Tuesday, October 20, 2026

Dasara Wishes

Happy Dasara
Home Front Page ರೈತರ ಹೋರಾಟ: ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದೇವೆ-ಸಿಎಂ ಡಿಕೆ ಶಿವಕುಮಾರ್

ರೈತರ ಹೋರಾಟ: ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದೇವೆ-ಸಿಎಂ ಡಿಕೆ ಶಿವಕುಮಾರ್

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಅಕ್ಟೋಬರ್,20,2026 (www.justkannada.in): ರಾಜ್ಯದಲ್ಲಿ ಕಬ್ಬುಬೆಳೆಗಾರರಿಂದ  ಹೋರಾಟ ನಡೆಸುತ್ತಿರುವ ಸಂಬಂಧ ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ಕೇಳಿದ್ದೇವೆ. ಸಮಯ ನಿಗದಿಯಾಗಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ರೈತರ ಸಮಸ್ಯೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸಿದ್ದೇನೆ. ರೈತರು, ಸಕ್ಕೆರೆ ಕಾರ್ಖಾನೆಯವರ ಜತೆ ಪ್ರತ್ಯೇಕವಾಗಿ ಮಾತಾಡಬೇಕಿದೆ. ಕೇಂದ್ರ ಸಚಿವರು ಒಳ್ಳೆಯ ಕೆಲಸ ಮಾಡಿದ್ದಾರೆ.  ಅವರ ಜತೆಗೂ ಚರ್ಚೆ ನಡೆಸಿದ್ದೇವೆ.  ಕಬ್ಬು ಇದ್ರೆ ಕಾರ್ಖಾನೆ. ಕಾರ್ಖಾನೆ ನಷ್ಟ ಆಗದಿದ್ದರೇ ಅವರು ಉಳಿಯುತ್ತಾರೆ.  ಹೀಗಾಗಿ ಇದು ಎಲ್ಲರ ಬದುಕಿನ ಪ್ರಶ್ನೆಯಾಗಿದೆ ಎಂದರು.

ರೈತರು ಶುಗರ್ ಫ್ಯಾಕ್ಟರಿ ಹಾಗೂ ಸರ್ಕಾರದ ಸಮಸ್ಯೆ ಇದೆ.  ಈಗ ದಿನಾಂಕ ನಿಗದಿಪಡಿಸಿ ಸಭೆಯನ್ನ ನಡೆಸುತ್ತೇವೆ.  ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಮಾತು ಕೊಟ್ಟು ಬಂದಿದ್ದೆ ಕೇಂದ್ರ ಸಚಿವರು ಸಂಸದರು   ಆ ಭಾಗದ ಮಂತ್ರಿಗಳಿಗೆ ಆಹ್ನಾನ ನೀಡಿದ್ದೇವೆ ಎಂದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

 

ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ಬೆಲೆ ನಿಗದಿ ಮಾಡಬೇಕು. ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಪ್ರತಿ ಕೆಜಿಗೆ 60 ರೂಪಾಯಿಗೆ ಹೆಚ್ಚಿಸಬೇಕು ಮತ್ತು ಕಬ್ಬಿನಿಂದ ತಯಾರಿಸುವ ಎಥೆನಾಲ್ ಖರೀದಿಗೆ ಸಂಬಂಧಿಸಿದ ನೀತಿಯನ್ನು ಪರಿಶೀಲಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿವೆ.Farmers jk02_new jk02 new

Farmers,  Protest,  appointment, meet, PM Modi , CM DK Shivakumar

English Summary
Title

Karnataka CM DK Shivakumar Seeks PM Modi Appointment Over Farmers Protest

Short Description
Karnataka CM D.K. Shivakumar has sought an appointment with PM Narendra Modi to address the intensifying sugarcane farmers' protest and drought crisis. Leading an all-party delegation, Shivakumar urged opposition leaders to join the push for central intervention. Striking farmers in North Karnataka have halted the crushing season through blockades and padayatras to demand better pricing. While appealing to growers to call off agitations for dialogue, the state government outlined key demands for the PM. These include revising the sugar Minimum Selling Price (MSP), increasing cane-based ethanol rates, and restoring the Fair and Remunerative Price (FRP) base recovery rate to 9.50%.
Keywords
Farmers, Protest, appointment, meet, PM Modi, CM DK Shivakumar