Thursday, October 22, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ದಸರಾ ಸಂಭ್ರಮದಲ್ಲಿ ಕರಾಳ ಛಾಯೆ: ಪೊಲೀಸ್ ಲಾಠಿ ಏಟಿಗೆ 4 ವರ್ಷದ ಮಗು ತೀವ್ರ ಗಾಯ: ...

ದಸರಾ ಸಂಭ್ರಮದಲ್ಲಿ ಕರಾಳ ಛಾಯೆ: ಪೊಲೀಸ್ ಲಾಠಿ ಏಟಿಗೆ 4 ವರ್ಷದ ಮಗು ತೀವ್ರ ಗಾಯ:  ICU ನಲ್ಲಿ ಹೋರಾಟ

ದಸರಾ ಸಂಭ್ರಮದಲ್ಲಿ ಕರಾಳ ಛಾಯೆ: ಪೊಲೀಸ್ ಲಾಠಿ ಏಟಿಗೆ 4 ವರ್ಷದ ಮಗು ತೀವ್ರ ಗಾಯ: ICU ನಲ್ಲಿ ಹೋರಾಟ

ಮೈಸೂರು, ಅಕ್ಟೋಬರ್,22,2026 (www.justkannada.in): ವಿಶ್ವವೇ ಬೆರಗುಗಣ್ಣಿನಿಂದ ನೋಡುವ ನಮ್ಮ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ವೈಭವದ ನಡುವೆಯೇ ಮನಕಲಕುವ ಘಟನೆಯೊಂದು ನಡೆದಿದೆ.

ಹೈವೇ ಸರ್ಕಲ್ ಬಳಿ ಜನಸಾಗರದ ನಡುವೆ ಪೋಷಕರ ಬೆರಳು ಹಿಡಿದು ದಸರಾ ನೋಡಲು ಬಂದಿದ್ದ 4 ವರ್ಷದ ಪುಟ್ಟ ಕಂದನ ತಲೆಗೆ ಲಾಠಿ ಪೆಟ್ಟು ಬಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಈಗ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ : ಜಂಬೂಸವಾರಿ ನೋಡಿ ಕಣ್ತುಂಬಿಕೊಡ ಜನರು

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅವರ ಆರೋಪದ ಪ್ರಕಾರ ನಿನ್ನೆ ಸಂಜೆ ಜಂಬೂಸವಾರಿ ಮೆರವಣಿಗೆ ವೇಳೆ ಹೈವೇ ಸರ್ಕಲ್ ಬಳಿ ಜನದಟ್ಟಣೆ ನಿಯಂತ್ರಿಸುತ್ತಿದ್ದ ಪೊಲೀಸರು ಏಕಾಏಕಿ ಲಾಠಿ ಬೀಸಿದ್ದಾರೆ. ಆ ವೇಳೆ ಪಕ್ಕದಲ್ಲೇ ನಿಂತಿದ್ದ ಪುಟ್ಟ ಮಗುವಿನ ಮೃದು ತಲೆಗೆ ಲಾಠಿಯ ತುದಿ ಬಡಿದಿದೆ.

ಏಟಿನ ರಭಸಕ್ಕೆ ಮಗುವಿನ ತಲೆಯಿಂದ ರಕ್ತ ಚಿಮ್ಮಿದೆ. ಗಾಬರಿಗೊಂಡ ಪೋಷಕರು ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಸದ್ಯ ಮಗುವಿಗೆ ತಲೆಗೆ ಗಂಭೀರ ಗಾಯವಾಗಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ. ಮಗುವಿನ ತಲೆಗೆ ಹೊಲಿಗೆ ಹಾಕಿರುವ ಹೃದಯ ವಿದ್ರಾವಕ ಫೋಟೋ ಈಗ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ.ದಸರಾ ಸಂಭ್ರಮದಲ್ಲಿ ಕರಾಳ ಛಾಯೆ: ಪೊಲೀಸ್ ಲಾಠಿ ಏಟಿಗೆ 4 ವರ್ಷದ ಮಗು ತೀವ್ರ ಗಾಯ: ICU ನಲ್ಲಿ ಹೋರಾಟ

“ದಸರಾ ನೋಡಲು ಕರೆದುಕೊಂಡು ಬಂದೆವು, ಆದರೆ ಮಗು ರಕ್ತದಲ್ಲಿ ಬಿದ್ದಿದ್ದನ್ನು ನೋಡಲಾಗಲಿಲ್ಲ. ಪುಟ್ಟ ಮಗುವಿಗೆ ಲಾಠಿ ಬೀಸಬೇಕಿತ್ತಾ?” ಎಂದು ಮಗುವಿನ ತಾಯಿ ಕಣ್ಣೀರು ಹಾಕುತ್ತಾ ಪ್ರಶ್ನಿಸಿದ್ದಾರೆ.

ಇದು ಆಕಸ್ಮಿಕವೋ ಅಥವಾ ಪೊಲೀಸರ ನಿರ್ಲಕ್ಷ್ಯವೋ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಈ ಸಂಬಂಧ ಮಗುವಿನ ಕುಟುಂಬಸ್ಥರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.festivities jk02_new jk02 new

ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು ದಸರಾ ಸಂಭ್ರಮದ ನಡುವೆ ಅಮಾಯಕ ಕಂದನ ರೋದನ ಎಲ್ಲರ ಮನಸ್ಸನ್ನು ಕಲಕಿದೆ.

 

English Summary
Title

Dark shadow over Dasara festivities: 4-year-old child severely injured by police lathi blow; fighting for life in ICU.

Short Description
Amidst the grandeur of the Mysuru Dasara 'Jambu Savari'—a state festival that draws the gaze of the entire world in awe—a heart-wrenching incident has occurred. Near the Highway Circle, amidst a massive crowd, a four-year-old child—who had come to witness the Dasara festivities while holding his parents' hands—was struck on the head by a *lathi* (baton). Left lying in a pool of blood, the child is now battling for his life in the Intensive Care Unit (ICU) of a hospital.
Keywords
Mysore Dasara, festivities, child, injured, police lathi blow, ICU