ನವದೆಹಲಿ,ಅಕ್ಟೋಬರ್,7,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಿನ್ನೆ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆಗೆ ಯತ್ನ ವಿಚಾರ ಸಂಬಂಧ ಆಕಾಶವಾಣಿ ಭವನದ ಅಧಿಕಾರಿಗಳು ತಮ್ಮ ವಿರುದ್ದ ಎಫ್ ಐಆರ್ ದಾಖಲಿಸಿರುವುದಕ್ಕೆ ಕಾಂಗ್ರೆಸ್ ನಾಯಕ ತಿರುಗೇಟು ನೀಡಿದ್ದಾರೆ.
ನವದೆಹಲಿಯ ಜನಪತ್ ರಸ್ತೆಯಲ್ಲಿನ ಖಾಸಗಿ ಹೋಟೆಲ್ ನಲ್ಲಿ ಸಭೆ ಭೋಜನಕೂಟ ಬಳಿಕ ತಮ್ಮ ಮೇಲಿನ ಎಫ್ ಐಆರ್ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನನ್ನ ಮೇಲೆ 45 ಎಫ್ ಐಆರ್ ದಾಖಲಾಗಿವೆ. ಇದಕ್ಕೆಲ್ಲ ಹೆದರಲ್ಲ. ಪ್ರತಿಯೊಂದು ಎಫ್ ಐಆರ್ ನನಗೆ ಮೆಡಲ್ ಇದ್ದಂತೆ. ನನ್ನ ಗುರಿ 100 ಎಫ್ ಐಆರ್ ಹಾಕಿಸಿಕೊಳ್ಳೋದು ಎಂದು ಟಾಂಗ್ ಕೊಟ್ಟರು.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಆಕಾಶವಾಣಿ ಭವನದ ಬಳಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಸೇರಿ ಹಲವರ ವಿರುದ್ದ ದೂರು ನೀಡಿದ್ದರು.
Key words: 45 FIRs, registered, against, me, Rahul Gandhi






