ಮೈಸೂರು,ಅಕ್ಟೋಬರ್,21,2026 (www.justkannada.in): ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಕೆಲವೇ ಕ್ಷಣಗಳಲ್ಲಿ ಚಾಲನೆ ಸಿಗಲಿದ್ದು ಕ್ಯಾಪ್ಟನ್ ಪ್ರಶಾಂತ ಆನೆಗೆ ಅಂಬಾರಿ ಕಟ್ಟುವ ಕಾರ್ಯ ನೇರವೇರುತ್ತಿದೆ.
ಇದೇ ಮೊದಲ ಬಾರಿಗೆ ಪ್ರಶಾಂತ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಜಂಬೂಸವಾರಿ ಮೆರವಣಿಗೆಯಲ್ಲಿಸಾಗಲು ಸಿದ್ದನಾಗಿದ್ದು ಅಂತಿಮ ಸಿದ್ದತೆ ನಡೆಯುತ್ತಿದೆ.
4.10ರ ಶುಭಮೀನ ಲಗ್ನದಲ್ಲಿ ಸಿಎಂ ಡಿಕೆ ಶಿವಕುಮಾರ್ ಅಂಬಾರಿಯಲ್ಲಿ ವೀರಾಜಮಾನಳಾಗುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರವಣಿಗೆ ಆರಂಭಗೊಂಡಿದ್ದು ಎಲ್ಲರ ಮನಸೂರೇಗೊಳಿಸುತ್ತಿವೆ.
Mysore Dasara 2026- Jambu savari, Ambari, Prashantha






