ಬೆಂಗಳೂರು,ಅಕ್ಟೋಬರ್,23,2026 (www.justkannada.in): ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್ , ಸಚಿವ ಯತೀಂದ್ರರ ಜೊತೆ ನಾನು ಮಾತನಾಡುತ್ತೇನೆ. ಯಾರಾದರೂ ಭಾಗಿಯಾಗಿದ್ದರೇ ಶೋಕಾಸ್ ನೋಟಿಸ್ ಕೊಡುತ್ತೇವೆ. ಸ್ಟಿಂಗ್ ಆಪರೇಷನ್ ನಲ್ಲಿ ಭಾಗಿಯಾಗಿದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ಮಾತನಾಡಿದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ತಂದೆಯನ್ನ ತೆಜೋವಧೆ ಮಾಡಿ ಬ್ಲ್ಯಾಕ್ ಮೇಲ್ ಗೆ ಪ್ರಯತ್ನ ಮಾಡಲಾಗಿದೆ. ಪುತ್ತೂರು ಟಿಕೆಟ್ ಗಾಗಿ ಪ್ರಯತ್ನಿಸಿದ್ದ ಮಹಿಳೆ ಇದ್ದಾರೆ, ಆ ಮಹಿಳೆ ನಮ್ಮ ಪಕ್ಷದವರು. ಸ್ಟಿಂಗ್ ಮಾಡಿ ಟಿಕೆಟ್ ಗೆ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ ಎಂದಿದ್ದರು.
Action, taken , involvement, sting operation case, proven , B.K. Hariprasad






