ಮೈಸೂರು, ಸೆಪ್ಟಂಬರ್,25, 2026(www.justkannada.in) ಮೈಸೂರು ದಸರಾ ಎಂದರೆ ಗಜಪಡೆಗಳ ಗಜಪಯಣ, ಅಂಬಾರಿ ಆನೆಗಳ ವೈಭವ. ಆದರೆ ಈ ಬಾರಿ ದಸರಾ ಮಹೋತ್ಸವಕ್ಕೆ ಕರಾವಳಿಯ ಕಂಬಳದ ಕೋಣಗಳೂ ಹೊಸ ಮೆರುಗು ನೀಡಲಿವೆ.
ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಕಂಬಳ ಕೂಟ ನಡೆಯಲಿದ್ದು, ಕರಾವಳಿಯಿಂದ ಸುಮಾರು 150ರಿಂದ 160 ಜೊತೆ ಪ್ರಸಿದ್ಧ ಕಂಬಳದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.
ಮೈಸೂರಿನ ರಿಂಗ್ ರೋಡ್ ವ್ಯಾಪ್ತಿಯ 20 ಎಕರೆ ಪ್ರದೇಶದಲ್ಲಿ ‘ವಿಜಯ ದಶಮಿ’ ಕಂಬಳದ ಕರೆ ಸಜ್ಜಾಗುತ್ತಿದೆ. 147 ಮೀಟರ್ ಉದ್ದದ ಕರೆಯಲ್ಲಿ 140 ಮೀಟರ್ ಓಟದ ಅಂತರ ಇರಲಿದೆ. ಅ.15ರಂದು 5 ಜೊತೆ ಕೋಣಗಳೊಂದಿಗೆ ಟ್ರಯಲ್ ಓಟ ನಡೆಯಲಿದೆ.
ಅ.16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೋಣಗಳ ‘ಪಯಣ’ ಆರಂಭವಾಗಲಿದೆ. ಮಡಿಕೇರಿಯಲ್ಲಿ 2ರಿಂದ 3 ಗಂಟೆ ವಿಶ್ರಾಂತಿ ನೀಡಿ, ಅಂದು ರಾತ್ರಿ ಮೈಸೂರಿಗೆ ತಲುಪಲಿವೆ. ಅ.17ರಂದು ಸಂಪೂರ್ಣ ವಿಶ್ರಾಂತಿ ನೀಡಿ, ಅ.18 ಮತ್ತು 19ರಂದು ಕಂಬಳ ನಡೆಯಲಿದೆ.
ಗಜಪಡೆಗಳ ಗಜಪಯಣಕ್ಕೆ ಸಾಕ್ಷಿಯಾಗುತ್ತಿದ್ದ ಮೈಸೂರು ದಸರಾ, ಈ ಬಾರಿ ಕರಾವಳಿಯ ಕಂಬಳದ ಕೋಣಗಳ ಪಯಣಕ್ಕೂ ಸಾಕ್ಷಿಯಾಗಲಿದೆ.
Mysore Dasara, kambala, Journey , Buffaloes






