ಬೆಂಗಳೂರು,ನವೆಂಬರ್,3,2026 (www.justkannada.in): ಕನ್ನಡಿಗರಿಗೆ ಉದ್ಯೋಗ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ ಅಭಿಯಾನವನ್ನ ಟೀಕಿಸಿದ್ದ ತಮಿಳುನಾಡಿನ ಐಪಿಎಸ್ ಅಧಿಕಾರಿ ಧನುಷ್ ಕುಮಾರ ವಿರುದ್ದ ಗರಂ ಆದ ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡರು, ತನ್ನ ಚಾಳಿ ಮುಂದುವರೆಸಿದರೇ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಟಿಎ ನಾರಾಯಣಗೌಡರು, ಕನ್ನಡ ಉಳಿವಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. . ಕನ್ನಡಿಗರಿಗೆ ಉದ್ಯೋಗವೇ ಸಿಗುತ್ತಿಲ್ಲ ಎಂದು ಕೂಗು ಕೇಳಿ ಬರುತ್ತಿತ್ತು. ಹಲವು ವರ್ಷಗಳಿಂದ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲವೆಂಬ ಕೂಗು ಇದೆ. 1984ರಲ್ಲಿ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಸಮಿತಿ ರಚಿಸಿದ್ದರು. ಡಾ. ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಅಂದಿನ ಭಾಷಾ ಅಲ್ಪಸಂಖ್ಯಾತರು ಆ ವರದಿ ಜಾರಿಗೆ ಬಿಡಲಿಲ್ಲ ಎಂದು ತಿಳಿಸಿದರು.
ಇತ್ತೀಷೆಗೆ ರೆಸ್ಯೂಮ್ ನಲ್ಲಿ ಕನ್ನಡ ಇದ್ದಿದ್ದಕ್ಕೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಸಿಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ಆಂದೋಲನ ಆರಂಭಿಸಿದೆ ಕಳೆದ 3 ದಿನಗಳಿಂದ ಅಭಿಯಾನ ಆರಂಭಿಸಿದೆ ಕನ್ನಡಿಗರಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರೆಂದು ಮಾಹಿತಿ ಕೇಳಲಾಗಿದೆ. ಕರವೇಯ 10 ತಂಡಗಳಿಂದ ಐಟಿಬಿಟಿ ಕಂಪನಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದೇವೆ ಎಂದರು.
ಕರವೇ ಅಭಿಯಾನ ಟೀಕಿಸಿದ್ದ ತಮಿಳುನಾಡಿನ ಐಪಿಎಸ್ ಅಧಿಕಾರಿ ಧನುಷ್ ಕುಮಾರ ವಿರುದ್ದವೂ ಕಿಡಿಕಾರಿದ ನಾರಾಯಣಗೌಡರು, ಧನುಷ್ ಕುಮಾರ್ ತನ್ನ ಚಾಳಿ ಮುಂದುವರೆಸಿದರೇ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.






