Thursday, October 8, 2026

BDA Apartments

Home Front Page ಸಿಎಂ ಆದ್ಮೇಲೆ ನನ್ನನೇ ಟ್ರ್ಯಾಪ್​ ಮಾಡಲು ಯತ್ನಿಸಿದ್ದರು-ಸಿಎಂ ಡಿಕೆ ಶಿವಕುಮಾರ್​

ಸಿಎಂ ಆದ್ಮೇಲೆ ನನ್ನನೇ ಟ್ರ್ಯಾಪ್​ ಮಾಡಲು ಯತ್ನಿಸಿದ್ದರು-ಸಿಎಂ ಡಿಕೆ ಶಿವಕುಮಾರ್​

ನವದೆಹಲಿ, ಅಕ್ಟೋಬರ್ ,8,2026 (www.justkannada.in):  ಸಚಿವರ ಸ್ಟಿಂಗ್ ಆಪರೇಷನ್ ವಿಚಾರ ಕುರಿತು ಭಾರೀ ಚರ್ಚೆಯಾಗುತ್ತಿದ್ದು ಈ ಮಧ್ಯೆ  ಮುಖ್ಯಮಂತ್ರಿ ಆದ ಬಳಿಕ ನನ್ನನ್ನೂ  ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಸಿಎಂ ಡಿಕೆ ಶಿವಕುಮಾರ್ ಸ್ಫೋಟಕ ಆರೋಪ ಮಾಡಿದ್ದಾರೆ.

ಸ್ಟಿಂಗ್ ಆಪರೇಷನ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ ಸಚಿವರಿಗೆ ಎಚ್ಚರಿಕೆ ನೀಡಿರುವ ವಿಚಾರದ ಕುರಿತು  ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನನ್ನ ಬಳಿ ಈ ಬಗ್ಗೆ ಎಲ್ಲ ಮಾಹಿತಿಯೂ ಇದೆ.  ನನ್ನ ಬಳಿ ಕೆಲವರು ಬಂದಿದ್ದರು. ಫೋಟೋ ಬೇಕಿದ್ದರೆ ನೀಡುತ್ತೇನೆ. ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂಬುದು ತಮಗೆ ಗೊತ್ತಿದೆ ಎಂದು ಹೇಳಿದ್ದಾರೆ. ಈ ವಿಚಾರದ ಹಿಂದಿನ ಪಿತಾಮಹ ಯಾರು ಎಂಬುದೂ ಗೊತ್ತಿದೆ. ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.tried dks1 dks1 3

ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವುದರಿಂದ ಸುಮ್ಮನೆ ಮಾತನಾಡುವುದಿಲ್ಲ. ಎಲ್ಲ ಸಾಕ್ಷ್ಯಾಧಾರಗಳಿವೆ.  ಈ ಹಿನ್ನೆಲೆಯಲ್ಲಿ ನಮ್ಮವರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.tried jk02_new jk02 new

 

English Summary
Title

D.K. Shivakumar Claims Sting Operation Trap After Becoming Karnataka CM

Short Description
Karnataka Chief Minister D.K. Shivakumar has claimed that an attempt was made to trap him via a sting operation shortly after he took office. Speaking to reporters in New Delhi, the Congress leader revealed he possesses photographic evidence and documents proving the conspiracy. This disclosure follows a major political row in Karnataka politics, triggered by Shivakumar warning his cabinet ministers to stay alert against private agencies using honey traps and money traps. In response, opposition leader H.D. Kumaraswamy accused Shivakumar of engineering past stings, a charge the Chief Minister firmly deflected with these new claims.
Keywords
tried, trap, me, after, I became CM, CM, DK Shivakumar