Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರು: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ರದ್ದಿಗೆ ಆಗ್ರಹಿಸಿ ಪ್ರತಿಭಟನೆ; ಅಡ್ಡಂಡ ಕಾರ್ಯಪ್ಪ ಪೋಸ್ಟರ್‌ಗೆ ಬೆಂಕಿ

ಮೈಸೂರು: ‘ಗಾಂಧಿ ಹತ್ಯೆಯ ಸತ್ಯ’ ನಾಟಕ ರದ್ದಿಗೆ ಆಗ್ರಹಿಸಿ ಪ್ರತಿಭಟನೆ; ಅಡ್ಡಂಡ ಕಾರ್ಯಪ್ಪ ಪೋಸ್ಟರ್‌ಗೆ ಬೆಂಕಿ

ಮೈಸೂರು, ಅಕ್ಟೋಬರ್,2,2026 (www.justkannada.in):  ಮೈಸೂರಿನ ಕಿರು ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಆಯೋಜಿಸಲಾಗಿರುವ ‘ಗಾಂಧಿ ಹತ್ಯೆಯ ಸತ್ಯ’ ನಾಟಕವನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಮಾಜಿ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ನಾಟಕದ ರಚನೆ ಮತ್ತು ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅವರ ಪೋಸ್ಟರ್ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಂಗಭೂಮಿ ಟ್ರಸ್ಟ್ (ರಿ.), ಕೊಡಗು ವತಿಯಿಂದ ಅಡ್ಡಂಡ ಕಾರ್ಯಪ್ಪ ಅವರ ರಚನೆ ಹಾಗೂ ನಿರ್ದೇಶನದಲ್ಲಿ ನಾಟಕವನ್ನು ಪ್ರದರ್ಶಿಸಲು ಸಿದ್ಧತೆ ನಡೆಸಲಾಗಿದೆ. ಆದರೆ ನಾಟಕದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕುರಿತು ಅವಹೇಳನಕಾರಿ ಹಾಗೂ ಆಧಾರರಹಿತ ಹೇಳಿಕೆಗಳನ್ನು ಬಳಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗಾಂಧೀಜಿ ಕೊಡುಗೆಗೆ ಅವಮಾನ: ಆರೋಪ

ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಅವರ ಪಾತ್ರವನ್ನು ಪ್ರಶ್ನಿಸುವ ಮತ್ತು ಅವಮಾನಿಸುವ ರೀತಿಯಲ್ಲಿ ನಾಟಕದಲ್ಲಿ ವಿಚಾರಗಳನ್ನು ಬಿಂಬಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ನಾಟಕದಲ್ಲಿ “ಬ್ರಿಟೀಷರ ಗುಲಾಮ”, “ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ”, “ಗಾಂಧೀಜಿಯವರಿಂದ ನಮಗೆ ಯಾವುದೇ ಸ್ವಾತಂತ್ರ್ಯ ದೊರಕಿಲ್ಲ” ಹಾಗೂ “ನಕಲಿ ಗಾಂಧಿ” ಸೇರಿದಂತೆ ಹಲವು ಹೇಳಿಕೆಗಳನ್ನು ಬಳಸಲಾಗಿದೆ ಎಂದು ಅವರು ಆರೋಪಿಸಿದರು.

ಇಂತಹ ಹೇಳಿಕೆಗಳು ಐತಿಹಾಸಿಕ ವ್ಯಕ್ತಿತ್ವವೊಂದರ ಕುರಿತು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯ’ ಹೆಸರಿನಲ್ಲಿ ಸಾಮರಸ್ಯಕ್ಕೆ ಧಕ್ಕೆ?

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕಾದರೂ, ಅದರ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಪ್ರದರ್ಶನಗಳಿಗೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಹೇಳಿದರು.Protest gandhi1

ಗಾಂಧಿ ಜಯಂತಿಯಂದೇ ಗಾಂಧೀಜಿ ಕುರಿತು ವಿವಾದಕ್ಕೆ ಕಾರಣವಾಗಿರುವ ನಾಟಕವನ್ನು ಪ್ರದರ್ಶಿಸುವುದು ಸೂಕ್ತವೇ? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ನಾಟಕದ ಪ್ರದರ್ಶನವನ್ನು ತಕ್ಷಣವೇ ರದ್ದುಪಡಿಸುವಂತೆ ಒತ್ತಾಯಿಸಿದರು.

ಅಡ್ಡಂಡ ಕಾರ್ಯಪ್ಪ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ನಾಟಕದ ರಚನೆ ಮತ್ತು ನಿರ್ದೇಶನ ಮಾಡಿರುವ ಅಡ್ಡಂಡ ಕಾರ್ಯಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.Protest gandhi

ಈ ಸಂದರ್ಭದಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಪೋಸ್ಟರ್‌ ನ್ನು ಸುಟ್ಟು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ಗಾಂಧೀಜಿಯವರ ಗೌರವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ನಾಟಕದ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.demanding jk02_new jk02 new

Key words: Mysuru, Protest, demanding, cancellation, play, Gandhi Hatyeya Satya

English Summary
Title

Protests in Mysuru Demand Cancellation of Controversial Play Gandhi Hatyeya Satya

Short Description
Protests have erupted in Mysuru as progressive groups demand the cancellation of the controversial Kannada play Gandhi Hatyeya Satya (The Truth of Gandhi's Assassination). Directed by former Rangayana head Addanda C. Cariappa, the drama is scheduled at Kiru Rangamandira for Gandhi Jayanti. Activists and Congress leaders accuse the production of distorting history and glorifying Nathuram Godse. While opponents urge the Mysuru district administration to ban the staging to preserve public order, the organizers maintain the script highlights documented historical facts without inciting enmity.
Keywords
Protest, demanding, cancellation, play, Gandhi Hatyeya Satya