Thursday, October 22, 2026

Dasara Wishes

Happy Dasara
Home Front Page ಸಿಎಂ ಪತ್ನಿಯಿಂದ ಪುಷ್ಪಾರ್ಚನೆ: ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲು- ಶಾಸಕ ಶ್ರೀವತ್ಸ ಟೀಕೆ

ಸಿಎಂ ಪತ್ನಿಯಿಂದ ಪುಷ್ಪಾರ್ಚನೆ: ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲು- ಶಾಸಕ ಶ್ರೀವತ್ಸ ಟೀಕೆ

ಸಿಎಂ ಪತ್ನಿಯಿಂದ ಪುಷ್ಪಾರ್ಚನೆ: ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲು- ಶಾಸಕ ಶ್ರೀವತ್ಸ ಟೀಕೆ

ಮೈಸೂರು,ಅಕ್ಟೋಬರ್,22,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವಾಗ  ವೇದಿಕೆಯ ಮೇಲೆ ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿಕೆ ಶಿವಕುಮಾರ್ ಅವರ ಪತ್ನಿಯೂ ಪುಷ್ಪಾರ್ಚನೆ ಮಾಡಿದ ಹಿನ್ನೆಲೆಯಲ್ಲಿ  ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ್ದಾರೆ. ಮೈಸೂರು ಮಹಾರಾಣಿಯರು ಕೂಡ ಪುಷ್ಪಾರ್ಚನೆ ಮಾಡಲು ವೇದಿಕೆ ಹತ್ತುತ್ತಿರಲಿಲ್ಲ. ಸಿಎಂ ಪತ್ನಿಗೆ ಏನು ಪ್ರೋಟೋ ಕಾಲ್ ಇದೆ  ಅವರು ಯಾಕೆ ಪುಷ್ಪಾರ್ಚನೆ ಮಾಡಿದರು? ಅವರನ್ನು ತಡೆಯುವ ಶಕ್ತಿ ಡಿಸಿಗೆ ಇರಲಿಲ್ವಾ ? ಎಂದು ಸಿಎಂ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾಡಳಿತದ  ನಡೆಗೆ ಶಾಸಕ ಶ್ರೀವತ್ಸ ವಾಗ್ದಾಳಿ ನಡೆಸಿದರು.ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ

ಮೈಸೂರು ದಸರಾದಲ್ಲಿ ಇಡೀ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಒಂದು ಸಚಿವರನ್ನು ತಡೆಯೋದು. ಮತ್ತೊಂದು ಕಡೆ ಪುಷ್ಪಾರ್ಚನೆಗೆ ಬೇರೆಯವರನ್ನು ಬಿಟ್ಟುಕೊಳ್ಳೋದು. ಡಿಜಿಪಿ ಸಲೀಂ ಕೆಳಗಡೆ ನಿಂತಿದ್ದಾರೆ. ಮೈಸೂರು ಕಮಿಷನರ್  ವೇದಿಕೆಯ ಮೇಲೆ ಪುಷ್ಪಾರ್ಚನೆ ಮಾಡಿದ್ದಾರೆ.  ಮುಸ್ಲಿಂ ಅಂತ ಅವರನ್ನು ವೇದಿಕೆಗೆ ಬಿಡಲಿಲ್ವಾ ?. ದಸರಾದಲ್ಲಿ ಅವರಿಗೆ ಹೇಗೆ ಬೇಕು  ಹಾಗೆ ಶಿಷ್ಟಾಚಾರ ಮಾಡಿಕೊಂಡಿದ್ದಾರೆ. ಇದನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.CM’s wife jk02_new jk02 new

CM’s wife, Jamboo savari, MLA Srivatsa, criticizes.

English Summary
Title

Mysuru Dasara Protocol Row: MLA Srivatsa Slams CM’s Wife's Presence at Jamboo Savari

Short Description
BJP MLA T.S. Srivatsa strongly criticized the protocol management at the 2026 Mysuru Dasara Jamboo Savari. The controversy erupted after Chief Minister Siddaramaiah’s wife, Parvathi, was reportedly allowed onto the official stage to offer floral tributes (pushparchane) to Goddess Chamundeshwari. Srivatsa alleged severe protocol violations and personal disrespect regarding seating arrangements. He condemned the sidelining of elected representatives while non-official family members received VVIP treatment during the historic procession. This incident has sparked intense political debate over state festival traditions.
Keywords
CM’s wife, Jamboo savari, MLA Srivatsa, criticizes.