ಮೈಸೂರು,ಅಕ್ಟೋಬರ್,31,2026 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ನಡುವೆ ಮುನಿಸು ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್ ಬೋಸ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಸುನೀಲ್ ಬೋಸ್, ನಮ್ಮ ತಂದೆ ಕಾಂಗ್ರೆಸ್ ಪಕ್ಷ ಬಿಡಲ್ಲ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಮಹದೇವಪ್ಪರಿಗೆ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಅವರು ಎರಡು ಬಾರಿ ಮಂತ್ರಿ ಆಗಿದ್ದಾರೆ ಎಂದರು.
2028ಕ್ಕೆ ನಂಜನಗೂಡಿನಲ್ಲಿ ಸ್ಪರ್ಧೆ ಎಂಬ ಊಹಾಪೋಹಗಳಿವೆ. ಬಿಜೆಪಿ ಜೆಡಿಎಸ್ ಜೊತೆಗೂಡಿ ಸ್ಪರ್ಧೆ ಎಂಬ ಊಹಾಪೋಹಗಳಿವೆ. ಇದು ಸುಳ್ಳು ಸುದ್ದಿ. ಸದ್ಯಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವ ಲಕ್ಷಣ ಇಲ್ಲ ಎಂದು ಸುನೀಲ್ ಬೋಸ್ ಹೇಳಿದರು.
HC Mahadevappa, will not, leave, Congress party, MP Sunil Bose







