Sunday, October 25, 2026

Dasara Wishes

Happy Dasara
Home Front Page ಉದ್ಯೋಗಾವಕಾಶಗಳಿಂದ ಕನ್ನಡಿಗರಿಗೆ ವಂಚಿಸುವ ಖಾಸಗಿ ಕಂಪನಿಗಳ ವಿರುದ್ದ ಸೂಕ್ತ ಕ್ರಮ – ಸಿಎಂ ಡಿಕೆ ಶಿವಕುಮಾರ್

ಉದ್ಯೋಗಾವಕಾಶಗಳಿಂದ ಕನ್ನಡಿಗರಿಗೆ ವಂಚಿಸುವ ಖಾಸಗಿ ಕಂಪನಿಗಳ ವಿರುದ್ದ ಸೂಕ್ತ ಕ್ರಮ – ಸಿಎಂ ಡಿಕೆ ಶಿವಕುಮಾರ್

ಉದ್ಯೋಗಾವಕಾಶಗಳಿಂದ ಕನ್ನಡಿಗರಿಗೆ ವಂಚಿಸುವ ಖಾಸಗಿ ಕಂಪನಿಗಳ ವಿರುದ್ದ ಸೂಕ್ತ ಕ್ರಮ – ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್,25,2026 (www.justkannada.in):  ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಉದ್ಯೋಗಾವಕಾಶಗಳಿಂದ ವಂಚಿಸುತ್ತಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಯುವತಿಯೊಬ್ಬರು  ಬೆಂಗಳೂರಿನ ಕೆಲವು ಮಾಹಿತಿ ತಂತ್ರಜ್ಞಾನ ಕಂಪನಿಗಳು ಕನ್ನಡವನ್ನು ಮಾತೃಭಾಷೆಯೆಂದು ನಮೂದಿಸುವ ಅಭ್ಯರ್ಥಿಗಳಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು.

ಈ ವಿಡಿಯೋ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃ ಭಾಷೆ ಹೊಂದಿರುವ ವರನ್ನು ಉದ್ಯೋಗಾವಕಾಶಗಳಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡಿಗರ ಹಕ್ಕು, ಗೌರವ ಮತ್ತು ಉದ್ಯೋಗಾವಕಾಶ ಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.ನಂದಿಧ್ವಜ ಪೂಜೆ ವೇಳೆ ಮಂತ್ರಿಗಳಿಗೆ ಅವಕಾಶ ನಿರಾಕರಣೆ: ವಿಚಾರಣೆ ನಡೆಸಿ ವರದಿಗೆ ಸಿಎಂ ಡಿಕೆಶಿ ಆದೇಶ

ಬೆಂಗಳೂರನ್ನು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಗುರುತಿಸುತ್ತಿದ್ದು, ಕನ್ನಡಿಗರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ಸರ್ಕಾರಕ್ಕೆ ಅಪಾರ ಹೆಮ್ಮೆಯಿದೆ. ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಉದ್ಯೋಗಾವಕಾಶಗಳಿಂದ ವಂಚಿಸುತ್ತಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.  ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಬದ್ಧ ಎಂದು ತಿಳಿಸಿದ್ದಾರೆ.action jk02_new jk02 new

 

English Summary
Title

Appropriate action against private companies that deprive Kannadigas of job opportunities – CM DK Shivakumar

Short Description
CM DK Shivakumar has issued a warning, stating that appropriate action will be taken if any private organization is found to be deliberately depriving Kannadigas of employment opportunities. A young woman had posted a video on social media alleging that certain Information Technology (IT) companies in Bengaluru are denying jobs to candidates who list Kannada as their mother tongue. Responding to this video on Twitter, CM DK Shivakumar expressed regret over complaints regarding the unfair treatment of Kannadigas in securing job opportunities within Bengaluru's IT sector. He stated that the government has taken the allegation—that individuals with Kannada as their mother tongue are being sidelined—very seriously. He further asserted that the government will not, under any circumstances, allow the rights, dignity, and employment opportunities of Kannadigas in Karnataka to be disregarded.
Keywords
action, against, private companies, deprive, Kannadigas, job opportunities, CM DK Shivakumar