ಮೈಸೂರು,ಸೆಪ್ಟಂಬರ್,10,2026 (www.justkannada.in): ಎಸ್ ಐ ಆರ್ ಕುರಿತು ಕರ್ನಾಟಕದಲ್ಲಿ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಲಿ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆಗ್ರಹಿಸಿದರು.
ಮೈಸೂರಿನಲ್ಲಿ ಎಸ್ ಐಆರ್ ಕುರಿತಂತೆ ಮೈಸೂರಿನ ಕುವೆಂಪುನಗರದ ರಮಗೋವಿಂದ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಂವಾದದಲ್ಲಿ ಮಾತನಾಡಿದ ಬಹುಭಾಷ ನಟ ಪ್ರಕಾಶ್ ರಾಜ್ , ಸದನದಲ್ಲಿ ಎಸ್ ಐಆರ್ ಬಗ್ಗೆ ಸಮಗ್ರ ಚರ್ಚೆ ಆಗಬೇಕು.ಈ ಕುರಿತು ಸಿಎಂ ಡಿಕೆಶಿ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಎಸ್ ಐಆರ್ ಲೋಪದೋಷಗಳನ್ನ ಪತ್ತೆ ಮಾಡಲು ರಾಜ್ಯ ಸರ್ಕಾರ ಸಮಗ್ರವಾಗಿ ಎಲ್ಲಾ ಬೂತ್ ಗಳಲ್ಲೂ ಸೋಶಿಯಲ್ ಆಡಿಟ್ ನಡೆಸಬೇಕು. ಈಗಾಗಲೇ ನಾವು ಕೆಲವು ಸಂಘಟನೆ ಗಳ ಜೊತೆ ಸೇರಿ 100 ಬೂತ್ ಗಳಲ್ಲಿ ಪರಿಶೀಲನೆ ಮಾಡಿ ಎಸ್ ಐಆರ್ ಲೋಪಗಳ 60 ಸಾಕ್ಷಿಗಳನ್ನು ಪತ್ತೆ ಮಾಡಿದ್ದೇವೆ.ರಾಜ್ಯದ ಎಲ್ಲಾ ಬೂತ್ ಗಳ ಸೋಶಿಯಲ್ ಆಡಿಟ್ ಮಾಡಿದರೆ ಇರುವ ಎಲ್ಲಾ ದೋಷಗಳನ್ನ ಪತ್ತೆ ಹಚ್ಚಬಹುದು. ಎಂದರು.
ಆ ಇಬ್ಬರು ದೇಶದ್ರೋಹಿಗಳು..
ಜನರು ಎಲ್ಲಿಯವರೆಗೂ ಬೀದಿಗಿಳಿಯುದಿಲ್ಲವೋ ಅಲ್ಲಿತನಕ ಇವರನ್ನ ಯಾರು ಏನು ಮಾಡಲು ಸಾಧ್ಯವಿಲ್ಲ.ಭಾರತದ್ಯಂತ ಸಿಜೆಪಿಗಿಂತ ದೊಡ್ಡ ಮಟ್ಟದ ಹೋರಾಟವಾಗಬೇಕು. 2023ರ ನಂತರ ಚುನಾವಣಾ ಆಯೋಗ ಮಾಡಿದ ನಿರ್ಧಾರಗಳ ಎಲ್ಲಾ ದಾಖಲೆಗಳನ್ನು ಸುಪ್ರೀಂ ಕೋರ್ಟ್ ವಶಕ್ಕೆ ಪಡೆಯಬೇಕು. ಇಲ್ಲದಿದ್ದರೆ ಆ ದಾಖಲೆಗಳನ್ನು ಬೆಂಕಿಯಲ್ಲಿ ನಾಶ ಮಾಡಲಿದ್ದಾರೆ. ಇದು ಕೇವಲ ಮತಗಳ್ಳತನವಲ್ಲ ಬದಲಿಗೆ ಬಾಬಾ ಸಾಹೇಬರ ಸಂವಿಧಾನ ಕೊಳ್ಳುವ ಪ್ರಯತ್ನವಾಗಿದೆ. ಕೊಲೆಗಾರ ಜ್ಞಾನೇಶ್ ಕುಮಾರ್ ಎಂದು ಗೊತ್ತಾಗಿದೆ. ಇದನ್ನು ಮಾಡಲು ಹೇಳಿದವರು ರಂಗ-ಬಿಲ್ಲ (ಮೋದಿ ಮತ್ತು ಅಮಿತ್ ಶಾ ). ಇವರಿಬ್ಬರು ದೇಶದ್ರೋಹಿಗಳು. ಅಷ್ಟು ಸುಲಭವಾಗಿ ನೆಮ್ಮದಿಯಾಗಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ನಟ ಪ್ರಕಾಶ್ ರಾಜ್ ಕಿಡಿಕಾರಿದರು.
ಜ್ಞಾನೇಶ್ ಕುಮಾರ್ ಪ್ರೆಸ್ ರಿಲೀಸ್ ಮಾಡಿದ್ದು ಅದೊಂದು ತಪ್ಪು ಒಪ್ಪಿಗೆಯಾದಂತೆ. ಕೊಲೆ ಮಾಡುವಾಗ ಸಿಕ್ಕಿಹಾಕಿಕೊಳ್ಳಲಿಲ್ಲ ಆದರೆ ಸಾಕ್ಷ್ಯ ನಾಶ ಮಾಡುವಾಗ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಈಗಾಗಲೇ ಪಾಪದ ಕೊಡ ತುಂಬಿದೆ, ಇದಕ್ಕೆ ಶಿಕ್ಷೆ ಆಗಲೇಬೇಕು, ಜನರು ಈಗ ಪ್ರಜ್ಞಾವಂತರಾಗಿದ್ದಾರೆ ನಟ ಪ್ರಕಾಶ್ ರಾಜ್ ಹೇಳಿದರು.
ಸಂವಾದದಲ್ಲಿ ಮತದಾರರ ಪಟ್ಟಿಯಿಂದ ವಂಚಿತರಾದ ಹಾಗೂ ಹಲವು ಸಂಘಟನೆಗಳು ಭಾಗಿಯಾಗಿದ್ದವು. ಚಿಂತಕ ಕೊಡಗನಹಳ್ಳಿ ರಾಮಯ್ಯ, ಬಡಗಲಾಪುರ ನಾಗೇಂದ್ರ. ಮಹಿಳಾ ಹೋರಾಟಗಾರ್ತಿ ರತಿ ರಾವ್ ಮುಂತಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.






