ಶಿವಮೊಗ್ಗ,ಅಕ್ಟೋಬರ್,14,2026 (www.justkannada.in) ರಾಜ್ಯದಲ್ಲಿ ಇನ್ನೊಂದು ವರ್ಷದೊಳಗೆ 3ನೇ ಸಿಎಂ ಬಂದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ಇನ್ನೊಂದು ವರ್ಷದೊಳಗೆ 3ನೇ ಸಿಎಂ ಬಂದರು ಬರಬಹುದು. ನನ್ನ ಮಾತನ್ನು ಯಾರೂ ಕೂಡ ಹಗುರವಾಗಿ ಪರಿಗಣಿಸಬೇಡಿ ನನ್ನ ಈ ಹೇಳಿಕೆ ಉಡಾಫೆ ಅಂತಾ ಕೆಲವರು ಅಂದು ಕೊಳ್ಳಬಹುದು ಆದರೆ ಯಾರೂ ಕೂಢ ಹಗುರವಾಗಿ ತೆಗೆದುಕೊಳ್ಳಬಾರದು ಎಂದರು.
ಕಾಂಗ್ರೆಸ್ ಪಕ್ಷದಲ್ಲೇ ಆಂತರಿಕ ಗೊಂದಲ ಸೃಷ್ಠಿಯಾಗಿದೆ. ಷಡ್ಯಂತ್ರದ ಬಗ್ಗೆ ಸತ್ಯಾಸತ್ಯತೆ ಸದ್ಯದಲ್ಲೇ ಹೊರಬರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಕಚ್ಚಾಟ ಶುರುವಾಗಿದೆ. ರಾಜ್ಯದಲ್ಲಿ 3ನೇ ಸಿಎಂ ಬಂದರೂ ಆಚ್ಚರಿ ಇಲ್ಲ. ಸರ್ಕಾರ ಯಾವ ಹಂತಕ್ಕೆ ಬರುತ್ತದೆ ಕಾದು ನೋಡಬೇಕು ಎಂದರು.







