ಬೆಂಗಳೂರು,ಆಕ್ಟೋಬರ್,31,2026 (www.justkannada.in): ರಾಜ್ಯದಲ್ಲಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ತೀವ್ರವಾಗಿ ಟೀಕಿಸಿರುವ ಬಿಜೆಪಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಈಶ್ವರ್ ಖಂಡ್ರೆ ಟಾಂಗ್ ಕೊಟ್ಟಿದ್ದಾರೆ.
ನಂದಿನಿ ಹಾಲಿನ ದರ 8 ರೂ., ಮೊಸರಿನ ದರ 14 ರೂ.ಹೆಚ್ಚಳ ಮಾಡಿರುವ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಹಣ ಹಾಲು ಉತ್ಪಾದಕರಿಗೆ ಹೋಗುತ್ತಿದೆ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ , ಗ್ಯಾಸ್, ಅಕ್ಕಿ ಬೆಲೆ ಜಾಸ್ತಿ ಮಾಡುತ್ತಾರೆ. ಇವರೇ ಹೆಚ್ಚು ಮಾಡಿ ಹೀಗೆ ಹೇಳಿದ್ರೆ ಹೇಗೆ? ಅವರ ಜನವಿರೋಧಿ ತೀರ್ಮಾನ ಕೆಲಸವನ್ನು ನಮ್ಮ ಮೇಲೆ ಹಾಕುತ್ತಾರೆ. ನಮ್ಮಷ್ಟು ಪ್ರೋತ್ಸಾಹ ಧನವನ್ನು ಅವರು ಕೊಡ್ತಿದ್ದಾರಾ? ಎಂದು ತಿರುಗೇಟು ನೀಡಿದರು.
ಜನವರಿ ಮೊದಲ ಅಥವಾ 2ನೇ ವಾರ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯಲಿದೆ. ಚುನಾವಣೆ ಸಂಬಂಧ ಕರಡು ಮೀಸಲು ಪಟ್ಟಿ ಪ್ರಕಟ ಮಾಡಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.






