Friday, October 2, 2026

BDA Apartments

Home Front Page ಬಿಜೆಪಿ ಜೊತೆ ಚು.ಆಯೋಗ ಶಾಮೀಲು: SIR ಪ್ರಕ್ರಿಯೆ ರದ್ದುಗೊಳಿಸಿ-ಸಚಿವ ಯತೀಂದ್ರ ಸಿದ್ದರಾಮಯ್ಯ

ಬಿಜೆಪಿ ಜೊತೆ ಚು.ಆಯೋಗ ಶಾಮೀಲು: SIR ಪ್ರಕ್ರಿಯೆ ರದ್ದುಗೊಳಿಸಿ-ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್‌,2,2026(www.justkannada.in): ಮುಸ್ಲಿಂರು ನಮಗೆ ಮತ ಹಾಕಲ್ಲ ಎಂದು ಮುಸ್ಲಿಂರ ಮತಗಳನ್ನ ಡೀಲಿಟ್ ಮಾಡಿಸುತ್ತಿದ್ದಾರೆ.  ಎಸ್ ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ನಗರಾಭಿವೃದ್ದಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದರು. ಶಾಸಕರಾದ ಕೆ.ಹರೀಶ್ ಗೌಡ, ಶ್ರೀವತ್ಸ ಸಾಥ್‌ ನೀಡಿದರು.Election Commission gandhi bavan

ಬಳಿಕ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಚುನಾವಣಾ ಆಯೋಗ ವ್ಯವಸ್ಥಿತವಾಗಿ ಸಂಘಟಿತ ಅಪರಾಧ ಮಾಡುತ್ತಿದೆ. ಬಿಜೆಪಿಯವರು ಈ ಅಪರಾಧದಲ್ಲಿ ಪಾಲುದಾರರು. ಮುಸ್ಲಿಂರು ನಮಗೆ ಮತ ಹಾಕಲ್ಲ ಎಂದು ಮುಸ್ಲಿಂರ ಮತಗಳನ್ನ ಡೀಲಿಟ್ ಮಾಡಿಸುತ್ತಿದ್ದಾರೆ. ಬಿಜೆಪಿವರ ಜೊತೆ ಚುನಾವಣಾ ಆಯೋಗ ಶಾಮೀಲಾಗಿದೆ. ನಮಗೆ ಮೊದಲಿನಿಂದಲೂ ಎಸ್ ಐಆರ್ ಬಗ್ಗೆ ಅನುಮಾನ ಇದೆ. ತಕ್ಷಣವೇ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂಮರ ಮತಗಳನ್ನ ಡೀಲಿಟ್ ಮಾಡಿಸುವುದು ಬಹಳ ಸುಲಭ. ಹೆಸರಲ್ಲೇ ಅದು ಅವರ ಧರ್ಮ ಗೊತ್ತಾಗುತ್ತದೆ. ಜೊತೆಗೆ ಅವರು ಗುಂಪು ಗುಂಪಾಗಿಯೇ ಇರುತ್ತಾರೆ. ಹೀಗಾಗಿ ಸುಲಭವಾಗಿ ಅವರ ಹೆಸರುಗಳನ್ನ ಡೀಲಿಟ್ ಮಾಡಿಸಲಾಗುತ್ತಿದೆ. ಫಾರಂ ನಂಬರ್ 7ನಲ್ಲಿ ಆಕ್ಷೇಪಣೆ ಬೇರೆ ವಿಚಾರ‌. ಆದರೆ ಒಬ್ಬೊಬ್ಬರೇ ಬಲ್ಕಾಗಿ ಅರ್ಜಿ ತುಂಬಿದರೆ ಅದರ ಅರ್ಥ ಏನು? ಅವರಿಗೆ ಎಲ್ಲಾ ಎಫಿಕ್ ಕಾರ್ಡ್ ಗಳನ್ನ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.Election Commission yathindra siddaramaiah

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಉತ್ಸವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಈಗಾಗಲೇ ವಿಧಾನಸೌಧ ಮೆಟ್ಟಿಲು ಬಳಿ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ಎಂದು ಸರ್ಕಾರ ಹೇಳಿದೆ.ಯು.ಟಿ ಖಾದರ್ ಅವರ ಅಭಿಪ್ರಾಯ ಹೇಳಿದ್ದಾರೆ. ಹಾಗಾಗಿ ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದರು.BJP jk02

Key words: Election Commission, BJP,  Stop, SIR Process, Minister, Yathindra Siddaramaiah

English Summary
Title

BJP vs Congress Over Electoral Roll: Yathindra Siddaramaiah Demands Neutral ECI

Short Description
A fierce political row has erupted in Karnataka over the Election Commission's Special Intensive Revision (SIR) of electoral rolls. Urban Development Minister Yathindra Siddaramaiah and the Congress party have accused the BJP of manipulating the SIR process to disenfranchise legitimate voters, particularly targeting vulnerable communities. Siddaramaiah urged the Election Commission of India (ECI) to maintain neutrality and transparency. Meanwhile, Chief Minister D.K. Shivakumar demanded a fresh SIR, alleging widespread voter deletions. Conversely, the BJP counter-complained that the ruling Congress is misusing Booth Level Officers (BLOs) to skew data ahead of local polls, turning the revision into a massive standoff.
Keywords
Election Commission, BJP, Stop, SIR Process, Minister, Yathindra Siddaramaiah