Monday, October 5, 2026

BDA Apartments

Home Front Page ದಸರಾ ನವರಾತ್ರಿಗೆ ರಾಜ ವೈಭವದ ಮುನ್ನುಡಿ: ರತ್ನಖಚಿತ ಸಿಂಹಾಸನ ಜೋಡಣೆ

ದಸರಾ ನವರಾತ್ರಿಗೆ ರಾಜ ವೈಭವದ ಮುನ್ನುಡಿ: ರತ್ನಖಚಿತ ಸಿಂಹಾಸನ ಜೋಡಣೆ

ಮೈಸೂರು,ಅಕ್ಟೋಬರ್,5,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಈ ಮಧ್ಯೆ  ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯುತ್ತಿದೆ.

ಮೈಸೂರು ಅರಮನೆಯಲ್ಲಿ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ನೇತೃತ್ವದಲ್ಲಿ ಇಂದು ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯುತ್ತಿದ್ದು, ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಸಿಂಹಾಸನ ಸಜ್ಜಾಗುತ್ತಿದೆ.Mysore Dasara

ಧಾರ್ಮಿಕ ವಿಧಿವಿಧಾನಗಳ ಬಳಿಕ ಅರಮನೆಯ ಭದ್ರತಾ ಕೊಠಡಿಯಿಂದ ರತ್ನಖಚಿತ ಸಿಂಹಾಸನದ ಬಿಡಿಭಾಗಗಳನ್ನ ದರ್ಬಾರ್ ಹಾಲ್‌ ಗೆ ರವಾನೆ ಮಾಡಲಾಗಿದ್ದು ಒಟ್ಟು 13 ಬಿಡಿಭಾಗಗಳನ್ನ ಜೋಡಿಸಿ ಸಿಂಹಾಸನ ಸಿದ್ಧಗೊಳಿಸಲಾಗುತ್ತದೆ. 13 ಬಿಡಿಭಾಗಗಳಿಂದ ಸಿಂಹಾಸನಕ್ಕೆ ಮರುಜೋಡಿಸಲಾಗುತ್ತಿದೆ.Mysore Dasara

ಗಣಪತಿ ಹೋಮ, ನವಗ್ರಹ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ‌ ನೆರವೇರಿಸಿದ್ದು, ಸಿಂಹಾಸನ ಜೋಡಣಾ ಕಾರ್ಯ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಕ್ಟೋಬರ್ 11ರಿಂದ ಶರನ್ನವರಾತ್ರಿ ಆರಂಭವಾಗಲಿದ್ದು ಅಂದಿನಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

 

English Summary
Title

Mysore Dasara 2026: Golden Throne Unveiled at Mysore Palace for Navaratri

Short Description
Experience the royal grandeur of the Mysore Dasara 2026 festival in Karnataka. Ahead of the highly anticipated Navaratri festival celebrations, the legendary gem-studded Golden Throne (Ratna Simhasana) was officially assembled today at the iconic Mysore Palace. Steeped in centuries-old mythology tracing back to the Pandavas, this priceless golden masterpiece is brought out of the palace strongroom only once a year. Don't miss this rare opportunity to witness India's rich royal heritage during the spectacular 10-day cultural festival. Plan your visit today to see the spectacular Durbar hall and historical marvels!
Keywords
Mysore Dasara, Navaratri, Palace, Gem-Studded, Throne