Friday, October 30, 2026

Dasara Wishes

Results 2019 DasraWishes_JK DasraWishes JK
Happy Dasara
Home Crime ಹೆಲಿಕಾಪ್ಟರ್ ಪತನ: ಬೆಂಗಳೂರು ಮೂಲದ ಐವರು ಸಾವು

ಹೆಲಿಕಾಪ್ಟರ್ ಪತನ: ಬೆಂಗಳೂರು ಮೂಲದ ಐವರು ಸಾವು

6 ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ

ಉತ್ತರಾಖಂಡ, ಅಕ್ಟೋಬರ್, 30,2026 (www.justkannada.in): ಲ್ಯಾಂಡಿಂಗ್ ವೇಳೆ  ಓರ್ವ ಪೈಲೆಟ್ ಸೇರಿ 6 ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ  ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆದಿದೆ.

ಚಾಯ್ ಮತ್ತು ಥಾಯಾಂಗ್ ಗ್ರಾಮಗಳ ಸಮೀಪ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಬೆಂಗಳೂರು ಮೂಲದ ಐವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಲಿಕಾಪ್ಟರ್ ಕ್ಯಾಪ್ಟನ್ ಹಿಮಾಂಶು, ಬೆಂಗಳೂರು ಮೂಲದ ಪ್ರತಾಪ್,  ಅರುಣ್. ಶಂಕರ್ ಗೌಡ,  ಕೆ,ಸುಧೀರ್, ಹೆಚ್ ಎಸ್ ನಟರಾಜ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಟ್ರಾನ್ಸ್‌ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಆಗಿದ್ದು, ಹೆಲಿಕಾಪ್ಟರ್​ನಲ್ಲಿ  ಒಂದೇ ಕುಟುಂಬದ ಐದು ಮಂದಿ ಓರ್ವ ಪೈಲಟ್ ಸೇರಿ ಒಟ್ಟು ಆರು ಮಂದಿ ಇದ್ದರು. ಹೆಲಿಕಾಪ್ಟರ್ ಬದರಿನಾಥ ಧಾಮದಿಂದ ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.6 ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ

ಬದರಿನಾಥದಿಂದ ಜೋಶಿ ಮಠಕ್ಕೆ ಹೆಲಿಕಾಪ್ಟರ್ ತೆರಳುತ್ತಿತ್ತು ಎನ್ನಲಾಗಿದೆ. ಹೆಲಿಕಾಪ್ಟರ್ ಪತ್ತೆಗೆ ನಡೆದ ಕಾರ್ಯಾಚರಣೆ ಹೆಲಿಕಾಪ್ಟರ್ ನಿಗದಿತ ಸಮಯಕ್ಕೆ ಸಂಪರ್ಕಕ್ಕೆ ಬಾರದ ಹಿನ್ನೆಲೆಯಲ್ಲಿ ಅದು ನಾಪತ್ತೆಯಾಗಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ದೊರೆತಿತ್ತು. ತಕ್ಷಣವೇ ಪೊಲೀಸರು, ಜಿಲ್ಲಾಡಳಿತ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದೆ

Helicopter jk02_new jk02 new

 

English Summary
Title

Uttarakhand Helicopter Crash: Search Underway After Chopper Carrying 6 Goes Down Near Joshimath

Short Description
A tragic helicopter crash has been reported in Uttarakhand's Chamoli district near Joshimath due to severe weather and heavy snowfall. The Trans Bharat Aviation chopper was returning from Badrinath to Dehradun when it lost contact and crashed near the Hathi Parvat area in Chaien village. A total of six individuals were on board, including one pilot and five pilgrims. Uttarakhand Chief Minister Pushkar Singh Dhami confirmed the incident, stating that low visibility and hostile weather likely caused the mishap. Joint rescue operations by the SDRF, local administration, and the Indian Army are underway to locate the passengers.
Keywords
Helicopter, board, crashes, 6 passengers, Uttarakhand