ಬೆಂಗಳೂರು,ಅಕ್ಟೋಬರ್,14,2026 (www.justkannada.in): ಸ್ಟಿಂಗ್ ಆಪೇರಷನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ, ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಜನತಾದಳದವರು ಬಿಟ್ಟು ಇನ್ಯಾರು ಮಾಡೋಕೆ ಸಾಧ್ಯ? ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ರೀತಿ ಕೆಲಸ ಮಾಡೋದು ಜನತಾ ದಳದವರು ಬಿಟ್ಟು ಬೇರೆ ಯಾರು ಈ ರೀತಿ ಮಾಡೋದಕ್ಕೆ ಸಾಧ್ಯವಿಲ್ಲ. ಈಗ ಸಿದ್ದರಾಮಯ್ಯ ಬಗ್ಗೆ ಅನುಕಂಪದಿಂದ ಮಾತನಾಡುತ್ತಿದ್ದಾರೆ. ಯಾವತ್ತೂ ಇಲ್ಲದ ಅನುಕಂಪ ಈಗ ಬಂದಿದೆ. ಪಕ್ಷದಿಂಧ ಓಡಿಸಿದಾಗ ಇರಲಿಲ್ಲ. ಇಂದು ಸಿದ್ದರಾಮಯ್ಯ ಮೇಲೆ ಹೆಚ್ ಡಿಕೆಗೆ ಅನುಕಂಪ ಹುಟ್ಟಿದೆ ಪಾಪ ಎಂದು ಲೇವಡಿ ಮಾಡಿದರು.
ಸ್ಟಿಂಗ್ ಆಪರೇಷನ್ ಸಿಬಿಐ ತನಿಖೆಗೆ ವಿಪಕ್ಷಗಳ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ನಾಳೇ ಸಚಿವ ಸಂಪುಟ ಸಭೆ ಇದೆ. ನಾಳೇ ಏನಾದರೂ ಚರ್ಚಿಸಿದರೇ ಸಿಎಂ ಅಥವಾ ಎಲ್ಲಾ ಸಚಿವರು ಏನು ತೀರ್ಮಾನಿಸುತ್ತಾರೆ ನೋಡೋಣ. ಆದರೆ ನನಗೆ ಅದರ ಅವಶ್ಯಕತೆ ಇಲ್ಲ ಅನ್ನಿಸುತ್ತೆ. ತನಿಖೆಗೆ ಅವಶ್ಯಕತೆ ಇದ್ದರೇ ಈ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
sting operation, Janata Dal, HDK, Siddaramaiah, Minister, Chaluvarayaswamy







