Tuesday, September 29, 2026

BDA Apartments

Dr. Raj's statue BDA JK_Adv BDA Adv
Home Cinema ಮೂಲಸ್ಥಳದಲ್ಲೇ ಡಾ.ರಾಜ್ ಪುತ್ಥಳಿ ಪುನರ್ ಸ್ಥಾಪನೆ; ಸಚಿವ ಡಾ.ಯತೀಂದ್ರ ನೇತೃತ್ವದ ಸಭೆ ನಿರ್ಧಾರ

ಮೂಲಸ್ಥಳದಲ್ಲೇ ಡಾ.ರಾಜ್ ಪುತ್ಥಳಿ ಪುನರ್ ಸ್ಥಾಪನೆ; ಸಚಿವ ಡಾ.ಯತೀಂದ್ರ ನೇತೃತ್ವದ ಸಭೆ ನಿರ್ಧಾರ

ಮೈಸೂರು, ಸೆಪ್ಟಂಬರ್,29, 2026 (www.justkannada.in): ದಸರಾ ವಸ್ತುಪ್ರದರ್ಶನದ ಆವರಣದಲ್ಲಿದ್ದ ವರನಟ ಡಾ.ರಾಜ್‌ ಕುಮಾರ್ ಅವರ ಪುತ್ಥಳಿ ಸ್ಥಳಾಂತರ ವಿವಾದಕ್ಕೆ ಇದೀಗ ತೆರೆ ಬೀಳುವ ಹಂತ ತಲುಪಿದೆ. ಮೂಲಸ್ಥಳದಲ್ಲೇ ಡಾ.ರಾಜ್‌ ಕುಮಾರ್ ಪುತ್ಥಳಿಯನ್ನು ಪುನರ್ ಸ್ಥಾಪಿಸಲು ನಿರ್ಧರಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಮೂಲಸ್ಥಳದಿಂದ ಪುತ್ಥಳಿಯನ್ನು ಸ್ಥಳಾಂತರಿಸಲಾಗಿತ್ತು. ಇದಕ್ಕೆ ಡಾ.ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಿಂದಿನ ಸ್ಥಳದಲ್ಲೇ ಪುತ್ಥಳಿಯನ್ನು ಮರುಸ್ಥಾಪಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಡಾ.ಯತೀಂದ್ರ ಅವರ ನೇತೃತ್ವದಲ್ಲಿ ಮೈಸೂರು ಪ್ರಾಧಿಕಾರ, ಕನ್ನಡಪರ ಸಂಘಟನೆಗಳು ಹಾಗೂ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘಟನೆಗಳೊಂದಿಗೆ ಸುದೀರ್ಘ ಸಭೆ ನಡೆಯಿತು.Dr. Raj's statue yathindra.jpg123

ಸಭೆಯಲ್ಲಿ ಹಿಂದೆ ಇದ್ದ ಸ್ಥಳದಲ್ಲೇ ಡಾ.ರಾಜ್‌ಕುಮಾರ್ ಪುತ್ಥಳಿಯನ್ನು ಪುನರ್ ಸ್ಥಾಪಿಸಲು ಸಮ್ಮತಿ ವ್ಯಕ್ತವಾಗಿದೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಮುಂದುವರಿದಿದ್ದ ಪುತ್ಥಳಿ ಸ್ಥಳಾಂತರದ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.

ಎಂಎಲ್‌ಸಿ ರಘು ಆಕ್ಷೇಪ

ಪುತ್ಥಳಿ ಸ್ಥಳಾಂತರಕ್ಕೆ ಬಿಜೆಪಿ ಎಂಎಲ್‌ಸಿ ರಘು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೂಲಸ್ಥಳದಲ್ಲೇ ಪುತ್ಥಳಿಯನ್ನು ಪುನರ್ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದರು.

ಇದೇ ವಿಚಾರವಾಗಿ ಕನ್ನಡಪರ ಸಂಘಟನೆಗಳು ಸೆ.30ರೊಳಗೆ ಕ್ರಮ ಕೈಗೊಳ್ಳುವಂತೆ ಸಮಯವಕಾಶ ನೀಡಿದ್ದವು.

ಅಭಿಮಾನಿಗಳ ಅಭಿಪ್ರಾಯಕ್ಕೆ ಮನ್ನಣೆ

ಪುತ್ಥಳಿ ಸ್ಥಳಾಂತರದ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಪ್ರಾಧಿಕಾರ ಅಧ್ಯಕ್ಷ ಆಯೂಬ್ ಖಾನ್, ಡಾ.ರಾಜ್‌ಕುಮಾರ್ ಅಭಿಮಾನಿಗಳು ಇಚ್ಛಿಸಿದಲ್ಲಿ ಪುತ್ಥಳಿಯನ್ನು ಸ್ಥಳಾಂತರಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದರು.original site raj

ಇದೀಗ ಸಚಿವ ಡಾ.ಯತೀಂದ್ರ ನೇತೃತ್ವದ ಸಭೆಯ ಬಳಿಕ ಮೂಲಸ್ಥಳದಲ್ಲೇ ಪುತ್ಥಳಿ ಪುನರ್ ಸ್ಥಾಪನೆಗೆ ಸಮ್ಮತಿ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ.meeting jk02_new jk02 new

ಡಾ.ರಾಜ್‌ಕುಮಾರ್ ಅವರ ಪುತ್ಥಳಿ ಮತ್ತೆ ಮೂಲಸ್ಥಳದಲ್ಲೇ ಪ್ರತಿಷ್ಠಾಪನೆಯಾಗಲಿರುವುದರಿಂದ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಪ್ರಮುಖ ಬೇಡಿಕೆಗೆ ಮನ್ನಣೆ ದೊರೆತಂತಾಗಿದೆ.

Key words: Dr. Raj’s statue, original site, meeting, Minister Dr. Yathindra Siddaramaiah.

English Summary
Title

Dr. Rajkumar Statue to be Reinstalled at Original Site in Mysuru

Short Description
Dr. Rajkumar's statue will be reinstalled at its original site within the Dasara Exhibition Grounds in Mysuru. The decision followed a crucial review meeting led by Dr. Yathindra Siddaramaiah and Karnataka Exhibition Authority (KEA) Chairman Ayub Khan. The bust of the legendary Kannada actor was recently shifted under a tree to make way for a musical fountain project, sparking intense backlash from fans and Kannada organizations. Respecting public sentiment, officials confirmed the restoration of the monument to its prominent location, successfully resolving the brewing controversy ahead of the upcoming festival season.
Keywords
Dr. Raj's statue, original site, meeting, Minister Dr. Yathindra Siddaramaiah