 ರೂ ಏರಿಕೆ

ರಾಜ್ಯದಲ್ಲಿ ಜನಸಾಮಾನ್ಯರಿಗೆ ಮತ್ತೆ ಶಾಕ್: KSRTC ಬಸ್ ಟಿಕೆಟ್  ದರ ಗರಿಷ್ಠ 9 ರೂ ಏರಿಕೆ

ರಾಜ್ಯದಲ್ಲಿ ಜನಸಾಮಾನ್ಯರಿಗೆ ಮತ್ತೆ ಶಾಕ್: KSRTC ಬಸ್ ಟಿಕೆಟ್ ದರ ಗರಿಷ್ಠ 9 ರೂ ಏರಿಕೆ

ಬೆಂಗಳೂರು,ನವೆಂಬರ್,4,2026 (www.justkannada.in):  ರಾಜ್ಯದಲ್ಲಿ ಈಗಾಗಲೇ ಹಾಲು ಮತ್ತು ಮೊಸರಿನ ದುಬಾರಿ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ ಸಾಮಾನ್ಯರಿಗೆ ಇದೀಗ ರಾಜ್ಯ ಸರ್ಕಾರ ಸಾರಿಗೆಯ ನಾಲ್ಗು ನಿಗಮಗಳ ಬಸ್ ಪ್ರಯಾಣದ ಟಿಕೆಟ್ ದರವನ್ನು ಏರಿಕೆ ಮಾಡಿದೆ.

ಇತ್ತೀಚೆಗೆ ಪ್ರತಿ ಲೀಟರ್  ಹಾಲಿಗೆ 8ರೂ, ಮೊಸರಿಗೆ 14 ರೂಪಾಯಿ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಬರೆ ಹಾಕಿದ್ದ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಕೆಎಸ್ ಆರ್ ಟಿಸಿ ಬಸ್ ಪ್ರಯಾಣದ ಟಿಕೆಟ್ ದರವನ್ನೂ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ.Shock ksrtc

ಹೌದು ಕೆಎಸ್ ಆರ್ ಟಿಸಿ ಬಸ್ ಟಿಕೆಟ್  ದರ ಗರಿಷ್ಠ 9 ರೂ ಏರಿಕೆ ಮಾಡಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ಕೆಎಸ್ ಆರ್ ಟಿಸಿ ಬಸ್ ಟಿಕೆಟ್  ದರ ಗರಿಷ್ಠ 9 ರೂ ಏರಿಕೆ ಮಾಡಲಾಗಿದೆ. ಬಿಎಂಟಿಸಿ ಬಸ್ ನಲ್ಲಿ ಈ ಹಿಂಧೆ ಕನಿಷ್ಠ ದರ 6 ರೂ. ಇತ್ತು. ಈಗ 10 ರೂ.ಗೆ ಏರಿಕೆ ಮಾಡಿದ್ದೇವೆ. ಗರಿಷ್ಠ ದರ 35ರಿಂದ 45 ರೂ.ಗೆ ಏರಿಕೆ ಮಾಡಿದ್ದೇವೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ನಾಲ್ಕು ನಿಗಮಗಳ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.ರಾಜ್ಯದಲ್ಲಿ ಜನಸಾಮಾನ್ಯರಿಗೆ ಮತ್ತೆ ಶಾಕ್: KSRTC ಬಸ್ ಟಿಕೆಟ್ ದರ ಗರಿಷ್ಠ 9 ರೂ ಏರಿಕೆ

ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾವಾರು ಲೆಕ್ಕದಲ್ಲಿ ಹೆಚ್ಚಿಸದೆ, ಸ್ಟೇಜ್‌ಗಳ ಆಧಾರದ ಮೇಲೆ ಮಾತ್ರ ಏರಿಕೆ ಮಾಡಲಾಗಿದೆ. ಮೆಜೆಸ್ಟಿಕ್‌ನಿಂದ ನೆಲಮಂಗಲ ಹಾಗೂ ಹೊಸಕೋಟೆಗೆ ಇದ್ದ 35 ರೂ. ದರ ಈಗ ₹44ಕ್ಕೆ ಏರಿಕೆಯಾಗಿದ್ದು, ಪ್ರತಿ ಸ್ಟೇಜ್‌ಗೆ ಇದ್ದ 6 ರೂ. ದರ 10 ರೂ.ಗೆ ಹೆಚ್ಚಿಸಲಾಗಿದೆ.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ಸಾಮಾನ್ಯ ಸಾರಿಗೆಯಲ್ಲಿ ₹9 ಹಾಗೂ ವೇಗದೂತ ಬಸ್‌ಗಳಲ್ಲಿ ₹18 ವರೆಗೆ ದರ ಹೆಚ್ಚಿಸಲಾಗಿದೆ. ಬೆಂಗಳೂರಿನಿಂದ ನೆಲಮಂಗಲ, ಹೊಸಕೋಟೆಗೆ ₹44 ಹಾಗೂ ಮಾಗಡಿಗೆ ₹57ಕ್ಕೆ ಟಿಕೆಟ್ ದರ ಏರಿಕೆಯಾಗಿದೆ.

ಈಗಾಗಲೇ ಬರಗಾಲ ಹಾಲಿನ ದರ, ಮೊಸರಿನ ದರ ಸೇರಿ ಹಲವು ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಇದೀಗ ರಾಜ್ಯ ಸರ್ಕಾರ ಬಸ್ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಿ ಮತ್ತೆ ಶಾಕ್ ನೀಡಿದೆ.common people jk02_new jk02 new

 

English Summary
Title

KSRTC Bus Fare Hike 2026: Karnataka Ticket Prices Set to Increase

Short Description
For the general public in the state—who are already reeling from the steep price hikes in milk and curd—the state government has now increased bus fares across its four transport corporations. KSRTC bus fares have been raised by a maximum of ₹9. Speaking at a press conference, Transport Minister Byrathi Suresh announced that KSRTC fares have been increased by up to ₹9. Regarding BMTC (Bangalore Metropolitan Transport Corporation) services, the minimum fare has been raised from ₹6 to ₹10, while the maximum fare has increased from ₹35 to ₹45. The revised fares will come into effect starting at midnight tonight. The Minister confirmed that bus fares have been increased across all four government transport corporations.
Keywords
Shock, common people, KSRTC bus, ticket fares, increased, Rs 9.