Tuesday, November 3, 2026

Dasara Wishes

Happy Dasara
Home Front Page ನಂದಿನಿ ಮೊಸರಿನ ದರ ಕೊಂಚ ಇಳಿಕೆಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ

ನಂದಿನಿ ಮೊಸರಿನ ದರ ಕೊಂಚ ಇಳಿಕೆಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ

ನಂದಿಧ್ವಜ ಪೂಜೆ ವೇಳೆ ಮಂತ್ರಿಗಳಿಗೆ ಅವಕಾಶ ನಿರಾಕರಣೆ: ವಿಚಾರಣೆ ನಡೆಸಿ ವರದಿಗೆ ಸಿಎಂ ಡಿಕೆಶಿ ಆದೇಶ

ಬೆಂಗಳೂರು,ನವೆಂಬರ್,3,2026 (www.justkannada.in):  ರಾಜ್ಯದಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿಗೆ 8 ರೂ. ಮತ್ತು ಮೊಸರಿಗೆ 14 ರೂ. ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಈ ಬೆನ್ನಲ್ಲೆ ಇದೀಗ ಸಿಎಂ ಡಿಕೆ ಶಿವಕುಮಾರ್ ಮೊಸರಿನ ದರ ಕೊಂಚ ಇಳಿಕೆಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ ಗೆ 2 ರೂ.  ಇಳಿಸುವಂತೆ ಸಿಎಂ ಡಿ.ಕೆ ಶಿವಕುಮಾರ್ ಕರ್ನಾಟಕ ಹಾಲು ಮಹಾಮಂಡಳಿಗೆ (KMF) ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೆಎಂಎಫ್ ಹಾಲಿಗೆ 8 ರೂ. ಮತ್ತು ಮೊಸರಿಗೆ 14 ರೂ. ದರ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರು, ಹೋಟೆಲ್ ಮಾಲೀಕರು ಹಾಗೂ ವಿಪಕ್ಷಗಳು ಸರ್ಕಾರದ ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಡಿಕೆ ಶಿವಕುಮಾರ್ , ಕೆಎಂಎಫ್ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮೊಸರಿನ ದರವನ್ನು ಇಳಿಸಲು ನಿರ್ದೇಶನ ನೀಡಿದ್ದಾರೆ. ಮೊಸರಿನ ಮೇಲಿನ ದರವನ್ನು ಲೀಟರ್‌ ಗೆ 2 ರೂ. ಕಡಿಮೆ ಮಾಡಲು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.DK Shivakumar jk02_new jk02 new

 

English Summary
Title

Nandini Curd Price Reduced by ₹2 Following CM Shivakumar's Intervention

Short Description
Karnataka Chief Minister D.K. Shivakumar announced a ₹2 per litre price reduction for Nandini curd, following public outcry over a steep ₹14 hike by the Karnataka Milk Federation (KMF). The immediate cut drops the 1-kg pack from ₹68 to ₹66. While rolling back curd rates to ease consumer burden, Shivakumar defended the recent ₹8 per litre Nandini milk price hike. He stated that the revision is crucial to support 11 lakh local dairy farming families and counter higher pricing from brands like Amul in neighboring states. This strategic decision balances consumer relief with rural economic growth across Karnataka.
Keywords
CM, DK Shivakumar, direct, reduction, price, Nandini curd.