ಬೆಳಗಾವಿ/ಕಲಬುರಗಿ,ಅಕ್ಟೋಬರ್,14,2026 (www.justkannada.in): ಕಬ್ಬಿಗೆ ಎಂಎಸ್ ಪಿ, ಎಫ್ ಆರ್ ಪಿ ದರ ನಿಗದಿಗೆ ಆಗ್ರಹಿಸಿ ಬೆಳಗಾವಿ, ಕಲ್ಬುರ್ಗಿಯಲ್ಲಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.
ಕಲಬುರಗಿಯಲ್ಲಿ2ನೇ ದಿನವೂ ರೈತರ ಪ್ರತಿಭಟನೆ ಮುಂದುವರೆದಿದ್ದು ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಲಬುರಗಿ ಬೀದರ್ ಜಿಲ್ಲೆಗಳ ರೈತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ರಾಮಮಂದಿರ ವೃತ್ತದ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಎತ್ತಿನ ಬಂಡಿಗಳ ಸಮೇತ ಹೋರಾಟದಲ್ಲಿ ರೈತರು ಭಾಗಿಯಾಗಿದ್ದಾರೆ.
ರೈತರ ಹೋರಾಟ ಪರೀಕ್ಷೆ ಮುಂದೂಡಿಕೆ
ಬೆಳಗಾವಿ ಜಿಲ್ಲೆಯಲ್ಲೂ ಕಬ್ಬುಬೆಳೆಗಾರರ ಹೋರಾಟ ಮುಂಧುವರೆದಿದ್ದು ಚನ್ನಮ್ಮ ವಿವಿಯಲ್ಲಿ ಇಂಧು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆಯಾಗಿದೆ. ಇಂದು ನಿಗದಿಯಾಗಿದ್ದ ಬಿಎಡ್ ಕೋರ್ಸ್ ಪರೀಕ್ಷೆ ಮುಂದೂಡುಕೆಯಾಗಿದೆ. ಇಂದು ಶೈಕ್ಷಣಿಕ ನಿರ್ವಹಣೆ ಮತ್ತು ಸಂಘಟನೆ ವಿಷಯ ಪತ್ರಿಕೆ ಪರೀಕ್ಷೆ ಇತ್ತು.
ಪ್ರತಿ ಟನ್ ಕಬ್ಬಿಗೆ 5,500 ರೂ. ದರ, ಸಕ್ಕರೆ ಪ್ರತಿ ಕೆಜಿಗೆ 60 ರೂ. ಎಂಎಸ್ಪಿ ದರ ನಿಗದಿ, ಸ್ವಾಮಿನಾಥನ ಆಯೋಗದ ವರದಿ ಜಾರಿ, ರಾಜ್ಯದ ಎಥೆನಾಲ್ ಸಂಪೂರ್ಣ ಖರೀದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರು ಆಗ್ರಹಿಸಿದ್ದಾರೆ.






