Saturday, October 31, 2026

Dasara Wishes

Happy Dasara
Home Front Page ಕಾಂಗ್ರೆಸ್ ಕಾರ್ಯಕರ್ತರ ಬೆವರಿನ ಕಾಣಿಕೆಯಿಂದಲೇ ಇಂದಿರಾ ಭವನ ನಿರ್ಮಾಣವಾಗಲಿ: ಸಿಎಂ ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಕಾರ್ಯಕರ್ತರ ಬೆವರಿನ ಕಾಣಿಕೆಯಿಂದಲೇ ಇಂದಿರಾ ಭವನ ನಿರ್ಮಾಣವಾಗಲಿ: ಸಿಎಂ ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಕಾರ್ಯಕರ್ತರ ಬೆವರಿನ ಕಾಣಿಕೆಯಿಂದಲೇ ಇಂದಿರಾ ಭವನ ನಿರ್ಮಾಣವಾಗಲಿ: ಸಿಎಂ ಡಿ.ಕೆ ಶಿವಕುಮಾರ್

ಮಂಡ್ಯ, ಅಕ್ಟೋಬರ್,31,2026 (www.justkannada.in): “ಇಂದಿರಾ ಭವನ ಎನ್ನುವುದು ಕೇವಲ ಕಾಂಗ್ರೆಸ್ ಪಕ್ಷದ ಕಚೇರಿಯಾಗದೆ, ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಸ್ವಾಭಿಮಾನದ ಸಂಕೇತವಾಗಬೇಕು. ಊರಿನಲ್ಲಿ ದೇವಸ್ಥಾನ ನಿರ್ಮಿಸಲು ಮನೆಮನೆಗೆ ತೆರಳಿ ಚಂದಾ ಸಂಗ್ರಹಿಸುವಂತೆ, ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಶಕ್ತ್ಯಾನುಸಾರ 100 ರೂಪಾಯಿಂದ ರಿಂದ 10 ಲಕ್ಷದವರೆಗೆ ಕಾಣಿಕೆ ನೀಡಿ ಈ ಭವನ ನಿರ್ಮಾಣದಲ್ಲಿ ಕೈಜೋಡಿಸಬೇಕು. ಆಗ ಮಾತ್ರ ಇದು ನಮ್ಮ ಭವನ, ನಮ್ಮ ಆಸ್ತಿ ಎಂಬ ಆತ್ಮೀಯತೆ ಮೂಡಲು ಸಾಧ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಮಂಡ್ಯದ ಹೊಳಲು ವೃತ್ತದ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂದಿರಾ ಭವನ ನಿರ್ಮಾಣಕ್ಕೆ ಶನಿವಾರದಂದು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

“ಮಂಡ್ಯ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಗುರಿಯೊಂದಿಗೆ ಕಾರ್ಯಕರ್ತರು ಈಗಿನಿಂದಲೇ ಒಗ್ಗಟ್ಟಿನಿಂದ ಪಕ್ಷ ಸಂಘಟಿಸಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು” ಎಂದು ಕರೆ ನೀಡಿದರು.

“ಮಂಡ್ಯದಲ್ಲಿ ಕಾಂಗ್ರೆಸ್ ಗೆ ಪ್ರತ್ಯೇಕ ಕಚೇರಿ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಹಿಂದೆ ಗಾಂಧಿ ಭವನದ ಜಾಗದ ವಿಚಾರವಾಗಿ ಪ್ರಯತ್ನ ನಡೆದಿದ್ದರೂ ಅದು ಪೂರ್ಣಗೊಂಡಿರಲಿಲ್ಲ. ಇದೀಗ ಸರ್ಕಾರದಿಂದ ಜಾಗ ಮಂಜೂರು ಮಾಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಉತ್ತಮ ವಿನ್ಯಾಸ ರೂಪಿಸಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ” ಎಂದು ತಿಳಿಸಿದರು.

“ಈ ಭವನ ನಿರ್ಮಾಣ ಚಲುವರಾಯಸ್ವಾಮಿ ಅವರೊಬ್ಬರ ಜವಾಬ್ದಾರಿಯಲ್ಲ. ಜಿಲ್ಲೆಯ ಪ್ರತಿಯೊಬ್ಬ ಮುಖಂಡರು, ಪಂಚಾಯಿತಿ ಸದಸ್ಯರು, ಕಾರ್ಯಕರ್ತರು ಕೈಜೋಡಿಸಬೇಕು. ₹100 ಇರಲಿ, ₹1 ಸಾವಿರ ಇರಲಿ ಅಥವಾ ₹1 ಲಕ್ಷ, ₹5 ಲಕ್ಷ, ₹10 ಲಕ್ಷ ಇರಲಿ, ತಮ್ಮ ಶಕ್ತ್ಯಾನುಸಾರ ಕೊಡುಗೆ ನೀಡಬೇಕು. ಎಲ್ಲರೂ ಸೇರಿ ಕಟ್ಟಿದಾಗ ಮಾತ್ರ ಈ ಭವನಕ್ಕೆ ನಿಜವಾದ ಅರ್ಥ ಬರುತ್ತದೆ” ಎಂದು ಹೇಳಿದರು.

ಇಂದಿರಾ ತ್ಯಾಗದ ಸ್ಮರಣೆಗೆ ಭವನ

“ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿಗಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಭವನ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೇಂದ್ರವಾಗಬೇಕು. ‘ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ’ ಎಂಬ ಮಾತು ದೇಶದ ಇತಿಹಾಸದಲ್ಲಿ ಅವರ ಕೊಡುಗೆಯನ್ನು ಸಾರುತ್ತದೆ” ಎಂದು ಹೇಳಿದರು.

“ಬ್ಯಾಂಕುಗಳ ರಾಷ್ಟ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ಬ್ಯಾಂಕಿಂಗ್ ಸೇವೆ ತಲುಪುವಂತೆ ಮಾಡಿದವರು ಇಂದಿರಾ ಗಾಂಧಿ. ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದರಿಂದ ನೆರವಾಯಿತು. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಜಾಮೀನು ಇಲ್ಲದೆ ಬಡವರಿಗೆ ₹5 ಸಾವಿರ ಸಾಲ ದೊರೆಯುವಂತೆ ಮಾಡುವ ನಿರ್ಧಾರ ಕೈಗೊಂಡಿದ್ದರು. ಇಂದು ಬ್ಯಾಂಕುಗಳು ಜನರ ಮನೆಬಾಗಿಲಿಗೆ ಬಂದು ಸಾಲ ನೀಡುವ ವ್ಯವಸ್ಥೆ ಬೆಳೆದಿದೆ. ಉಳುವವನಿಗೆ ಭೂಮಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಮೂಲಕ ಇಂದಿರಾ ಗಾಂಧಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ” ಎಂದರು.

“ನಾವು ಯುವ ಮತ್ತು ವಿದ್ಯಾರ್ಥಿ ನಾಯಕರಾಗಿದ್ದಾಗ ದೆಹಲಿಯ ಕಾರ್ಯಕ್ರಮವೊಂದಕ್ಕೆ ರೈಲಿನಲ್ಲಿ ತೆರಳುತ್ತಿದ್ದೆವು. ದೊಡ್ಡಬಳ್ಳಾಪುರ ತಲುಪುವ ಮುನ್ನ ರೈಲು ನಿಂತಿತು. ಇಂದಿರಾ ಗಾಂಧಿ ಅವರ ಹತ್ಯೆಯ ಸುದ್ದಿ ತಿಳಿದು ಬೆಂಗಳೂರಿಗೆ ವಾಪಸಾದೆವು. ದೇಶಾದ್ಯಂತ ದೊಡ್ಡ ಗಲಭೆ ನಡೆದಿತ್ತು. ಆ ದಿನದ ನೆನಪು ಇಂದಿಗೂ ಮನಸ್ಸಿನಲ್ಲಿ ಉಳಿದಿದೆ” ಎಂದು ಹೇಳಿದರು.

ಮಂಡ್ಯ ಅಭಿವೃದ್ಧಿಗೆ ₹2 ಸಾವಿರ ಕೋಟಿಗೂ ಅಧಿಕ ಅನುದಾನ

“ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಈಗಾಗಲೇ 2 ಸಾವಿರ ಕೋಟಿಗೂ ಅಧಿಕ ಅನುದಾನ ಮಂಜೂರು ಮಾಡಲಾಗಿದೆ. ರೈತರ ಬದುಕು ಹಸನಾಗಬೇಕು, ಹೊಲಗಳಿಗೆ ನೀರು ಹರಿಯಬೇಕು ಎಂಬುದು ಸರ್ಕಾರದ ಆಶಯ. ಮಂಡ್ಯ ಜಿಲ್ಲೆಯ ಬದುಕು ಕನ್ನಂಬಾಡಿ ಕಟ್ಟೆ ಮತ್ತು ಕೃಷಿಯೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ” ಎಂದರು.

“ಜಿಲ್ಲೆಗೆ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನೂರಾರು ಕೋಟಿ ರೂಪಾಯಿಗಳಿಂದ ಸಾವಿರಾರು ಕೋಟಿ ರೂಪಾಯಿಗಳವರೆಗಿನ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಅಭಿವೃದ್ಧಿ ಕಾರ್ಯಗಳ ಪ್ರಯೋಜನ ಜನರಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ” ಎಂದು ಹೇಳಿದರು.

ಗ್ಯಾರಂಟಿ ಫಲಾನುಭವಿಗಳೇ ಪಕ್ಷದ ಸಂಪರ್ಕ ಸೇತು

“ಪಕ್ಷ ಸಂಘಟನೆಯನ್ನು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಂಪರ್ಕದೊಂದಿಗೆ ಬೆಸೆಯಬೇಕು. ಪ್ರತಿ ಪಂಚಾಯಿತಿಯಲ್ಲಿ ಆರು ಸದಸ್ಯರ ಗ್ಯಾರಂಟಿ ಸಮಿತಿ ರಚಿಸುವಂತೆ ಈಗಾಗಲೇ ಶಾಸಕರು ಮತ್ತು ಮುಖಂಡರಿಗೆ ಸೂಚನೆ ನೀಡಲಾಗಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಸಮಿತಿಗಳ ರಚನೆ ಪೂರ್ಣಗೊಳಿಸಬೇಕು. ಸಮಿತಿ ಸದಸ್ಯರು ಪ್ರತಿಯೊಬ್ಬ ಗ್ಯಾರಂಟಿ ಫಲಾನುಭವಿಯನ್ನೂ ಸಂಪರ್ಕದಲ್ಲಿಟ್ಟುಕೊಂಡು ಸರ್ಕಾರದ ಯೋಜನೆಗಳ ಮಾಹಿತಿ ತಲುಪಿಸುವ ಜತೆಗೆ ಪಕ್ಷ ಸಂಘಟನೆಗೂ ನೆರವಾಗಬೇಕು” ಎಂದರು.

ಪಂಚಾಯಿತಿಗೆ 250 ಯುವ ಸದಸ್ಯರ ಗುರಿ; 15 ದಿನಕ್ಕೊಮ್ಮೆ ಸಭೆ

“ಯುವಕರನ್ನು ಸಂಘಟಿಸಿ ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಆರಂಭಿಸಲಾಗಿದೆ. ಶೀಘ್ರದಲ್ಲೇ ಈ ಸಂಘಗಳ ಉದ್ಘಾಟನೆ ನಡೆಯಲಿದ್ದು, ಪ್ರತಿ ಪಂಚಾಯಿತಿಯಲ್ಲಿ ಕನಿಷ್ಠ 250 ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ” ಎಂದು ತಿಳಿಸಿದರು.

“ಯುವಕರ ಪ್ರತಿಭೆ, ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವುದು ಈ ಸಂಘಗಳ ಉದ್ದೇಶ. ಯುವಕರು ಕೇವಲ ಸಂಘದ ಸದಸ್ಯರಾಗುವುದಷ್ಟೇ ಅಲ್ಲ, ತಮ್ಮಲ್ಲಿರುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಕ್ರೀಡಾ ಇಲಾಖೆಯ ಮೂಲಕ ಈ ಸಂಬಂಧದ ಚಟುವಟಿಕೆಗಳು ನಡೆಯುತ್ತಿವೆ. ಸದಸ್ಯರಿಗೆ ಗುರುತಿನ ಚೀಟಿಯನ್ನೂ ನೀಡಲಾಗುವುದು. ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ಯುವಕರು ನಾಟಕ ಕಲಿಯಬೇಕೇ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೇ ಅಥವಾ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೇ ಎಂಬುದನ್ನು ಅವರೇ ನಿರ್ಧರಿಸಬೇಕು” ಎಂದರು.

ಪ್ರತಿ ಕ್ಷೇತ್ರದಲ್ಲೂ ಇಂದಿರಾ ಭವನ

ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯೇಕ ಇಂದಿರಾ ಭವನ ನಿರ್ಮಾಣವಾಗಬೇಕು. ಮಳವಳ್ಳಿಯಲ್ಲಿ ನರೇಂದ್ರಸ್ವಾಮಿ ಅವರು ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮದ್ದೂರಿನಲ್ಲಿ ಉದಯ್ ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಬಂಡಿ ಸಿದ್ದೇಗೌಡರು ಶ್ರೀರಂಗಪಟ್ಟಣದಲ್ಲಿ,  ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಅವರು ಭವನ ನಿರ್ಮಾಣಕ್ಕೆ ಮುಂದಾಗಬೇಕು. ಕೆ.ಆರ್. ಪೇಟೆ ಮತ್ತು ಪಾಂಡವಪುರದಲ್ಲೂ ಪಕ್ಷದ ಕಚೇರಿಗಳು ನಿರ್ಮಾಣವಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕರ್ತರಿಗೆ ಒಗ್ಗೂಡುವ ಕೇಂದ್ರ ಇರಬೇಕು” ಎಂದು ಹೇಳಿದರು.

2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ: ಸ್ಥಳೀಯ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗಿ

“ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. 2028ರಲ್ಲಿ ಯಾವುದೇ ರೀತಿಯ ರಾಜಕೀಯ ಚಿತ್ರಣ ಸೃಷ್ಟಿಸಿದರೂ ಜನರ ಬೆಂಬಲದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಇದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಈ ಚುನಾವಣೆಗಳಿಗೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿ ಹಂತದಲ್ಲೂ ಸಮರ್ಥ ನಾಯಕರನ್ನು ಬೆಳೆಸಿಕೊಂಡು, ಒಗ್ಗಟ್ಟಿನಿಂದ ಪಕ್ಷ ಸಂಘಟಿಸಬೇಕು” ಎಂದು ಕರೆ ನೀಡಿದರು.

ಮೇಕೆದಾಟು ಯೋಜನೆಗೆ 2,500 ಎಕರೆ ಗುರುತು; ರೈತರ 500 ಎಕರೆ ಮಾತ್ರ ಭೂಸ್ವಾಧೀನ

ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್ ಬಳಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ವಿಚಾರವಾದ ಪ್ರಶ್ನೆಗೆ ಉತ್ತರಿಸಿದರು.

“ಮಂಡ್ಯ ಎಂದರೆ ಕಾವೇರಿ. ಕಾವೇರಿ ನೀರಿನ ಸಮರ್ಪಕ ನಿರ್ವಹಣೆ ಹಾಗೂ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ರೈತರ ಹಿತ ಕಾಪಾಡಲು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ನಿಂದ ಅನುಮತಿ ದೊರೆತಿದ್ದು, ಯೋಜನೆಗಾಗಿ ಈಗಾಗಲೇ 2,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ರೈತರ ಖಾಸಗಿ ಜಮೀನು ಕೇವಲ 500 ಎಕರೆ ಮಾತ್ರ ಭೂಸ್ವಾಧೀನವಾಗಲಿದೆ” ಎಂದು ಸಿಎಂ ತಿಳಿಸಿದರು.'Indira Bhavan dk shivakumar-dks dk shivakumar dks

“ಮೇಕೆದಾಟು ಯೋಜನೆಯಿಂದ ಕಾವೇರಿ ನೀರಿನ ನಿರ್ವಹಣೆಗೆ ದೊಡ್ಡ ಅನುಕೂಲವಾಗಲಿದೆ. ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿಗೆ ಪರ್ಯಾಯವಾಗಿ ಜಮೀನು ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಬಜೆಟ್ ವೇಳೆಗೆ ಕೇಂದ್ರ ಸರ್ಕಾರದಿಂದ ಅರಣ್ಯ ಅನುಮತಿ ಪಡೆಯುವ ನಿರೀಕ್ಷೆಯಿದೆ” ಎಂದು ಹೇಳಿದರು.

“ನನ್ನ ಅವಧಿಯಲ್ಲಿ ಹೋರಾಟ ಮಾಡಿ, ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ ಪ್ರಕರಣದಲ್ಲಿ ಯಶಸ್ಸು ಸಾಧಿಸಿದ್ದೇವೆ. ಮೇಕೆದಾಟು ಯೋಜನೆ ಆರಂಭಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈಗಾಗಲೇ ಜಿಲ್ಲಾಧಿಕಾರಿಗಳನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡುವ ಸಂಬಂಧ ಸಭೆ ನಡೆಸಲಾಗಿದೆ. ಪರ್ಯಾಯ ಭೂಮಿ ಗುರುತಿಸುವ ಕೆಲಸವೂ ನಡೆದಿದೆ. ಈಗಾಗಲೇ 2,500 ಎಕರೆ ಗುರುತಿಸಿದ್ದು, ಇನ್ನೂ ಗುರುತಿಸಲಾಗುತ್ತಿದೆ” ಎಂದರು.

66 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶ

ಮೇಕೆದಾಟು ಯೋಜನೆಯ ಪ್ರಮುಖ ಉದ್ದೇಶ ಕಾವೇರಿ ನೀರನ್ನು ಸಂಕಷ್ಟದ ಸಂದರ್ಭದಲ್ಲಿ ಸಂಗ್ರಹಿಸಿಟ್ಟುಕೊಂಡು ಸಮರ್ಪಕವಾಗಿ ನಿರ್ವಹಿಸುವುದಾಗಿದೆ. ಯೋಜನೆಯಡಿ 66 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರಲಿದೆ. ಕಾವೇರಿ ನೀರು ಹಂಚಿಕೆ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ವಾರ್ಷಿಕ 177 ಟಿಎಂಸಿ ನೀರು ಬಿಡಬೇಕಿದೆ. ಮಳೆ ಕೊರತೆ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ನೀರಿನ ಲಭ್ಯತೆ ಮತ್ತು ಹರಿವಿನ ನಿರ್ವಹಣೆ ಸವಾಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಕೆದಾಟು ಯೋಜನೆ ನೆರವಾಗಲಿದೆ” ಎಂದು ವಿವರಿಸಿದರು.ಕೆಪಿಎಸ್ ಸಿಗೆ ಹೊಸ ರೂಪ: ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಮಿತಿ ರಚನೆ- ಸಿಎಂ ಡಿಕೆ ಶಿವಕುಮಾರ್

“177 ಟಿಎಂಸಿ ನೀರು ಬಿಡಬೇಕು ಎಂದು ಆದೇಶವಿದೆ. ಮೇಕೆದಾಟಿನಲ್ಲಿ 66 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಂಡರೆ, ಸಂಕಷ್ಟದ ಸಂದರ್ಭದಲ್ಲಿ ನೀರಿನ ಹರಿವನ್ನು ನಿರ್ವಹಿಸಲು ಅನುಕೂಲವಾಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಬಿಡಬೇಕು ಎಂಬುದನ್ನು ಸಮರ್ಪಕವಾಗಿ ನಿರ್ವಹಿಸಬಹುದು. ಹೇಮಾವತಿ, ಹಾರಂಗಿ, ಕಬಿನಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ರೈತರಿಗೂ ಇದರಿಂದ ಅನುಕೂಲವಾಗಲಿದೆ. ಕಾವೇರಿ ಪೂಜೆ ಮಾಡಿ ಪ್ರಾರ್ಥಿಸಿದ್ದೇವೆ. ಯೋಜನೆ ಈಗ ಒಂದು ಹಂತಕ್ಕೆ ಬಂದಿದೆ” ಎಂದು ಹೇಳಿದರು.

ಅರಣ್ಯ ಅನುಮತಿ ಬಳಿಕ ಭೂಸ್ವಾಧೀನ

ಯೋಜನೆಗೆ ಸಂಬಂಧಿಸಿದ ಅರಣ್ಯ ಭೂಮಿಗೆ ಪರ್ಯಾಯ ಜಮೀನು ನೀಡುವ ವಿವರಗಳನ್ನು ಅರಣ್ಯ ಇಲಾಖೆಯ ಪೋರ್ಟಲ್ ನಲ್ಲಿ ದಾಖಲಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಶೀಘ್ರ ಅನುಮತಿ ನೀಡಬೇಕು. ಅನುಮತಿ ದೊರೆತ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.

“ನಾವು ಯಾವೆಲ್ಲ ಜಮೀನುಗಳನ್ನು ಪರ್ಯಾಯವಾಗಿ ನೀಡುತ್ತಿದ್ದೇವೆ ಎಂಬುದನ್ನು ಅರಣ್ಯ ಇಲಾಖೆಯ ಪೋರ್ಟಲ್ ನಲ್ಲಿ ದಾಖಲಿಸುತ್ತೇವೆ. ಅವರು ಕೂಡಲೇ ಅನುಮತಿ ನೀಡಬೇಕು. ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುತ್ತೇವೆ. ಯೋಜನೆಗೆ ಒಟ್ಟಾರೆ 2,500 ಎಕರೆ ಗುರುತಿಸಿದ್ದರೂ, ರೈತರ ಖಾಸಗಿ ಜಮೀನು ಹೋಗುವುದು ಕೇವಲ 500 ಎಕರೆ ಮಾತ್ರ” ಎಂದು ಸ್ಪಷ್ಟಪಡಿಸಿದರು.

“ಮುಂದಿನ ಬಜೆಟ್ ವೇಳೆಗೆ ಕೇಂದ್ರದ ಅರಣ್ಯ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿ ನಾಯಕರೂ ರಾಜಕೀಯ ಬದಿಗಿಟ್ಟು ಸಹಕಾರ ನೀಡಬೇಕು. ಎಲ್ಲರೂ ಒಟ್ಟಾಗಿ ಹೋಗಿ ಯೋಜನೆಗೆ ಅನುಮತಿ ಪಡೆಯೋಣ” ಎಂದು ಮನವಿ ಮಾಡಿದರು.

ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ಬೇಕಾದಷ್ಟು ಜಮೀನು ಕೊಡುತ್ತೇವೆ

ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ರಾಜ್ಯ ಸರಕಾರ ಜಮೀನು ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿರುವ ಕುರಿತು ಕೇಳಿದಾಗ, “ನಾವು ಈಗಾಗಲೇ 100 ಎಕರೆ ಜಮೀನು ನೀಡುವುದಾಗಿ ಹೇಳಿದ್ದೇವೆ. ಇನ್ನೂ ಹೆಚ್ಚಿನ ಜಮೀನು ಬೇಕೆಂದು ಕೇಳಿದ್ದಾರೆ. ಖಂಡಿತವಾಗಿಯೂ ಕೊಡುತ್ತೇವೆ. ಯಾರು ಬೇಡ ಎನ್ನುತ್ತಾರೆ? ಮೊದಲು ಅವರು ಕೆಲಸ ಆರಂಭಿಸಲಿ. ಆ ಬಳಿಕ ಎಷ್ಟು ಜಮೀನು ಬೇಕೋ ಅಷ್ಟನ್ನು ನೀಡುತ್ತೇವೆ” ಎಂದರು.ಕಾಂಗ್ರೆಸ್ ಕಾರ್ಯಕರ್ತರ ಬೆವರಿನ ಕಾಣಿಕೆಯಿಂದಲೇ ಇಂದಿರಾ ಭವನ ನಿರ್ಮಾಣವಾಗಲಿ: ಸಿಎಂ ಡಿ.ಕೆ ಶಿವಕುಮಾರ್

“ಮೊದಲು 100 ಎಕರೆ ಕೇಳಿದಾಗ ನೀಡಲು ಒಪ್ಪಿದ್ದೇವೆ. ಈಗ ಎರಡು ದಿನಗಳ ಹಿಂದೆ 500 ಎಕರೆ ಬೇಕೆಂದು ಕೇಳಿದ್ದಾರೆ. ರಾಜ್ಯ ಸರಕಾರದಿಂದ ಯಾವುದೇ ಸಹಕಾರದ ಕೊರತೆಯಿಲ್ಲ. ಅವರು ಒಳ್ಳೆಯ ಕೆಲಸ ಮಾಡಲಿ, ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ. ಕಳೆದ ಎರಡೂವರೆ-ಮೂರು ವರ್ಷಗಳಿಂದ ಅವರು ಈ ವಿಚಾರ ಪ್ರಸ್ತಾಪಿಸುತ್ತಲೇ ಇದ್ದಾರೆ” ಎಂದು ಹೇಳಿದರು.contribution jk02_new jk02 new

ಎಐಆರ್ ಘಟಕಕ್ಕೆ ವಿವಾದಿತ ಜಮೀನು ನೀಡಲಾಗುತ್ತಿದೆ ಎಂದು ಕೇಳಿದಾಗ, “ಯಾವ ಜಮೀನು ಬೇಕು ಎಂಬುದನ್ನು ಅವರೇ ತೋರಿಸಲಿ. ಯಾವ ಜಮೀನನ್ನು ಭೂಸ್ವಾಧೀನ ಮಾಡಬೇಕು ಎಂದು ಸೂಚಿಸುತ್ತಾರೋ ಅದನ್ನೇ ಸ್ವಾಧೀನಪಡಿಸಿಕೊಡಲು ಸಿದ್ಧರಿದ್ದೇವೆ. ಅವರು ತೋರಿಸಿದ ಜಮೀನನ್ನು ನೀಡಲು ನಮಗೆ ಅಭ್ಯಂತರವಿಲ್ಲ. ಆದರೆ, ಒಂದು ಕಡೆ ಭೂಸ್ವಾಧೀನಕ್ಕೆ ಹೋದಾಗ ರೈತರು ವಿರೋಧ ವ್ಯಕ್ತಪಡಿಸುವ ಪರಿಸ್ಥಿತಿಯೂ ಇದೆ. ಅದನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕಿದೆ” ಎಂದು ಸ್ಪಷ್ಟಪಡಿಸಿದರು.

 

English Summary
Title

Indira Bhavan Mandya, CM DK Shivakumar, Karnataka developmental projects, Mandya Congress office, DK Shivakumar news.

Short Description
Chief Minister DK Shivakumar laid the foundation stone for 'Indira Bhavan' in Mandya during his district visit. Funded entirely through the voluntary financial contributions of party leaders and grassroots workers, the facility is designed to foster collective pride. Highlighting its cultural and political significance, Shivakumar described the upcoming building as a "sacred temple" aimed at uniting and empowering all sections of society rather than just a standard party office. Alongside this landmark foundation, the CM launched 57 vital developmental projects worth ₹1,793 crore to boost regional infrastructure.
Keywords
'Indira Bhavan, built, contribution, sweat, Congress workers, CM D.K. Shivakumar