Thursday, October 1, 2026

BDA Apartments

Home Front Page ಫಾರ್ಮ್‌ 7 ದುರ್ಬಳಕೆ ಆರೋಪ: ಚು.ಆಯೋಗದ ಮುಂದೆಯೇ ಧರಣಿ ಕುಳಿತ ಸಿಎಂ ಮತ್ತು ಸಚಿವರು

ಫಾರ್ಮ್‌ 7 ದುರ್ಬಳಕೆ ಆರೋಪ: ಚು.ಆಯೋಗದ ಮುಂದೆಯೇ ಧರಣಿ ಕುಳಿತ ಸಿಎಂ ಮತ್ತು ಸಚಿವರು

ಬೆಂಗಳೂರು,ಅಕ್ಟೋಬರ್‌,1,2026 (www.justkannada.in) ಎಸ್‌ ಐಆರ್‌ ನೆಪದಲ್ಲಿ ಮತಗಳವು, ಫಾರ್ಮ್7‌ ದುರ್ಬಳಕೆ ಮಾಡಿಕೊಳ್ಳಲಾಗಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್‌ ಮತ್ತು ಸಂಪುಟದ ಎಲ್ಲಾ ಸಚಿವರು ರಾಜ್ಯ ಚುನಾವಣಾ ಆಯೋಗದ ಮುಂದೆ ಕುಳಿತು ಧರಣಿ ನಡೆಸಿದ್ದಾರೆ.

ಚುನಾವಣಾ ಫಾರ್ಮ್7‌ ದುರ್ಬಳಕೆ ಈ ಮೂಲಕ ಮತಗಳವು ಆರೋಪಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಿಎಂ ಡಿಕೆ ಶಿವಕುಮಾರ್‌ ದೂರು ಸಲ್ಲಿಸಿದರು. ಬಳಿಕ ಹೊರ ಬಂದು ಚುನಾವಣಾ ಆಯೋಗದ ಕಚೇರಿಯ ಮೆಟ್ಟಿಲಿನ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.Allegations cm dks protest

ಸಚಿವ ಸಂಪುಟ ಸಭೆಯನ್ನ ರದ್ದು ಮಾಡಿದ್ದು ಸಿಎಂ ಡಿಕೆ ಶಿವಕುಮಾರ್‌ ಪ್ರತಿಭಟನೆಗೆ ಸಚಿವರು, ಶಾಸಕರು ಸಾಥ್‌ ನೀಡಿದ್ದಾರೆ.  ತಪ್ಪಿತಸ್ಥರ ವಿರದ್ದ ದೂರು ದಾಖಲು ಮಾಡಬೇಕೆಂದು ಪಟ್ಟು ಹಿಡಿದಿದ್ದು ದೂರು ದಾಖಲಿಸುವ ತನಕ ಇಲ್ಲೇ ಇರುವುದಾಗಿ ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಚುನಾವಣಾ ಆಯೋಗದ ಫಾರ್ಮ್‌ 7 ಅನ್ನು ದುರ್ಬಳಕೆ  ಮಾಡಿಕೊಳ್ಳಲಾಗಿದೆ. ಹಲವು ಕ್ಷೇತ್ರಗಳಲ್ಲಿ ಅಕ್ರಮವಾಗಿ ಫಾರ್ಮ್‌ 7 ಸಲ್ಲಿಸಲಾಗಿದೆ. ತಪ್ಪು ಮಾಡಿದವರ ವಿರುದ್ದ ಕಾನೂನಾತ್ಮಕವಾಗಿ ಕ್ರಮ ಆಗಬೇಕು ಫಾರ್ಮ್‌ 7 ಸಲ್ಲಿಸಿ ಮತದಾರರ ಹೆಸರು ಡಿಲಿಟ್‌ ಮಾಡುವ ಕೆಲಸವಾಗಿದೆ ಎಂದು ಡಿಕೆ ಶಿವಕುಮಾರ್‌ ಆರೋಪಿಸಿದರು.Allegations jk02

 

English Summary
Title

Form 7 Misuse: Karnataka CM Stages Sit-In Protest at EC Office

Short Description
Karnataka CM D.K. Shivakumar and state ministers launched a sit-in protest at the Election Commission office over the alleged misuse of Form 7 to illegally delete eligible voters from the electoral rolls. The protest follows accusations that opposition leaders are using fraudulent bulk applications to target minority and low-income voters during the voter revision drive. While local police have filed multiple FIRs, the Chief Minister is demanding a full criminal investigation by the Election Commission of India, vowing to continue the demonstration until immediate action is taken.
Keywords
Allegations, Form 7, misuse, CM and ministers, protest, Election Commission