Saturday, October 17, 2026

Dasara Wishes

Happy Dasara
Home Front Page ಹೆಣ್ಣುಮಕ್ಕಳಿಗೆ ಅನ್ಯಾಯ ಆಯಿತು ಎಂದಾಗ ಒಂದು ಬಾರಿಯಾದರು ಹಾಸನ ಎಸ್ಪಿ ಕಚೇರಿಗೆ ಹೋಗಿ ಕುಳಿತಿದ್ದಾರಾ-ಪ್ರಿಯಾಂಕ್‌ ಖರ್ಗೆ

ಹೆಣ್ಣುಮಕ್ಕಳಿಗೆ ಅನ್ಯಾಯ ಆಯಿತು ಎಂದಾಗ ಒಂದು ಬಾರಿಯಾದರು ಹಾಸನ ಎಸ್ಪಿ ಕಚೇರಿಗೆ ಹೋಗಿ ಕುಳಿತಿದ್ದಾರಾ-ಪ್ರಿಯಾಂಕ್‌ ಖರ್ಗೆ

ಹೆಣ್ಣುಮಕ್ಕಳಿಗೆ ಅನ್ಯಾಯ ಆಯಿತು ಎಂದಾಗ ಒಂದು ಬಾರಿಯಾದರು ಹಾಸನ ಎಸ್ಪಿ ಕಚೇರಿಗೆ ಹೋಗಿ ಕುಳಿತಿದ್ದಾರಾ-ಪ್ರಿಯಾಂಕ್‌ ಖರ್ಗೆ

ಮೈಸೂರು,ಅಕ್ಟೋಬರ್‌,೧೬(www.justkannada.in) ಸ್ಟಿಂಗ್ ಆಪರೇಷನ್ ಸಂಬಂಧ ಯಾವುದೋ ಇಬ್ಬರು ಜೆಡಿಎಸ್ ಹುಡುಗರ ಹೆಸರು ಕೇಳಿ ಬಂತು ಎಂದಾಕ್ಷಣ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ  ಹೋಗಿ ಕೂರುವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಒಂದು ಬಾರಿಯಾದರು ಹಾಸನ ಎಸ್ಪಿ ಕಚೇರಿಗೆ ಹೋಗಿ ಕುಳಿತಿದ್ದಾರ ಹೆಣ್ಣುಮಕ್ಕಳಿಗೆ ಅನ್ಯಾಯ ಆಯಿತು ಎಂದಾಗ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.

ದಸರಾ ಅಂಗವಾಗಿ ಪೊಲೀಸ್ ಬ್ಯಾಂಡ್ ಗೆ ಚಾಲನೆ ನೀಡಲು ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು, ಗಾಂಧಿನಗರದ ಅಂಬೇಡ್ಕರ್ ಪ್ರತಿಮೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾಕಷ್ಡು ಹೆಣ್ಣು ಮಕ್ಕಳಿಗೆ ಅನ್ಯಾಯ ಆಯಿತು. ಒಂದು ಬಾರಿಯಾದರೂ ಹಾಸನ ಎಸ್ಪಿ ಕಚೇರಿಗೆ ಹೋಗಿ ಕುಳಿತಿದ್ದಾರ? ನಮ್ಮ ಮನೆಯ ಮಗ ಸಾಕಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದ ದಯವಿಟ್ಟು ಕ್ಷಮಿಸಿ ಎಂದು ಯಾವತ್ತಾದರೂ ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳನ್ನು  ಕೇಳಿದ್ದಾರ  ಎಂದು ತಿರುಗೇಟು ನೀಡಿದರು.

 

ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಯಾರೂ ಮಾತನಾಡಬಾರದು ಎಂದು ನ್ಯಾಯಾಲಯದಲ್ಲಿ ಸ್ಟೇ ತಂದರು.  ಈಗ ಯಾಕೆ ಬೇರೆಯವರ ಬಗ್ಗೆ ಮಾತನಾಡಬೇಕು ಎಂದು ಪ್ರಶ್ನಿಸಿದರು.

ನಿಮ್ಮ ಮನೆಯವರು ತಪ್ಪು ಮಾಡಿದರೆ ಯಾರು ಏನೂ ಮಾತನಾಡಬಾರದು, ಯಾರೋ ಫಾಲ್ಸ್ ವೀಡಿಯೋ ಬಿಟ್ಟರು ಎಂದಾಕ್ಷಣ,  ಪ್ರಧಾನಿ ನರೇಂದರಮ್ರ ಮೋದಿವರೆಗೂ ಕಂಪ್ಲೇಂಟ್ ಕೊಡಬಹುದು. ನನ್ನ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ವೈಯಕ್ತಿಕ ನಿಂದನೆ ಮಾಡಬಹುದು. ನಿಮಗೆ ಯಾವ  ನೈತಿಕತೆ ಇದೆ ಕುಮಾರಸ್ವಾಮಿಯವರೇ ಎಂದು ಕೇಳಿದರು.

ಸ್ಟಿಂಗ್ ಆಪರೇಷನ್ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದ್ದು ಯಾವುದೇ ಉನ್ನತ ಮಟ್ಟದ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರಿಯಾಂಕ ಖರ್ಗೆ ಉತ್ತರಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಗ್ಗೆ ಮಾತನಾಡಿ ಅವರ ಘನತೆಗೆ, ಕುರ್ಚಿಗೆ ಅವರೇ ಧಕ್ಕೆ ತಂದು ಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೆಪಿಎಸ್ಸಿ ಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾನೇ ಮಾಸ್ಟರ್ ಮೈಂಡ್ ಎಂದು ಹೇಳಿದ್ದರು. ನನ್ನ ವಿಕೆಟ್ ಬೀಳುತ್ತದೆ ಎಂದರು. ಈಗ ಹೊಸ ವಿಚಾರ ತರುತ್ತಿದ್ದಾರೆ ಎಂದು ಕಿಡಿಕಾರಿದರು.When injustice occurred against women priyank

ದೆಹಲಿಯಲ್ಲಿ ಮಾಡಲು ಏನೂ ಕೆಲಸ ಇಲ್ಲ, ರಾಜ್ಯಕ್ಕೆ ಬರಬೇಕೆಂದು ಕಾಯುತ್ತಿದ್ದಾರೆ.  ಇಲ್ಲಿ ನಾಯಕತ್ವ ಸಿಗುತ್ತಿಲ್ಲ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಅಸೂಹೆಗೆ ಮದ್ದಿಲ್ಲ,ಹಾಗಾಗಿ ಏನೊ ಒಂದು ಹೇಳಬೇಕು ಅದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಿನ್ನೆ ಪೊಲೀಸ್ ಕಮೀಷನರ್ ಕಚೇರಿ ಬಳಿಗೆ ಹೋಗಿ  ಊರವರನ್ನೆಲ್ಲಾ ಬಾಯಿಗೆ ಬಂದಾಗೆ ಬೊಯ್ಯೋದು ಬಿಟ್ಟು ನಮ್ಮ ಬಳಿ ಇಂತಹ ದಾಖಲೆ ಇದೆ ಎಂದು ನೀಡಿದ್ದರೆ ಮುಗಿದೇ ಹೋಗುತ್ತಿತ್ತು.  ವಿಚಾರಣೆಗೆ ಅವರ ಬಲಗೈ ಬಂಟರು, ಸಮೀಪದವರನ್ನು ಕರೆದರೆ ಇವರಿಗೇನಾಯಿತು. ನಾವೇನು ಇವರ ಕಡೆಯವರನ್ನು ಬಂಧಿಸಿದ್ದೇವ? ತನಿಖೆ ಮಾಡಬೇಕಾದರೆ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ‌ ಅದಕ್ಕೆ ಹೀಗೆ ಮಾಡಿ ಹಾಗೆ ಮಾಡಿ ಎಂದರೆ ಮಾಡಲು ಆಗುತ್ತದ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರ ಬಳಿ ಗೃಹ ಸಚಿವರ ಪಾತ್ರ ಇದಿಯಾ, ಸಿಎಂ, ಮಾಜಿ ಸಿಎಂ ಅವರ ಪಾತ್ರ ಇದಿಯಾ ಅಥವಾ ಬೇರೆಯವರ ಪಾತ್ರ ಇದಿಯಾ  ಎಂಬುದರ  ಬಗ್ಗೆ ದಾಖಲೆ ಇದ್ದರೆ ಕೊಡಲಿ. ಅದು ಬಿಟ್ಟು ತನಿಖೆಗೆ ಅವರನ್ನು ಕರೆಸಿಲ್ಲ ಇವರನ್ನು ಕರೆಸಿಲ್ಲ ಎನ್ನುತ್ತಾರಲ್ಲ, ನಾವು ಯಾರನ್ನು ಕರೆಸಿಲ್ಲ ಎಂಬುದು ಇವರಿಗೆ ಗೊತ್ತ,  ಸಾಕ್ಷಿ, ಆಧಾರ ಇಲ್ಲದೆ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಬೇಕು. ಕುರ್ಚಿಯ ಘನತೆ ನಿಮಗೆ ಇಲ್ಲ ಎಂದ ಮೇಲೆ ನಮ್ಮಂತವರು ನಿಮಗೆ ಯಾಕೆ ಮರ್ಯಾದರ ಕೊಡಬೇಕು ಎಂದು ಕೇಳಿದರು.

ಈ ಮುಂಚೆ  ಬಿಜೆಪಿಯವರಿಗೆ ಅಸ್ಥಿತ್ವ ಉಳಿಸಿಕೊಳ್ಳಲು ನಾನು ಬೇಕಿತ್ತು. ಈಗ  ಜೆಡಿಎಸ್ ನವರಿಗೂ ನಾನು ಬೇಕಾಗಿದೆ.‌ಹಾಗಾಗಿ ಜೆಡಿಎಸ್ ನವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಅವರ ಸಾವನ್ನು ನಾನು ಬಯಸಲಿಲ್ಲ, ಅವರು ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದರು.‌ನಾನು ಅದೆ ರೀತಿ ಅವರ ವಿರುದ್ಧ ಮಾತನಾಡಿದರೆ ಅವರಿಗೆ ಏನಾಗಬಹುದು, ಹೃದಯಾಘಾತ ಆಗಬಹುದು ಎಂದಿದ್ದೇನೆ. ಯಾಕೆಂದರೆ ಮೂರು ಬಾರಿ ಶಸ್ತ್ರಚಿಕತ್ಸೆಗೆ ಒಳಗಾಗಿದ್ದಾರೆ. ಸಾವು ಯಾರ ಕೈಯಲ್ಲೂ ಇಲ್ಲ, ಭಗವಂತನ‌ ಕೈಯಲ್ಲಿದೆ.  ನಾವು ವಾಪಸ್ ಕೊಡುವ ಸುದ್ದಿಗೆ ಯಾಕೆ ಮತ್ತೆ ಆಸ್ಪತ್ರೆ ಸೇರುತ್ತೀರ ಎಂದರು.When injustice occurred against women jk02_new jk02 new

ಕುಮಾರಸ್ವಾಮಿ ಅವರು ಮಾಡಿದ್ದನ್ನ ಉಣ್ಣುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ಲ, ಅವರು ಬಾಯಿಗೆ ಬಂದಾಗೆ ಮಾತನಾಡಿದರೆ ನಾವು ಕೈಕಟ್ಟಿ ಕೂರಬೇಕ? ಆರ್.ಎಸ್.ಎಸ್ ಅವರ ಆಳುಮಕ್ಕಳು ಅವರಾಗಿದ್ದಾರೆ ನಾವಲ್ಲ ಎಂದು ತಿರುಗೇಟು ನೀಡಿದರು.

When injustice, occurred, against ,women, Hassan SP’s office,  Priyank Kharge

English Summary
Title

When injustice occurred against women, did he even once go and sit at the Hassan SP's office? — Priyank Kharge

Short Description
Home Minister Priyank Kharge questioned whether H.D. Kumaraswamy—who rushes to the Bengaluru Police Commissioner’s office the moment the names of two JDS-affiliated youths surface in connection with a 'sting operation'—has even once visited the Hassan SP’s office regarding the case involving Prajwal Revanna, where women were subjected to injustice. Kharge, who arrived in Mysuru on Friday to inaugurate the police band performance as part of the Dasara festivities, spoke to the media near the Ambedkar statue in Gandhinagar.