Thursday, October 1, 2026

BDA Apartments

Home Crime ಡಿಸ್ಟ್ರಿಕ್ ಜಡ್ಜ್‌ ಕಾರಿಗೆ ಆಟೋ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಡಿಸ್ಟ್ರಿಕ್ ಜಡ್ಜ್‌ ಕಾರಿಗೆ ಆಟೋ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಮಂಗಳೂರು,ಅಕ್ಟೋಬರ್‌,1,2026 (www.justkannada.in): ದಕ್ಷಿಣ ಕನ್ನಡ ಜಿಲ್ಲಾ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ವಿನಯ್ ಅವರ ಕಾರಿಗೆ ಆಟೋ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿ ನ್ಯಾಯಾಧೀಶರು ಸೇರಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಸೆ.29 ರಂದು  ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಬಳಿ ನಡೆದ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಮೃತಪಟ್ಟಿದ್ದು, ನ್ಯಾಯಾಧೀಶರು ಸೇರಿದಂತೆ ಇಬ್ಬರು ಗಾಯಗೊಂಡಿದ್ದರು.

ಘಟನೆ ಹಿನ್ನೆಲೆ…

ಸೆಪ್ಟೆಂಬರ್ 29 ರಂದು ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಬಳಿ ಕಾರ್ಗೋ ಆಟೋರಿಕ್ಷಾ, ನ್ಯಾಯಾಧೀಶರ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಒಬ್ಬರು ಸಾವನ್ನಪ್ಪಿದ್ದರು ಮತ್ತು ನ್ಯಾಯಾಧೀಶ ಡಿ. ವಿನಯ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ರಾಧಾ ಮೆಡಿಕಲ್ಸ್ ಅಂಗಡಿಯಿಂದ ನ್ಯಾಯಾಲಯದ ಕಟ್ಟಡಕ್ಕೆ ಹೋಗುವ ರಸ್ತೆಗೆ ಬರುತ್ತಿದ್ದಾಗ, ಸರಕು ಸಾಗಣೆ ಆಟೋರಿಕ್ಷಾ ನ್ಯಾಯಾಲಯದ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಅದು ಬಲಕ್ಕೆ ತಿರುಗಿ ವಿನಯ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಆಟೋರಿಕ್ಷಾ ಪಲ್ಟಿಯಾಗಿ ಸ್ಪೂಟರ್‌ ಗೆ ಡಿಕ್ಕಿಯಾಗಿದೆ.  ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಚಂದ್ರ ಕೆ. (69) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.Auto-rickshaw accident

ಇನ್ನು ಕಾರನ್ನು ಸ್ವತಃನ್ಯಾಯಾಧೀಶ ವಿನಯ್ ಅವರು ಚಲಾಯಿಸುತ್ತಿದ್ದರು. ಈ ನಡುವೆ ನ್ಯಾಯಾಧೀಶ ವಿನಯ್ ಅವರ ಕೈಗೆ ಗಾಯವಾಗಿದೆ. ಬೈಕ್‌ ಸವಾರ ಪ್ಲೇವಿಯರ್ (51) ರಸ್ತೆಗೆ ಬಿದ್ದು ಅವರಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿರುವ ಹಿನ್ನೆಲೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.Auto-rickshaw jk02_new jk02 new

ನ್ಯಾಯಾಧೀಶ ವಿನಯ್ ಅವರ ದೂರಿನಂತೆ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರ ಅವರು ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿಯಾಗಿದ್ದು ಮಂಗಳೂರಿನಲ್ಲಿ ಕಲ್ಪನಾ ಸ್ವೀಟ್ಸ್ ಶಾಪ್ ಗೆ ಸೇರಿದ ಗೂಡ್ಸ್‌ ಆಟೋದಲ್ಲಿ ಚಾಲಕರಾಗಿದ್ದರು. ಅಪಘಾತ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆಟೋ ನೇರವಾಗಿ ಬಂದು ಕಾರಿಗೆ ಡಿಕ್ಕಿಯಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

English Summary
Title

Mangaluru Road Accident: Auto Driver Killed in Crash Involving District Judge Car

Short Description
A tragic three-vehicle road accident near the Dakshina Kannada district court complex in Mangaluru resulted in the death of a 67-year-old goods auto-rickshaw driver, Chandra K. The speeding auto-rickshaw reportedly lost control while travelling downhill on Court Cross Road, colliding with a car driven by First Additional District and Sessions Judge D. Vinay before overturning and hitting a scooter. While the judge sustained minor injuries and the scooter rider was hospitalised, the auto driver succumbed to critical injuries. The Mangaluru East Traffic Police have registered a case of rash driving and launched a full investigation into the crash.
Keywords
Auto-rickshaw, District Judge, car, Accident, One dead, Mangalore