Wednesday, October 7, 2026

BDA Apartments

Just Kannada BDA JK_Adv BDA Adv
Home Front Page ಗ್ರಾಮೀಣ ಪತ್ರಕರ್ತರ ಬಸ್‌ಪಾಸ್ ನಿಯಮ ಮತ್ತಷ್ಟು ಸರಳೀಕರಣಕ್ಕೆ KUWJ ಆಗ್ರಹ

ಗ್ರಾಮೀಣ ಪತ್ರಕರ್ತರ ಬಸ್‌ಪಾಸ್ ನಿಯಮ ಮತ್ತಷ್ಟು ಸರಳೀಕರಣಕ್ಕೆ KUWJ ಆಗ್ರಹ

ಬೆಂಗಳೂರು,ಅಕ್ಟೋಬರ್,7,2026 (www.justkannda.in):  ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ, ಬಸ್‌ ಪಾಸ್ ಪಡೆಯಲು ಇರುವ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸರ್ಕಾರವನ್ನು ಆಗ್ರಹಿಸಿದೆ.

ಗ್ರಾಮೀಣ ಪತ್ರಕರ್ತರು ತಮ್ಮ ವೃತ್ತಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವ ಉದ್ದೇಶದಿಂದ ಉಚಿತ ಬಸ್‌ ಪಾಸ್ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ಪ್ರಸ್ತುತ ಇರುವ ಕೆಲವು ನಿಯಮಗಳು ಬಸ್‌ಪಾಸ್‌ ಗೆ ಅರ್ಜಿ ಸಲ್ಲಿಸಲು ಹಾಗೂ ಸೌಲಭ್ಯ ಪಡೆಯಲು ತೊಡಕಾಗಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.KUWJ buspass, journalist buspass journalist

ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಕಟವಾಗುವ ಪತ್ರಿಕೆಗಳು ಹಾಗೂ ಪ್ರಾದೇಶಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ತಾಲೂಕು ಮತ್ತು ಹೋಬಳಿ ಮಟ್ಟದ ವರದಿಗಾರರಿಗೆ ಬಸ್‌ ಪಾಸ್ ಸೌಲಭ್ಯ ದೊರೆಯುವಂತೆ ನಿಯಮಗಳನ್ನು ಸರಳೀಕರಿಸಬೇಕು ಎಂದು ಕೆಯುಡಬ್ಲ್ಯುಜೆ ಒತ್ತಾಯಿಸಿದೆ.KUWJ

ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಅರ್ಹ ಪತ್ರಕರ್ತರಿಗೆ ಯಾವುದೇ ಅನಗತ್ಯ ನಿಯಮಗಳಿಂದ ಸೌಲಭ್ಯ ವಂಚಿತವಾಗದಂತೆ, ಬಸ್‌ ಪಾಸ್ ನಿಯಮಾವಳಿಗಳನ್ನು ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡುವಂತೆ ಸಂಘ ಮನವಿ ಮಾಡಿದೆ.

ಗ್ರಾಮೀಣ ಪತ್ರಕರ್ತರ ಹಿತದೃಷ್ಟಿಯಿಂದ ಮನವಿಯನ್ನು ಆದ್ಯತೆಯಿಂದ ಪರಿಗಣಿಸಿ, ನಿಯಮಗಳ ಸರಳೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.further jk02_new jk02 new

 

English Summary
Title

UWJ Welcomes Simplified Karnataka Free Bus Pass Rules for Rural Journalists:

Short Description
The Karnataka Union of Working Journalists (KUWJ) has welcomed the Karnataka government’s decision to simplify free bus pass rules for rural media professionals. In a major relief, the government has removed the strict requirement for official media accreditation. Rural and taluk-level journalists with at least four years of experience can now access free KSRTC travel across their respective districts using alternative service proofs, such as editor recommendation letters or salary slips. Applications can be submitted online via the Seva Sindhu portal before physical verification at the District Information Office.
Keywords
KUWJ, further, simplification, bus pass, rules, rural journalists.