Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರು ದಸರಾ-2026 : ಈ ದಿನಗಳಲ್ಲಿ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧ

ಮೈಸೂರು ದಸರಾ-2026 : ಈ ದಿನಗಳಲ್ಲಿ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧ

ಮೈಸೂರು, ಅಕ್ಟೋಬರ್ ,2,2026 (www.justkannada.n):  ನಾಡಹಬ್ಬ ಮೈಸೂರು ದಸರಾ-2026 ಮಹೋತ್ಸವದ ಪ್ರಯುಕ್ತ ಮೈಸೂರು ರಾಜಮನೆತನದವರು ಪ್ರತಿ ವರ್ಷದಂತೆ ಮೈಸೂರು ಅರಮನೆಯಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿರ್ದಿಷ್ಟ ದಿನಾಂಕಗಳಂದು ಮೈಸೂರು ಅರಮನೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ರತ್ನ ಸಿಂಹಾಸನ ಜೋಡಣೆ ಕಾರ್ಯದ ಪ್ರಯುಕ್ತ ಅಕ್ಟೋಬರ್ ​05 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ,

Mysuru Dasara 2026 Ayudha Pooja celebration across the state, Pooja program at Mysore Palace Ayudha Pooja celebration across the state Pooja program at Mysore Palace
(File Photo)

ರಾಜವಂಶಸ್ಥರ ಸಿಂಹಾಸನಾರೋಹಣ ಹಾಗೂ ಖಾಸಗಿ ದರ್ಬಾರ್‌ ಧಾರ್ಮಿಕ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಅ.​11 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಮತ್ತು ಅ.​20 ರಂದು ಕಲ್ಯಾಣ ಮಂಟಪದಲ್ಲಿ ಮಹಾನವಮಿ ಹಾಗೂ ಆಯುಧ ಪೂಜೆ ನಡೆಯುವುದರಿಂದ ಸಂಪೂರ್ಣ ದಿನ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.Mysuru Dasara 2026 mysore palace

ಅ.21 ರಂದು ವಿಜಯದಶಮಿ ಹಬ್ಬದ ಪ್ರಯುಕ್ತ ಸಂಪೂರ್ಣ ದಿನ ಸಾರ್ವಜನಿಕರ ಸಾಮಾನ್ಯ ಪ್ರವೇಶವಿರುವುದಿಲ್ಲ. ಕೇವಲ ದಸರಾ ಪಾಸ್‌ ಹಾಗೂ ಜಂಬೂಸವಾರಿ ಟಿಕೆಟ್‌ ಹೊಂದಿರುವವರಿಗೆ ಮಾತ್ರ ಪ್ರವೇಶವಿರುತ್ತದೆ.

ರತ್ನ ಸಿಂಹಾಸನ ವಿಸರ್ಜನೆ ಹಾಗೂ ಭದ್ರತಾ ಕೊಠಡಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ನವೆಂಬರ್ ​19 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.00 ರವರೆಗೆ ಪ್ರವೇಶ ಇರುವುದಿಲ್ಲ ಎಂದು ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Restrictions jk02_new jk02 new

 

English Summary
Title

Mysuru Dasara 2026: Mysuru Palace Entry, Tickets & Restrictions

Short Description
Experience Mysuru Dasara 2026 from 11–21 October. During this grand festival, the iconic Mysuru Palace remains open daily from 10:00 AM to 5:30 PM, but internal public entry is restricted on 21 October for the legendary Jamboo Savari procession. Viewing the breathtaking palace illumination from the grounds is completely free every evening from 7:00 PM to 10:00 PM. To avoid traffic diversions and vehicle-free zones around the palace perimeter, visitors are advised to use designated parking lots. Book your premium seating and Dasara Gold Cards early via the official website to secure hassle-free access.
Keywords
Mysuru Dasara 2026, Restrictions, entry, Mysuru Palace, these days.