ಮೈಸೂರು,ಸೆಪ್ಟಂಬರ್,25,2026 (www.justkannada.in): 2028ಕ್ಕೆ ಡಿ.ಕೆ ಶಿವಕುಮಾರ್ ಮತ್ತೆ ಮುಖ್ಯಮಂತ್ರಿಯಾಗಲಿ. ನನಗೂ ಇನ್ನೂ ವಯಸ್ಸಿದೆ. ನಾನು ಇನ್ನೂ ಕಾಯುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, 2028ಕ್ಕೆ ಡಿಕೆಶಿ ಸಿಎಂ ಆಗಲಿ ಡಿಕೆ ಶಿವಕುಮಾರ್ ರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ. ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದಿದ್ದೆ. ಡಿಕೆ ಶಿವಕುಮಾರ್ ಅವರು ಮುಂದೆಯೂ ನಾನೇ ಸಿಎಂ ಅಂತಿದ್ದಾರೆ. ಸಂತೋಷ ನನಗೆ ಅವರೇ ಸಿಎಂ ಆಗಲಿ ನಾವು ಕಾಯುತ್ತೇವೆ ಎಂದರು.
ಆರ್ಥಿಕ ಇಲಾಖೆ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದಿಲ್ಲ. ಬಜೆಟ್ ನಲ್ಲಿ ನಾವು ಏನು ಘೋಷಣೆ ಮಾಡಿದ್ದೇವೋ ಅಷ್ಟೆಕ್ಕೆ ಮಾತ್ರ ನಮ್ಮ ಬಳಿ ಹಣವಿದೆ ಎಂದು ಇಲಾಖೆ ಹೇಳಿದೆ. ಹೊಸ ಘೋಷಣೆಗೆ ಹಣ ಹೊಂದಿಸುವುದು ಕಷ್ಟ ಅಂದಿದೆ. ಇದನ್ನೂ ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
Key words: DK Shivakumar, become, CM, 2028, Minister, Satish Jarkiholi







