Tuesday, October 13, 2026

Dasara Wishes

Happy Dasara
Home Front Page ನಿಗದಿತ ಅವಧಿಯಲ್ಲಿ ಹಣ ಕಟ್ಟದವರ ಕೈಗಾರಿಕಾ ನಿವೇಶನ ರದ್ದು: ಎಂ.ಬಿ ಪಾಟೀಲ್  ಎಚ್ಚರಿಕೆ

ನಿಗದಿತ ಅವಧಿಯಲ್ಲಿ ಹಣ ಕಟ್ಟದವರ ಕೈಗಾರಿಕಾ ನಿವೇಶನ ರದ್ದು: ಎಂ.ಬಿ ಪಾಟೀಲ್  ಎಚ್ಚರಿಕೆ

ಬೆಂಗಳೂರು,ಅಕ್ಟೋಬರ್‌,13,2026(www.justkannada.in) ಕೆಐಎಡಿಬಿ ಮೂಲಕ ಉದ್ಯಮಿಗಳಿಗೆ ಮಂಜೂರು ಮಾಡುವ ನಿವೇಶನಗಳಿಗೆ ನಿಗದಿತ ಅವಧಿಯಲ್ಲಿ ಹಣ ಪಾವತಿ ಮಾಡದಿದ್ದರೆ ಅಂತಹವರ‌ ನಿವೇಶನ‌ ಹಂಚಿಕೆಯನ್ನು ನಿಯಮ ಪ್ರಕಾರ ರದ್ದುಪಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಖನಿಜ ಭವನದಲ್ಲಿ ಕೆಐಎಡಿಬಿ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಈ ಸಂಬಂಧ ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ನಿಯಮ‌ ಪ್ರಕಾರ ನಿವೇಶನ ಹಂಚಿಕೆಯಾದ ಒಂದು ತಿಂಗಳಲ್ಲಿ ಶೇಕಡ 30ರಷ್ಟು ಹಣವನ್ನು ಪಾವತಿಸಬೇಕು. ಒಂದು ವೇಳೆ ಕಟ್ಟದಿದ್ದಲ್ಲಿ ಕೋರಿಕೆಯ ಮೇರೆಗೆ ಶೇಕಡ 10ರಷ್ಟು ಬಡ್ಡಿಯೊಂದಿಗೆ ಮತ್ತೊಂದು ತಿಂಗಳು ಕಾಲಾವಕಾಶ ಕೊಡಲಾಗುವುದು. ಅದರ ನಂತರವೂ ಕಟ್ಟದಿದ್ದರೆ ಹಂಚಿಕೆಯನ್ನೇ ರದ್ದುಪಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟಾಜ್ಣೆ ಮಾಡಿದ್ದಾರೆ.Industrial plots mb patil

ಕೈಗಾರಿಕಾ ನಿವೇಶನಗಳಿಗೆ ಭಾರೀ ಬೇಡಿಕೆಯ ಒತ್ತಡವಿದೆ. ಈ ವಿಚಾರದಲ್ಲಿ ಕೆಐಎಡಿಬಿ ನಿಯಮಾವಳಿಗಳು ಸ್ಪಷ್ಟವಾಗಿವೆ. ಈ ವಿಷಯದಲ್ಲಿ ಅಧಿಕಾರಿಗಳು ಉದಾಸೀನ ಪ್ರದರ್ಶಿಸುತ್ತಿರುವುದು ತಮಗೆ ಅಸಮಾಧಾನ ತಂದಿದೆ ಎಂದು ಅವರು ವಿವರಿಸಿದ್ದಾರೆ.

ನಿವೇಶನ ಮಂಜೂರು ಮಾಡಿದ ಮೇಲೆ ಮುಂದಿನ ಕೆಲಸಗಳು ತ್ವರಿತವಾಗಿ ನಡೆಯಬೇಕು. ಆ ಜಾಗಗಳನ್ನು ಬಹುಕಾಲ ಹಾಗೆಯೇ ಖಾಲಿ ಬಿಟ್ಟುಕೊಂಡು ಕೂರುವುದರಲ್ಲಿ ಅರ್ಥವಿಲ್ಲ. ಇದನ್ನು ಹೂಡಿಕೆದಾರರು ಕೂಡ ಅರಿತಿರಬೇಕು. ಇಂಥ ಪ್ರಕರಣಗಳು ಕಂಡುಬಂದಲ್ಲಿ ನಿವೇಶನ ಹಿಂದಕ್ಕೆ ಪಡೆದುಕೊಂಡು, ನಿಗದಿತ ಮೊತ್ತ ಪಾವತಿಸುವ ಸಾಮರ್ಥ್ಯ ಇರುವವರಿಗೆ ಅವುಗಳನ್ನು ಮಂಜೂರು ಮಾಡಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ.Industrial plots jk02_new jk02 new

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಸಿಇಒ ಗೋವಿಂದ ರೆಡ್ಡಿ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಉಪಸ್ಥಿತರಿದ್ದರು.‌

Industrial plots, payments, within, stipulated time, cancelled, MB Patil ,warns.

English Summary
Title

Industrial Plot Allotments Cancelled Over Delayed Payments: Karnataka Minister M.B. Patil Warns

Short Description
Karnataka Industries Minister M.B. Patil has issued a strict warning that the allotment of industrial plots will be cancelled if buyers fail to clear dues within the stipulated time frame. Directing the Karnataka Industrial Areas Development Board (KIADB) to strictly enforce land regulations, the minister ordered the immediate recovery of plots from defaulting allottees. Under KIADB rules, industrial land buyers must complete payments by the specified deadline to secure possession. This enforcement drive is part of Karnataka’s larger digital push to monitor real-time land utilization, track payment compliance, and accelerate industrial growth across the state.
Keywords
Industrial plots, payments, within, stipulated time, cancelled, MB Patil, warns.