Monday, September 28, 2026

BDA Apartments

22 Ministers BDA JK_Adv BDA Adv
Home Front Page ಈ ಬಾರಿಗೆ ದಸರಾಗೆ 22 ಸಚಿವರ ಉಸ್ತುವಾರಿ: ಹೊಸ ಸಂಪ್ರದಾಯಕ್ಕೆ ನಾಂದಿ- ಸಚಿವ ಯತೀಂದ್ರ ಸಿದ್ದರಾಮಯ್ಯ

ಈ ಬಾರಿಗೆ ದಸರಾಗೆ 22 ಸಚಿವರ ಉಸ್ತುವಾರಿ: ಹೊಸ ಸಂಪ್ರದಾಯಕ್ಕೆ ನಾಂದಿ- ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಸೆಪ್ಟಂಬರ್,28,2026 (www.justkannada.in): ಇದೇ ಮೊದಲ ಬಾರಿಗೆ ದಸರಾಗೆ 22 ಸಚಿವರಿಗೆ ಉಸ್ತುವಾರಿ ನೀಡಲಾಗಿದೆ. ಈ ಮೂಲಕ ಇದು ಹೊಸ ಸಂಪ್ರದಾಯಕ್ಕೆ ನಾಂದಿ ಆಗಿದೆ ಎಂದು ನಗರಾಭಿವೃದ್ದಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ನುಡಿದಿದ್ದಾರೆ.

ಇಂದು ನಡೆದ ಉಪಹಾರಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, 10 ದಿನ ನವರಾತ್ರಿ ಸಚಿವರ ಉಸ್ತುವಾರಿ ಜವಾಬ್ದಾರಿ ಕೊಟ್ಟಿದ್ದಾರೆ. ಒಂದು ದಿನಕ್ಕೆ ಇಬ್ಬರು ಸಚಿವರು ಉಸ್ತುವಾರಿ. ಇದು ಸಿಎಂ ಪರಿಕಲ್ಪನೆ.  ದಸರಾ ಹೆಚ್ಚು ಅಚ್ಚುಕಟ್ಟಾಗಿ ನಡೆಸಲು ಈ ಪ್ಲ್ಯಾನ್ ಮಾಡಿದ್ದಾರೆ. ಇಲ್ಲಿ ಯಾರ ಕೈ ಮೇಲೂ ಅಲ್ಲ ಯಾರ ಕೈ ಕೆಳಗೂ ಆಗಲ್ಲ. ನಾನೇ ಎಲ್ಲಾ ಸಮಿತಿಯ ಉಸ್ತುವಾರಿ ಆಗಿದ್ದೇನೆ ನನಗೆ ಏನೂ ಇದು ಹಿನ್ನೆಡೆ ಅಲ್ಲ ಎಂದರು.22 Ministers yathindra siddaramaiah.jpg1 yathindra siddaramaiah 3.jpg1 3

ಉಪಹಾರಕೂಟಕ್ಕೆ ತಡವಾಗಿ ಬಂದಿದ್ದಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಯತೀಂದ್ರ ಸಿದ್ದರಾಮಯ್ಯ., ಮೈಸೂರಿನಲ್ಲಿ ನಮ್ಮದು ಹೊಸ ಮನೆ. ವಸ್ತುಗಳು ಬಹಳ ಕಡೆ ಚೆಲ್ಲಾಪಿಲ್ಲಿ ಆಗಿದೆ. ಮನೆಯಲ್ಲಿ ಅಮ್ಮ ಇರಲಿಲ್ಲ. ಯಾವ ಕೆಲಸಗಾರರು ಇರಲಿಲ್ಲ. ಹೀಗಾಗಿ ಕೆಲವೊಂದಿಷ್ಟು ವ್ಯವಸ್ಥೆಗಳನ್ನ ಮಾಡಿ ಬರುವುದರಲ್ಲಿ ತಡವಾಯಿತು. ಉದ್ದೇಶಪೂರ್ವಕವಾಗಿ ನಾನು ತಡವಾಗಿ ಬಂದಿಲ್ಲ. ತನ್ವೀರ್ ಸೇಠ್ ಜೊತೆ ಫೋನ್ ನಲ್ಲಿ ಈ ವಿಚಾರದಲ್ಲಿ ಮಾತನಾಡಿದ್ದೇನೆ ಎಂದರು.In-charge jk02_new jk02 new

 

English Summary
Title

Karnataka Deploys 22 Ministers for Mysuru Dasara 2026: A New Tradition Begins

Short Description
In a groundbreaking move, the Karnataka government has introduced a new tradition for Mysuru Dasara 2026 by deploying 22 Cabinet Ministers to oversee the 11-day festival. While overall supervision remains with Mysuru District In-Charge Minister Dr. Yathindra Siddaramaiah, a strategic rotational roster will place two ministers on duty each day. This historic arrangement aims to elevate the grand scale of the celebration, manage massive crowds, and ensure flawless coordination across all major cultural events, making it a benchmark year for the state's flagship tourism festival.
Keywords
22 Ministers, In-charge, Mysore Dasara, New Tradition, Minister, Yathindra Siddaramaiah