Tuesday, November 3, 2026

Dasara Wishes

Happy Dasara
Home Front Page ನಾಗಮಂಗಲ ತಾಲೂಕು ಕಚೇರಿ ಮತ್ತೊಂದು ಎಡವಟ್ಟು:  ಜಿ.ಪಂ ದಾಖಲೆಗಳು ಗುಜರಿಗೆ

ನಾಗಮಂಗಲ ತಾಲೂಕು ಕಚೇರಿ ಮತ್ತೊಂದು ಎಡವಟ್ಟು:  ಜಿ.ಪಂ ದಾಖಲೆಗಳು ಗುಜರಿಗೆ

ನಾಗಮಂಗಲ ತಾಲೂಕು ಕಚೇರಿ ಮತ್ತೊಂದು ಎಡವಟ್ಟು: ಜಿ.ಪಂ ದಾಖಲೆಗಳು ಗುಜರಿಗೆ

ಮಂಡ್ಯ,ನವೆಂಬರ್,3,2026 (www.justkannda.in): ಮಂಡ್ಯ  ಜಿಲ್ಲೆಯ ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಮತ್ತೊಂದು ಯಡವಟ್ಟು ಬಯಲಾಗಿದೆ.  ಈ ಹಿಂದೆ ಸರ್ಕಾರಿ ಕಡತಗಳನ್ನು ಕಸದ ತೊಟ್ಟಿಗೆ ಎಸೆದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ತಾಲೂಕು ಕಚೇರಿಯಲ್ಲಿ, ಇದೀಗ ಜಿಲ್ಲಾ ಪಂಚಾಯಿತಿ ಅನುದಾನಕ್ಕೆ ಸಂಬಂಧಿಸಿದ ಕಡತಗಳನ್ನು ಗುಜರಿಗೆ ಹಾಕಲಾಗಿದೆ.

ತಾಲೂಕು ಕಚೇರಿಯ ಆವರಣದಲ್ಲಿ ಸರ್ಕಾರಿ ದಾಖಲೆಗಳನ್ನು ಕಸದ ಹೆಸರಿನಲ್ಲಿ ಗುಜರಿ ಆಟೋಗೆ ತುಂಬುತ್ತಿದ್ದ ದೃಶ್ಯವನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದು . ಆಟೋದಲ್ಲಿದ್ದ ಕಡತಗಳನ್ನು ಪರಿಶೀಲಿಸಿದಾಗ, ಅವು ಜಿಲ್ಲಾ ಪಂಚಾಯಿತಿಯ ವಿವಿಧ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಎಂಬ ವಿಚಾರ ಬೆಳಕಿಗೆ ಬಂದಿದೆ.ನಾಗಮಂಗಲ ತಾಲೂಕು ಕಚೇರಿ ಮತ್ತೊಂದು ಎಡವಟ್ಟು: ಜಿ.ಪಂ ದಾಖಲೆಗಳು ಗುಜರಿಗೆ

ತಾಲೂಕು ಕಚೇರಿಯಲ್ಲಿ ಅಕ್ರಮದ ದಾಖಲೆಗಳನ್ನು ನಾಶಪಡಿಸುವ ಕೆಲಸ ನಡೆಯುತ್ತಿದೆಯಾ? ಅಧಿಕಾರಿಗಳೇ ಕಸದ ಹೆಸರಲ್ಲಿ ಅಕ್ರಮದ ದಾಖಲೆಗಳನ್ನು ಗುಜರಿಗೆ ಹಾಕಿಸುತ್ತಿದ್ದಾರಾ? ಎಂದು ದಾಖಲೆಗಳನ್ನು ಗುಜರಿಯ ಆಟೋಗೆ ತುಂಬುವ ವೇಳೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಆದರೆ ಸಿಬ್ಬಂದಿಗಳು ತಮ್ಮ ಮೇಲಧಿಕಾರಿಯವರು ಕಸವನ್ನು ಎಂದು ಗುಜರಿಗೆ ಹಾಕಲು ಹೇಳಿದ್ದಾರೆಂದು ತಿಳಿಸುತ್ತಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಸ ವಿಲೇವಾರಿ ಹೆಸರಲ್ಲಿ ಸರ್ಕಾರಿ ದಾಖಲೆಗಳನ್ನು ಗುಜರಿಗೆ ಹಾಕುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Nagamangala Taluk Office jk02_new jk02 new

 

English Summary
Title

Zilla Panchayat records have been sent to the scrap heap at the Nagamangala Taluk Office.

Short Description
Another blunder has come to light at the Taluk Office in Nagamangala, Mandya district. This office, which previously drew public ire for discarding government files into a trash bin, has now been found sending files related to Zilla Panchayat grants to a scrap dealer. Members of the public spotted government documents being loaded into a scrap-collection auto-rickshaw on the Taluk Office premises and immediately confronted the staff. Upon inspection of the files in the vehicle, it was revealed that they were, in fact, important documents pertaining to various Zilla Panchayat grants and development projects.
Keywords
Nagamangala Taluk Office, Zilla Panchayat, records, scrap, heap