Tuesday, September 29, 2026

BDA Apartments

Shivakumar Seeks CRZ Western Ghats BDA JK_Adv BDA Adv
Home Front Page ಕರಾವಳಿ ನಿಯಂತ್ರಣ ವಲಯ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮವಲಯ ನೀತಿ ಮರುಪರಿಶೀಲಿಸಿ- ಸಿಎಂ ಡಿಕೆಶಿ ಮನವಿ

ಕರಾವಳಿ ನಿಯಂತ್ರಣ ವಲಯ, ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮವಲಯ ನೀತಿ ಮರುಪರಿಶೀಲಿಸಿ- ಸಿಎಂ ಡಿಕೆಶಿ ಮನವಿ

ನವದೆಹಲಿ, ಸೆಪ್ಟಂಬರ್,29,2026 (www.justkannada.in): “ಕರ್ನಾಟಕದ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಅಧಿಸೂಚನೆ ಜಾರಿಗೆ ಸಂಬಂಧಿಸಿದಂತೆ ರಾಜ್ಯದ ವಾಸ್ತವ ಸ್ಥಿತಿಗತಿಗಳನ್ನು ಅರಿತು, ಅದಕ್ಕೆ ತಕ್ಕಂತೆ ಸೂಕ್ತ ತಿದ್ದುಪಡಿ ಹಾಗೂ ನಿಯಮಗಳನ್ನು ಸಡಿಲಿಸುವಂತೆ” ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರಿಗೆ ಶಿವಕುಮಾರ್ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.DK Shivakumar

ಸಿಆರ್ ಝಡ್ ನಕ್ಷೆಗಳ ದೋಷ ತಿದ್ದುಪಡಿ ಮಾಡಿ

“’ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ಹಾಗೂ ಕರಾವಳಿ ವಸತಿ ಪ್ರದೇಶಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು. ಪ್ರಸ್ತುತ ಅನುಮೋದಿತ ಕರಾವಳಿ ವಲಯ ನಿರ್ವಹಣಾ ಯೋಜನೆಯ ನಕ್ಷೆಯಲ್ಲಿ ಹಲವು ದೋಷಗಳಿವೆ. ಕಂದಾಯ ದಾಖಲೆಗಳು, ನವೀಕೃತ ಉಪಗ್ರಹ ಚಿತ್ರಣಗಳು ಮತ್ತು ನೈಜ ಸ್ಥಳ ಪರಿಶೀಲನೆ (Ground-truthing) ನಡೆಸಿ ಸರ್ವೆ ಸಂಖ್ಯೆ-ವಾರು ತಿದ್ದುಪಡಿ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

ಗೋವಾ ಮಾದರಿಯಲ್ಲಿ ಕರ್ನಾಟಕ ಕರಾವಳಿ ಭಾಗಕ್ಕೂ ನಿಯಮ ಸಡಿಲಿಕೆ ಮಾಡಿ

“ಕರಾವಳಿ ಜನರ ಸಾಂಪ್ರದಾಯಿಕ ಮೀನುಗಾರಿಕೆ, ದೋಣಿ ದುರಸ್ತಿ, ಬಲೆ ಹೆಣೆಯುವುದು, ಮೀನು ಸಂಸ್ಕರಣೆ ಮತ್ತು ಸಾಂಪ್ರದಾಯಿಕ ಮನೆಗಳ ದುರಸ್ತಿ/ಪುನರ್ನಿರ್ಮಾಣಕ್ಕೆ ಸಿಆರ್ಝಡ್ ಚೌಕಟ್ಟಿನೊಳಗೆ ಅಗತ್ಯ ಸಡಿಲಿಕೆ ಹಾಗೂ ಮಾನ್ಯತೆ ನೀಡಬೇಕು ಎಂದು ಈ ಭಾಗದ ಮೀನುಗಾರ ಸಮುದಾಯ, ಕರಾವಳಿ ಪ್ರದೇಶದ ನಿವಾಸಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಜನ ಪ್ರತಿನಿಧಿಗಳು ಮತ್ತು ಇತರ ಭಾಗೀದಾರರು ವಿನಂತಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಧಕ್ಕೆಯಾಗದಂತೆ ಗೋವಾ ರಾಜ್ಯಕ್ಕೆ ಸಿಆರ್ಝಡ್ ನಿಯಮಾವಳಿಗಳಲ್ಲಿ ನೀಡಲಾಗಿರುವ ಸಡಿಲಿಕೆಗಳನ್ನು ಕರ್ನಾಟಕಕ್ಕೂ ವಿಸ್ತರಿಸಬೇಕು” ಎಂದು ಮನವಿ ಮಾಡಿದ್ದಾರೆ.

ಪಶ್ಚಿಮ ಘಟ್ಟಗಳ ಇಎಸ್ ಝಡ್ ಅಧಿಸೂಚನೆ ಮರುಪರಿಶೀಲನೆ

“ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಗೆ ಕೃಷಿ ಭೂಮಿ, ತೋಟಗಳು ಮತ್ತು ಮಾನವ ವಸತಿ ಪ್ರದೇಶಗಳನ್ನು ಸೇರಿಸಿರುವುದು ಕಳವಳಕಾರಿ.  ಈ ಕುರಿತು ಪ್ರಧಾನಮಂತ್ರಿಯವರಿಗೂ ಪತ್ರ ಬರೆಯಲಾಗಿದ್ದು, ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ವೈಜ್ಞಾನಿಕ ಸರ್ವೆ, ಭೌತಿಕ ಪರಿಶೀಲನೆ ನಡೆಸಬೇಕು. ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ರಾಜ್ಯದೊಂದಿಗೆ ಚರ್ಚಿಸಿದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಬೇಕು” ಎಂದು ಕೋರಿದ್ದಾರೆ. review dk shivakumar-dks dk shivakumar dks

“ಮ್ಯಾಂಗ್ರೋವ್ ಗಳು (ಕಾಂಡ್ಲಾ ವನಗಳು), ಮರಳಿನ ದಿಬ್ಬಗಳು ಹಾಗೂ ಆಮೆಗಳ ಸಂತಾನೋತ್ಪತ್ತಿ ಪ್ರದೇಶಗಳಂತಹ CRZ-I ರಕ್ಷಣೆಯಲ್ಲಿ ಯಾವುದೇ ರಾಜಿಯಲ್ಲ. ಆದರೆ, ವೈಜ್ಞಾನಿಕ ಹಾಗೂ ಸತ್ಯಾಸತ್ಯತೆಯ ಆಧಾರದ ಮೇಲೆ ನಿಯಮಗಳನ್ನು ಜಾರಿಗೊಳಿಸುವುದರಿಂದ ಪರಿಸರ ಸಂರಕ್ಷಣೆ ಮತ್ತು ಸ್ಥಳೀಯರ ಜೀವನೋಪಾಯ ಎರಡನ್ನೂ ಕಾಯ್ದುಕೊಳ್ಳಬಹುದು” ಎಂದು  ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.Coastal Regulation Zone jk02_new jk02 new

 

English Summary
Title

CM DK Shivakumar Seeks CRZ & Western Ghats ESA Policy Review

Short Description
Karnataka CM DK Shivakumar has urged the Center to review the Coastal Regulation Zone (CRZ) and Western Ghats Ecologically Sensitive Area (ESA) policies. Meeting Union Minister Bhupender Yadav, he rejected the draft Kasturirangan report, calling it "unscientific" for relying solely on satellite data. Shivakumar demanded a one-year window for a ground-level physical survey to protect local livelihoods, farmlands, and habitations. While backing the protection of core zones like mangroves, he emphasized that the current Coastal Zone Management Plan maps contain inaccuracies that harm fishing communities. The state seeks a balanced approach to safeguard both environment and development.
Keywords
CM, DK Shivakumar, review, Coastal Regulation Zone, Western Ghats