ಬೆಂಗಳೂರು,ಅಕ್ಟೋಬರ್,15,2026 (www.justkannada.in): ಸ್ಟಿಂಗ್ ಆಪರೇಷನ್ ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು ಸಿಎಂ ಇದಾರೋ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಇದ್ದಾರೋ ತಿಳಿಯುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜಕೀಯವಾಗಿ ಎದುರಾಳಿಗಳನ್ನ ಮುಗಿಸಲು ಷಡ್ಯಂತ್ರ ನಡೆದಿದೆ. ಬಹಳ ವರ್ಷಗಳಿಂದ ಈ ರೀತಿ ಷಡ್ಯಂತ್ರ ನಡೆದಿದೆ. ಬಿಜೆಪಿಯಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲೂ ಒಂದು ತಂಢ ಇದೆ. ಸಿಎಂ ಕ್ಯಾಬಿನೆಟ್ ನಲ್ಲಿ ಹೇಳಿದ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಬೇಜವಾಬ್ದಾರಿಯುತವಾಗಿ ರಾಜ್ಯದ ಸಿಎಂ ಮಾತನಾಡಲು ಆಗಲ್ಲ ಎಂದರು.
ಶಾಸಕ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಅವರಿಬ್ಬರೂ ಆತ್ಮೀಯ ಸ್ನೇಹಿತರಿದ್ದಾರೆ. ಹಿಂಧೆಯೇ ಸಿದ್ದರಾಮಯ್ಯಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು. ನನ್ನ ಟ್ರ್ಯಾಪ್ ಮಾಡಿದಂತೆ ನಿಮಗೂ ಮಾಡಬಹುದೆಂದು ಎಚ್ಚರಿಸಿದ್ದರು ಆದರೆ ಸಿದ್ದರಾಮಯ್ಯ ಸ್ವಲ್ಪ ನಿರ್ಲಕ್ಷ್ಯ ತೋರಿದರು ಸಿದ್ದರಾಮಯ್ಯನವರ ಪ್ರೀತಿಯ ಸಮುದಾಯವೇ ಟ್ರ್ಯಾಪ್ ಮಾಡಿದ್ದಾರೆ ಎಂದು ಶಾಸಕ ಯತ್ನಾಳ್ ತಿಳಿಸಿದರು.
MLA Basanagowda patil Yatnal, sting operation case, CBI, investigation.






