Saturday, September 26, 2026

BDA Apartments

Asian Games BDA JK_Adv BDA Adv
Home Front Page ಏಷ್ಯನ್ ಗೇಮ್ಸ್: ಇರಾನ್ ಮಣಿಸಿ ಚಿನ್ನದ  ಪದಕಕ್ಕೆ ಮುತ್ತಿಕ್ಕಿದ ಭಾರತದ ಮಹಿಳಾ ಕಬಡ್ಡಿ ತಂಡ

ಏಷ್ಯನ್ ಗೇಮ್ಸ್: ಇರಾನ್ ಮಣಿಸಿ ಚಿನ್ನದ  ಪದಕಕ್ಕೆ ಮುತ್ತಿಕ್ಕಿದ ಭಾರತದ ಮಹಿಳಾ ಕಬಡ್ಡಿ ತಂಡ

ಟೋಕಿಯೋ,ಸೆಪ್ಟಂಬರ್‌,26,(www.justkannada): ಜಪಾನ್ ‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್‌ನಲ್ಲಿ   ಭಾರತದ ಮಹಿಳಾ ಕಬಡ್ಡಿ ತಂಡವು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.

ರೋಚಕವಾಗಿ ನಡೆದ ಕಬಡ್ಡಿ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಮಣಿಸಿದ ಭಾರತೀಯ ಮಹಿಳೆ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಪಂದ್ಯದ ಆರಂಭದಿಂದಲೂ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತೀಯ ಆಟಗಾರ್ತಿಯರು, ಎದುರಾಳಿ ತಂಡಕ್ಕೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡದೆ ತೀವ್ರ ಪೈಪೋಟಿ ನೀಡಿ ಗೆಲುವಿನ ನಗೆ ಬೀರಿದರು.

ಈ ಗೆಲುವಿನೊಂದಿಗೆ ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಸ್ವರ್ಣ ಸೇರ್ಪಡೆಯಾಗಿದ್ದು, ದೇಶದ ಪದಕಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಭಾರತವು ಇದುವರೆಗೆ ಒಟ್ಟು 3 ಚಿನ್ನದ ಪದಕಗಳು ಸೇರಿದಂತೆ ಒಟ್ಟು 27 ಪದಕಗಳನ್ನು ತನ್ನ ಮುಡಿಗೆೇರಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.Asian Games jk02_new jk02 new

 

English Summary
Title

Asian Games 2026: Indian Women's Kabaddi Team Wins Gold over Iran

Short Description
The Indian women’s kabaddi team clinched a thrilling gold medal at the 2026 Asian Games in Aichi-Nagoya, Japan, by defeating Iran 37-34 in a high-stakes final. Led by captain Pushpa Rana, India maintained an early 22-16 lead at half-time. Despite a fierce second-half comeback by Iran, stellar raids from Pooja and a decisive late tackle secured the championship. This historic win marks India's fourth Asian Games gold medal in women’s kabaddi, avenging their previous losses and cementing their continental dominance in the sport.
Keywords
Asian Games, Indian women, kabaddi team, gold medal, defeating Iran.