Sunday, October 25, 2026

Dasara Wishes

Happy Dasara
Home Front Page ಮಾಜಿ ಸಿಎಂ ಸಿದ್ದರಾಮಯ್ಯ ರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಮಾಜಿ ಸಿಎಂ ಸಿದ್ದರಾಮಯ್ಯ ರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಭೆ: ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಿ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ,ಅಕ್ಟೋಬರ್,25,2026 (www.justkannada.in): ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ತಮ್ಮದೇ ಪಕ್ಷದವರೇ ತೊಡಗಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಅಧಿಕಾರಕ್ಕಾಗಿ ಒಬ್ಬರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಈ ಮಟ್ಟದ ರಾಜಕೀಯ ನಡೆಯುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಪರೂಪದ ಬೆಳವಣಿಗೆ. ಅದು ತಮ್ಮದೇ ಪಕ್ಷದವರೇ ತೊಡಗಿದ್ದಾರೆ ಎಂದು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ, ಈ ಷಡ್ಯಂತ್ರ ರೂಪಿಸಿದವರು ಯಾರು ಎಂಬುದನ್ನು ಮೊದಲು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.ಕಬ್ಬಿನ ದರ ನಿಗದಿ ಬಗ್ಗೆ ಸೋಮವಾರ ಸಭೆ: ಹೋರಾಟ ಬಿಟ್ಟು ನಿಮ್ಮ ಕೆಲಸಕ್ಕೆ ತೆರಳಿ-ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಸ್ಟಿಂಗ್‌ ಆಪರೇಷನ್‌ ಗೆ ಸಂಬಂಧಿಸಿದಂತೆ ದೆಹಲಿಯಲ್ಲೂ ಬಂಧನವಾಗಿದೆ. ಜೆಡಿಎಸ್‌ನ ಕೆಲವು ಮುಖಂಡರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಯಾರೋ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಬಂಧನ ನಡೆಸಲಾಗುತ್ತಿದೆ ತಮ್ಮ ಪಕ್ಷದ ವ್ಯಕ್ತಿಗೆ ನೋಟಿಸ್‌ ನೀಡುವ ಸರ್ಕಾರ, ಬೇರೆ ಪಕ್ಷದವರ ವಿರುದ್ಧ ತಕ್ಷಣ ಬಂಧನದ ಕ್ರಮ ಕೈಗೊಳ್ಳುತ್ತದೆ. ಇದು ಕಾಂಗ್ರೆಸ್‌ ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.Conspiracy jk02_new jk02 new

Conspiracy,  finish off, politically, former CM, Siddaramaiah , Union Minister Pralhad Joshi

English Summary
Title

Conspiracy to finish off former CM Siddaramaiah politically – Union Minister Pralhad Joshi

Short Description
Yathindra Siddaramaiah himself has stated that members of his own party are involved in the 'sting operation' case. Union Minister Pralhad Joshi remarked that a conspiracy has been hatched to politically finish off former Chief Minister Siddaramaiah. Speaking to the media today, Union Minister Pralhad Joshi observed that such political maneuvering—aimed at ousting a Chief Minister from power—is a rare occurrence in the history of independent India. He noted that Yathindra Siddaramaiah, the former CM's son, has himself alleged that people from within their own party are behind this. Joshi demanded that the individuals who orchestrated this conspiracy be identified and that appropriate action be taken against them.
Keywords
Conspiracy, finish off, politically, former CM, Siddaramaiah, Union Minister Pralhad Joshi