Friday, October 30, 2026

Dasara Wishes

Happy Dasara
Home Front Page ಇಂದಿನಿಂದ ಹಾಸನಾಂಬೆ ದರ್ಶನಕ್ಕೆ ಅವಕಾಶ: ಪೊಲೀಸರಿಂದ ಬಿಗಿಭದ್ರತೆ, ಕಟ್ಟೆಚ್ಚರ

ಇಂದಿನಿಂದ ಹಾಸನಾಂಬೆ ದರ್ಶನಕ್ಕೆ ಅವಕಾಶ: ಪೊಲೀಸರಿಂದ ಬಿಗಿಭದ್ರತೆ, ಕಟ್ಟೆಚ್ಚರ

ಇಂದಿನಿಂದ ಹಾಸನಾಂಬೆ ದರ್ಶನಕ್ಕೆ ಅವಕಾಶ: ಪೊಲೀಸರಿಂದ ಬಿಗಿಭದ್ರತೆ, ಕಟ್ಟೆಚ್ಚರ

ಹಾಸನ,ಅಕ್ಟೋಬರ್,30,2026 (www.justkannada.in):  ವರ್ಷಕ್ಕೊಮ್ಮೆ ದರ್ಶನ ನೀಡುವ ಪ್ರಸಿದ್ದ ಹಾಸನಾಂಬೆ ಗರ್ಭಗುಡಿಯ ಬಾಗಿಲು ನಿನ್ನೆ ತೆರೆಯಲಾಗಿದ್ದು ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇಂದು ಬೆಳಿಗ್ಗೆ 6 ಗಂಟೆಗೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ಓಪನ್ ಆಗಿದ್ದು  ನವೆಂಬರ್ 10ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿದೆ. ಪ್ರತಿವರ್ಷವೂ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಇಂದು ಸಹ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ.ಇಂದಿನಿಂದ ಹಾಸನಾಂಬೆ ದರ್ಶನಕ್ಕೆ ಅವಕಾಶ: ಪೊಲೀಸರಿಂದ ಬಿಗಿಭದ್ರತೆ, ಕಟ್ಟೆಚ್ಚರ

ಹಾಸನಾಂಬೆ ದರ್ಶನೋತ್ಸವ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ  ವಹಿಸಲಾಗಿದ್ದು, ಭದ್ರತೆಗೆ 2 ಸಾವಿರರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಭದ್ರತಾ ಲೋಪ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ.  ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ.  ಮಧ್ಯರಾತ್ರಿಯಿಂದಲೇ ನಮ್ಮ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದಾರೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.'Hassanambe' jk02_new jk02 new

 

English Summary
Title

'Hassanambe' Darshan begins today; tight security and high alert by police.

Short Description
The doors of the sanctum sanctorum of the renowned Goddess Hasanamba—who is accessible for *darshan* only once a year—were opened yesterday, and public viewing has been permitted starting today. The doors opened at 6:00 AM today, and the public will be able to visit until November 10th. Every year, lakhs of devotees arrive to seek the Goddess's blessings. Today, too, a vast number of devotees have gathered to have *darshan* of Goddess Hasanamba.
Keywords
'Hassanambe', Darshan, begins, today. tight security, police.