ಬೆಂಗಳೂರು, ಅಕ್ಟೋಬರ್,22,2026 (www.justkannada.in): ಮೈಸೂರು ದಸರಾ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರಿಗೆ ಪೊಲೀಸ್ ಅಧಿಕಾರಿ ತಡೆಯೊಡ್ಡಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಒಬ್ಬ ಹಿರಿಯ ಅಧಿಕಾರಿಗೆ ಮಂತ್ರಿಗಳ ಬಗ್ಗೆ ಗೊತ್ತಿಲ್ಲವೇ? ದಸರಾದಲ್ಲಿ ದಲಿತ ಸಚಿವರನ್ನ ತಡೆಯುವ ಕೆಲಸ ಆಗಿದೆ. ಸಿಎಂ ಡಿಕೆ ಶಿವಕುಮಾರ್ ಹೇಳಿದ ಮೇಲೆ ಬಿಟ್ಟಿದ್ದಾರೆ. ಸರ್ಕಾರ ಅಷ್ಟು ವೀಕ್ ಆಗಿದ್ಯಾ? ಎಂದು ಪ್ರಶ್ನಿಸಿದರು.
ಇನ್ನು ಆರ್ ಎಸ್ ಎಸ್ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತು ಬಗ್ಗೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಆರ್ ಎಸ್ ಎಸ್ ವಿಚಾರದಲ್ಲಿ ಹೆಚ್ಚೇನೂ ಹೇಳಬೇಕಿಲ್ಲ 100 ವರ್ಷದಲ್ಲಿ ನಡೆದುಕೊಂಡು ಬಂದ ಹಾದಿ ಇದೆ. ಅವರು ನಡೆದು ಬಂದ ಹಾದಿಯಲ್ಲೇ ಸರ್ಕಾರ ಕೂಡ ಸ್ಪಂದಿಸಬೇಕು. ಯಾವುದೇ ಸರ್ಕಾರ ಒಬ್ಬ ವ್ಯಕ್ತಿ ಬದಲಾದ ತಕ್ಷಣ ವ್ಯವಸ್ಥೇಯೇ ಬದಲಾಗುತ್ತದೆ ಅಂತಲ್ಲ ಪ್ರಿಯಾಂಕ್ ಖರ್ಗೆ ಅವರೇ ಎಂದು ಟಾಂಗ್ ಕೊಟ್ಟರು.






