ಬೆಂಗಳೂರು,ಸೆಪ್ಟಂಬರ್,26,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, ಜ್ಞಾನೇಶ್ ಕುಮಾರ್ ಬರುವ ಮುಂಚೆಯೂ ಕಾಂಗ್ರೆಸ್ ಸೋಲುತ್ತಿದ್ದರು ಎಂದು ಲೇವಡಿ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುರೇಶ್ ಕುಮಾರ್, ಕಾಂಗ್ರೆಸ್ ಪಕ್ಷವು ತಮ್ಮ ನಿರಂತರ ಸೋಲುಗಳಿಗೆ ಇಂತಹ ವಿಷಯಗಳನ್ನು ಮುನ್ನಲೆಗೆ ತಂದು ಯಾರನ್ನಾದರೂ ಹೊಣೆ ಮಾಡಲು ನೋಡುತ್ತಿದೆ.
ಕಾಂಗ್ರೆಸ್ ಸೋಲಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕು. ಜ್ಞಾನೇಶ್ ಕುಮಾರ್ ಬರುವ ಮುಂಚೆಯೂ ಕಾಂಗ್ರೆಸ್ ಸೋಲುತ್ತಿದ್ದರು. ಈಗ ಚುನಾವಣಾ ಆಯೋಗದ ವಿರುದ್ದ ಮಾತನಾಡುತ್ತಿದ್ದಾರೆ. ಆ ಕಾಂಗ್ರೆಸ್ ಹೋರಾಟದಲ್ಲಿ ಸತ್ಯವಿಲ್ಲ. 60 ವರ್ಷ ದೇಶಕ್ಕೆ ಸೇವೆ ಮಾಡಿದ ಕಾಂಗ್ರೆಸ್ ಗೆ ಇದು ಸೂಕ್ತವಲ್ಲ ಎಂದು ಸುರೇಶ್ ಕುಮಾರ್ ಕಿಡಿಕಾರಿದರು.
Congress, demand, resignation CEC Gyanesh Kumar, BJP, MLA, S. Suresh Kumar…







