ಬೆಂಗಳೂರು,ಸೆಪ್ಟಂಬರ್,24,2026 (www.justkannada.in) ಕೇಂದ್ರ ಚುನಾವಣಾ ಆಯೋಗದೊಳಿಗಿನ ಭಿನ್ನಾಭಿಪ್ರಾಯ ಬಹಿರಂಗವಾದ ಬೆನ್ನಲ್ಲೆ ಕೇಂದ್ರ ಮುಖ್ಯಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಹಾಗೂ ಜ್ಞಾನೇಶ್ ಕುಮಾರ್ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಜ್ಞಾನೇಶ್ ಕುಮಾರ್ ದೇಶದ್ರೋಹಿ. ಕೂಡಲೇ ರಾಜೀನಾಮೆ ನೀಡಬೇಕು. 2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನವಾಗಿದೆ. ದೇಶದ ಜನರ ಮತದಾನದ ಹಕ್ಕನ್ನು ನಾಶ ಮಾಡಲಾಗುತ್ತಿದೆ. ಮತಗಳ್ಳತನದಿಂದ ಪ್ರತಿ ಭಾರತೀಯನ ಅಧಿಕಾರ ಹನನವಾಗಿದೆ . ಪ್ರಜಾಪ್ರಬುತ್ವ ವ್ಯವಸ್ಥೆ ಹಾಳು ಮಾಡಲು ನಾವು ಬಿಡಿವುದಿಲ್ಲ ಮುಂದಿನ 6 ತಿಂಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ ಮತಗಳ್ಳತನಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕ್ಷ್ಯ ಇವೆ ಎಂದರು.
ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಪಾರದರ್ಶಕತೆ ಕಾಪಾಡುವುದು ಚುನಾವಣಾ ಆಯೋಗದ ಜವಾಬ್ದಾರಿ. ಸರ್ಕಾರ ಚುನಾವಣಾ ಆಯೋಗವನ್ನ ದೊಡ್ಡ ಸ್ಥಾನದಲ್ಲಿ ಕೂರಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ಇಡೀ ಪಿತೂರಿ ರೂಪಿಸಿದ್ದಾರೆ. ಜ್ಞಾನೇಶ್ ಕುಮಾರ್ ರನ್ನು ರಕ್ಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Key words: Gyanesh Kumar, traitor, resign, immediately, Rahul Gandhi, demands.







