Wednesday, July 29, 2026

BDA Apartments

Home Front Page ಮೈಸೂರಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ: ಕುತೂಹಲ ಮೂಡಿಸಿದ ಡಿ.ಕೆ ಶಿವಕುಮಾರ್ ಮತ್ತು ಸಾ.ರಾ ಮಹೇಶ್...

ಮೈಸೂರಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ: ಕುತೂಹಲ ಮೂಡಿಸಿದ ಡಿ.ಕೆ ಶಿವಕುಮಾರ್ ಮತ್ತು ಸಾ.ರಾ ಮಹೇಶ್ ರಹಸ್ಯ ಮಾತುಕತೆ….

ಮೈಸೂರು,ನ,8,2019(www.justkannada.in):   ಮೈಸೂರಿನ ಪ್ರವಾಸದಲ್ಲಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಂದು ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಮೈಸೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖ ಮಠಕ್ಕೆ ಮಾಜಿ ಸಚಿವ  ಡಿಕೆ ಶಿವಕುಮಾರ್ ಭೇಟಿ ಸೋಮನಾಥ ಸ್ವಾಮೀಜಿ ಅವರ ಅಶಿರ್ವಾದ ಪಡೆದರು.  ಡಿಕೆ ಶಿವಕುಮಾರ್ ಗೆ ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಜೆ.ಡಿ‌.ಎಸ್ ಮುಖಂಡರು ಸಾಥ್ ನೀಡಿದರು.

ಮಾಜಿ ಸಚಿವರಾದ ಡಿ. ಕೆ ಶಿವಕುಮಾರ್ ಮತ್ತು ಸಾ.ರಾ ಮಹೇಶ್ ಮಠದಲ್ಲೇ  ರಹಸ್ಯ ಮಾತುಕತೆ ನಡೆಸಿದರು. ಶಾಖಾ ಮಠದ ಪೀಠಾಧಿಪತಿ ಶ್ರೀ ಸೋಮನಾಥ ಸ್ವಾಮೀಜಿಯವರನ್ನೂ ಹೊರಗಿಟ್ಟು ಇಬ್ಬರೇ ಪ್ರತ್ಯೇಕವಾಗಿ ಕೊಠಡಿಯೊಳಗೆ ಕುಳಿತು ಮಾತುಕತೆ ನಡೆಸಿದರು.

ಮಾಜಿ ಶಾಸಕ ವಾಸು ಜೊತೆ  ಶ್ರೀಗಳು ಕೊಠಡಿಯ ಹೊರಗೆ ಕುಳಿತಿದ್ದರು. ಇಬ್ಬರು ನಾಯಕರ ರಹಸ್ಯ ಮಾತುಕತೆ ಭಾರೀ ಕುತೂಹಲಕ್ಕೆಡೆ ಮಾಡಿಕೊಟ್ಟಿತು.

Key words: mysore –adi chunchanagiri math–DK Shivakumar –SA Ra Mahesh– secret talks