ಬೆಂಗಳೂರು,ಅಕ್ಟೋಬರ್,17,2026 (www.justkannada.in): ಸ್ಟಿಂಗ್ ಆಪರೇಷನ್ ಪ್ರಕರಣದ ಕಿಂಗ್ ಪಿನ್ ಅನ್ನು ಬಂಧಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮನವಿ ಸಲ್ಲಿಸಿದರು.
ನೃಪತುಂಗ ರಸ್ತೆಯಲ್ಲಿರುವ ಡಿಜಿ&ಐಜಿಪಿ ಕಚೇರಿಗೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರ ಜೊತೆ ಚರ್ಚಿಸಿ ಮನವಿ ಸಲ್ಲಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಎಲ್ಲಾ ವಿಷಯಗಳ ಬಗ್ಗೆ ಡಿಜಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಕಿಂಗ್ ಪಿನ್ ಬಗ್ಗೆ ಸಂಪೂರ್ಣ ಮಾಹಿತಿ ಡಿಜಿ&ಐಜಿಪಿಗೆ ಸಲ್ಲಿಸಿದ್ದೇನೆ ಎಂದರು.
ಸಿದ್ದರಾಮಯ್ಯ ನವರ ಹೆಸರು ಹಾಳು ಮಾಡುವುದಕ್ಕೆ ಸ್ಟಿಂಗ್ ಮಾಡಿದ್ದಾರೆ ಸಿದ್ದರಾಮಯ್ಯನವರು ಅದರಲ್ಲಿ ಭಾಗಿಯಾಗಿಲ್ಲ ಕೇಸ್ ನ ಕಿಂಗ್ ಪಿನ್ ನಿವೃತ್ತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಕಿಂಗ್ ಪಿನ್ ಜೊತೆ ಇಬ್ಬರು ಮೂವರು ನಾಯಕರು ಚರ್ಚಿಸಿದ್ದಾರೆ ಸಿದ್ದರಾಮಯ್ಯನವರಿಗಾದ್ರೂ ರಕ್ತ ಕುದಿಯುತ್ತಿಲ್ವಾ ಎಂದು ಹೆಚ್ ಡಿಕೆ ಹೇಳಿದರು.
Sting Operation, Union Minister, HDK, DG & IGP, arrest, kingpin






