Thursday, October 29, 2026

Dasara Wishes

Happy Dasara
Home Front Page ಮುಂದುವರೆದ ಸಿದ್ದರಾಮಯ್ಯ ಮತ್ತು ಹೆಚ್ ಸಿ ಮಹದೇವಪ್ಪ ಮುನಿಸು: ಸಭೆಗೆ ಗೈರು, ಸಮಾವೇಶಕ್ಕೆ ಸಿದ್ದತೆ

ಮುಂದುವರೆದ ಸಿದ್ದರಾಮಯ್ಯ ಮತ್ತು ಹೆಚ್ ಸಿ ಮಹದೇವಪ್ಪ ಮುನಿಸು: ಸಭೆಗೆ ಗೈರು, ಸಮಾವೇಶಕ್ಕೆ ಸಿದ್ದತೆ

ಮುಂದುವರೆದ ಸಿದ್ದರಾಮಯ್ಯ ಮತ್ತು ಹೆಚ್ ಸಿ ಮಹದೇವಪ್ಪ ಮುನಿಸು: ಸಭೆಗೆ ಗೈರು, ಸಮಾವೇಶಕ್ಕೆ ಸಿದ್ದತೆ

ಮೈಸೂರು, ಅಕ್ಟೋಬರ್,29,2026(www.justkannada.in): ಮೈಸೂರು ಭಾಗದ  ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ನಡುವೆ ಮುನಿಸು ಮುಂದುವರೆದಿದೆ.

ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಮೈಸೂರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆಯೂ ಮಹದೇವಪ್ಪ ಅವರು ಸಿದ್ದರಾಮಯ್ಯರನ್ನ ಭೇಟಿಯಾಗದಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಈ ಹಿನ್ನೆಲೆಯಲ್ಲಿ ಉಭಯ ನಾಯಕರು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು, ನವೆಂಬರ್ 26, 27 ರಾಜ್ಯಮಟ್ಟದ ಸಮಾಲೋಚನಾ ಸಮಾವೇಶಕ್ಕೆ ಹೆಚ್ ಸಿ ಮಹದೇವಪ್ಪ  ಅವರು ಸಿದ್ಧತೆ ನಡೆಸಿದ್ದಾರೆ. ದಲಿತ ಸಂಘರ್ಷ ಸಮಿತಿ ಐಕ್ಯತಾ ಹೋರಾಟ ಚಾಲನಾ ಸಮಿತಿ, ಸಂವಿಧಾನ ಜನಾಂದೋಲನ ಸಮಿತಿ ವತಿಯಿಂದ ಈ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು ಹೆಚ್ ಸಿ ಮಹದೇವಪ್ಪ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.ಮುಂದುವರೆದ ಸಿದ್ದರಾಮಯ್ಯ ಮತ್ತು ಹೆಚ್ ಸಿ ಮಹದೇವಪ್ಪ ಮುನಿಸು: ಸಭೆಗೆ ಗೈರು, ಸಮಾವೇಶಕ್ಕೆ ಸಿದ್ದತೆ

ಇತ್ತ ಮತ್ತೊಂದೆಡೆ ಅದೇ ದಿನ ಮೈಸೂರಿನಲ್ಲಿ ಸಂವಿಧಾನ ದಿನ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಸಿದ್ದರಾಮಯ್ಯ ಅವರು ಮೈಸೂರು ವಿಭಾಗದ ಕಾಂಗ್ರೆಸ್ ಶಾಸಕರ ಸಭೆ ನಡೆಸಿದ್ದು ಈ ಸಭೆಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಗೈರಾಗಿದ್ದರು.ಮುಂದುವರೆದ ಸಿದ್ದರಾಮಯ್ಯ ಮತ್ತು ಹೆಚ್ ಸಿ ಮಹದೇವಪ್ಪ ಮುನಿಸು: ಸಭೆಗೆ ಗೈರು, ಸಮಾವೇಶಕ್ಕೆ ಸಿದ್ದತೆ

ರಾಜ್ಯಮಟ್ಟದ ಸಮಾಲೋಚನಾ ಸಮಾವೇಶ ಕುರಿತು ಮಹದೇವಪ್ಪ ಅವರು ನಿರಂತರವಾಗಿ ಸಭೆ ನಡೆಸುತ್ತಿದ್ದರೇ ಮತ್ತೊಂದೆಡೆ ಸಚಿವ ನರೇಂದ್ರಸ್ವಾಮಿ ಅವರೂ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಂವಿಧಾನ ದಿನ ಸಮಾವೇಶದ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ ಸಿದ್ದರಾಮಯ್ಯ, ಹೆಚ್ ಸಿ ಮಹದೇವಪ್ಪ ನಡೆ ತೀವ್ರ ಕುತೂಹಲ ಕೆರಳಿಸಿದೆ.H. C. Mahadevappa jk02_new jk02 new

 

English Summary
Title

Siddaramaiah vs HC Mahadevappa: Is the Mysuru Congress Rift Real?

Short Description
The political rift between Karnataka Former CM Siddaramaiah and Dr. H.C. Mahadevappa continues to stir Mysuru Congress politics. Despite their long-standing AHINDA alliance, tension peaked following Mahadevappa's remarks that the movement belongs to no single individual. Friction intensified over Siddaramaiah's initial omission from the Mysuru Constitution Conference invitations and evolving generational shifts involving their sons, Yathindra and Sunil Bose. While Mahadevappa downplayed the fallout by stating "once a friend, always a friend," local factionalism persists. This internal Congress rivalry could reshape the old Mysuru political landscape.
Keywords
Siddaramaiah, H. C. Mahadevappa, rift continues, Mysore