ಬೆಂಗಳೂರು, ಅಕ್ಟೋಬರ್, 8,2026 (www.justkannada.in): ಸ್ಟಿಂಗ್ ಆಪರೇಷನ್ ವಿಚಾರ ಸಂಬಂಧ ನನ್ನನ್ನೇ ಟ್ರ್ಯಾಪ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್. ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಸಿಎಂ ಭೇಟಿಗೆ ಬಂದರೆ ಫೋನ್ ಹೊರಗಿಟ್ಟು ಹೋಗಬೇಕು. ಹೀಗಿರುವಾಗ ಟ್ರ್ಯಾಪ್ ಮಾಡಲು ಬಂದವರನ್ನು ಯಾಕೆ ಬಿಟ್ಟಿರಿ ಎಂದು ಪ್ರಶ್ನಿಸಿದರು.
ನನಗೂ ಟ್ರ್ಯಾಪ್ ಮಾಡುವ ಯತ್ನ ನಡೆದಿದೆ ಎಂದಿದ್ದಾರೆ. ಯಾಕೆ ಅವರನ್ನು ಹಿಡಿಯಲಿಲ್ಲ, ನೀವು ಕಂಡು ಯಾಕೆ ಬಿಟ್ಟಿದ್ದೀರಿ?, ನೈಸ್ ಕಂಪನಿ ಮಾಲೀಕ ನಿಮ್ಮನ್ನು ಭೇಟಿ ಮಾಡಿದ ದೃಶ್ಯ ನೋಡಿದೆ. ಅವರು ಟ್ರ್ಯಾಪ್ ಮಾಡಲು ಬಂದಿದ್ರಾ ಎಂದು. ಕುಂಬಳಕಾಯಿ ಕಳ್ಳರಂತೆ ಅವರೇ ವರ್ತಿಸುತ್ತಿದ್ದಾರೆ. ಯಾರು ಪಿತಾಮಹ ಎಂಬುದರ ಬಗ್ಗೆ ತನಿಖೆಯಾಗಬೇಕು. ರಾಜ್ಯಪಾಲರ ಭೇಟಿಯಾದ ನಿಯೋಗದಲ್ಲಿ ಒಬ್ಬರು ಇದ್ದಾರೆ ಎಂದಿದ್ದಾರೆ. ಅವರು ಯಾರು ಅಂತಾ ಬಹಿರಂಗಪಡಿಸಿ ಎಂದು ಕೇಂದ್ರ ಸಚಿವ ಹೆಚ್ ಡಿಕೆ ಆಗ್ರಹಿಸಿದ್ದಾರೆ.
ರಮೇಶ್ ಜಾರಕಿಹೊಳಿ ಟ್ರ್ಯಾಪ್ ಮಾಡಿದ್ದವರು ಯಾರು? ಸತೀಶ್, ಕೆ.ಎನ್. ರಾಜಣ್ಣರನ್ನು ಸೈಲೆಂಟ್ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಹೆಚ್ ಡಿಕೆ, ಸಿಎಂ ಹೇಳಿಕೆ ನೋಡಿ ಎಂಥಾ ಸಿಎಂ ಬಂದರು ಅಂತಾ ಚರ್ಚೆ ಆಗುತ್ತಿದೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿದ್ದು ಮಾಧ್ಯಮದಲ್ಲಿ ಬರಲು ಕಾರಣ ಏನು? ನೈಸ್ ಸುದ್ದಿ ಮುನ್ನೆಲೆಗೆ ಬರಬಾರದು ಎನ್ನುವುದು ಅವರ ಉದ್ದೇಶ ಎಂದು ಟೀಕಿಸಿದರು.






