Thursday, October 15, 2026

Dasara Wishes

Happy Dasara
Home Front Page ‘ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ? ಹೆಚ್‌ ಡಿಕೆಗೆ ಗೃಹ ಸಚಿವ ಪ್ರಿಯಾಂಕ್​​...

‘ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ? ಹೆಚ್‌ ಡಿಕೆಗೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ತಿರುಗೇಟು

ಬೆಂಗಳೂರು, ಅಕ್ಟೋಬರ್​​, 15,2026 (www.justkannada.in): ಸ್ಟಿಂಗ್​​ ಆಪರೇಷನ್​​ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲಿಸದೇ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಹೇಳಿದ ಹಾಗೆ ತನಿಖೆ ಮಾಡಲು ಆಗಲ್ಲ. ಯಾರ ಮೇಲೆ ಸಂಶಯವಿದೆ ಅವರನ್ನ ಕರೆಸುತ್ತೇವೆ. ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ? ಎಂದು ಟಾಂಗ್‌ ಕೊಟ್ಟರು.Home Minister priyank

ಹೆಚ್‌ ಡಿಕೆ ಮಾಡಿರುವ ಆರೋಪಗಳಿಗೆ ಉತ್ತರ ಕೊಡೋದಕ್ಕೆ ಆಗೋದಿಲ್ಲ. ಒಂದು ದೂರು ಬಂದಿದ್ದು, ಪ್ರಕರಣ ಸಂಬಂಧ ಯಾರ ಯಾರ ಮೇಲೆ ಸಂಶಯವಿದೆ ಅವರನ್ನು ಕರೆಸುತ್ತೇವೆ. ಪ್ರೋಟೋಕಾಲ್ ಪ್ರಕಾರವಾಗಿ ತನಿಖೆ ನಡೆಸುತ್ತಿದ್ದೇವೆ. ದಿನನಿತ್ಯ ಮಾಧ್ಯಮ ಮುಂದೆ ತನಗೆಲ್ಲ ಮಾಹಿತಿ ಇದೆ ಎಂದು ಕೇಂದ್ರ ಸಚಿವರು ಹೇಳುತ್ತಿದ್ದಾರೆ. ದಾಖಲೆ ಇದ್ದರೆ ಕೊಡಲಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.Home Minister jk02_new jk02 new

 

English Summary
Title

Priyank Kharge vs HD Kumaraswamy: Karnataka Sting Operation Sparks Major Political Row

Short Description
The political showdown in Karnataka has escalated as State Home Minister Priyank Kharge and Union Minister H.D. Kumaraswamy clash over an alleged defamatory sting operation targeting former Chief Minister Siddaramaiah. Kumaraswamy has alleged a deep-rooted political conspiracy by Congress leaders to orchestrate character assassination and push Siddaramaiah out of office, demanding an independent judicial probe. Rejecting demands for a CBI inquiry, Kharge asserted that the Karnataka Police are fully equipped to uncover the truth. He challenged Kumaraswamy to provide actual documentary evidence, dismissing the claims as a politically motivated deflection.
Keywords
Home Minister, Priyank Kharge, Union Minister, H.D. Kumaraswamy, alleged