Thursday, September 24, 2026

BDA Apartments

Home Front Page JSS ಕಾನೂನು ಕಾಲೇಜು ಪದವೀದರರ ದಿನ ಸೆ.26 ;  ರೋಹನ್ ವಿ. ಗಂಗಾಡ್ಕರ್ ಟಾಪರ್.

JSS ಕಾನೂನು ಕಾಲೇಜು ಪದವೀದರರ ದಿನ ಸೆ.26 ;  ರೋಹನ್ ವಿ. ಗಂಗಾಡ್ಕರ್ ಟಾಪರ್.

 

ಮೈಸೂರು‌, ಸೆ.೨೪, ೨೦೨೬ : ನಗರದ ಜೆಎಸ್‌ಎಸ್ ಕಾನೂನು ಕಾಲೇಜಿನ 18ನೇ ಪದವೀಧರರ ದಿನಾಚರಣೆ ಸೆಪ್ಟೆಂಬರ್ 26ರಂದು ಸಂಜೆ 4.30ಕ್ಕೆ ನಡೆಯಲಿದೆ. ಈ ಬಾರಿಯ ಪದವೀಧರರ ದಿನದ ಅಂಗವಾಗಿ ವಿವಿಧ ವಿಭಾಗಗಳ ಟಾಪರ್‌ಗಳ ಪಟ್ಟಿಯನ್ನು ಕಾಲೇಜು ಪ್ರಕಟಿಸಿದೆ.

ಬಿ.ಎ.ಎಲ್‌ಎಲ್‌ಬಿ. (ಆನರ್ಸ್) ವಿಭಾಗದಲ್ಲಿ ರೋಹನ್ ವಿ. ಗಂಗಾಡ್ಕರ್ ಅವರು ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರ ಬಳಿಕ ಆದಿಮೂಲಂ ಯೋಗಲಕ್ಷ್ಮಿ ದ್ವಿತೀಯ, ತಮನ್ನಾ ಫಿರ್ದೋಸೆ ಜಿ.ಎಸ್. ತೃತೀಯ ರ‍್ಯಾಂಕ್ ಪಡೆದಿದ್ದಾರೆ.

ಬಿಬಿಎ ಎಲ್‌ಎಲ್‌ಬಿ. (ಆನರ್ಸ್) ವಿಭಾಗದಲ್ಲಿ ಪಿ.ಜಿ. ಲಿಶಾ ಪ್ರಥಮ ರ‍್ಯಾಂಕ್ ಪಡೆದಿದ್ದು, ಎಲ್‌ಎಲ್‌ಬಿ. ಮೂರು ವರ್ಷದ ಕೋರ್ಸ್‌ನಲ್ಲಿ ತಮಿಳ್ಝಿನಿ ವಿ.ಕೆ. ಹಾಗೂ ಎಲ್‌ಎಲ್‌ಎಂ ಎರಡು ವರ್ಷದ ಕೋರ್ಸ್‌ನಲ್ಲಿ ಅಲ್ಫೋನ್ಸಾ ಜಾರ್ಜ್ ಪ್ರಥಮ ಸ್ಥಾನ ಗಳಿಸಿದ್ದಾರೆ.

JSS Law College jk02_new jk02 new

2025-26ನೇ ಸಾಲಿನಲ್ಲಿ ಜೆಎಸ್‌ಎಸ್ ಕಾನೂನು ಕಾಲೇಜಿನಿಂದ ಒಟ್ಟು 152 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಇದರಲ್ಲಿ ಬಿ.ಎ.ಎಲ್‌ಎಲ್‌ಬಿ. (ಆನರ್ಸ್) 42, ಬಿಬಿಎ ಎಲ್‌ಎಲ್‌ಬಿ. (ಆನರ್ಸ್) 49, ಎಲ್‌ಎಲ್‌ಬಿ. ಮೂರು ವರ್ಷ 44 ಹಾಗೂ ಎಲ್‌ಎಲ್‌ಎಂ 17 ವಿದ್ಯಾರ್ಥಿಗಳು ಸೇರಿದ್ದಾರೆ.

ಸೆ.26ರಂದು ನಡೆಯಲಿರುವ ಪದವೀಧರರ ದಿನಾಚರಣೆಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಶ್ರೀ ಸಂದೀಪ್ ಮೆಹ್ತಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀ ದಿನೇಶ್ ಕುಮಾರ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸುಮಾರು 400ಕ್ಕೂ ಹೆಚ್ಚು ಪೋಷಕರು ಹಾಗೂ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

JSS Law College law college

2026ರ ಟಾಪರ್ಸ್ :

ಬಿ.ಎ.ಎಲ್‌ಎಲ್‌ಬಿ. (ಆನರ್ಸ್)

  1. ರೋಹನ್ ವಿ. ಗಂಗಾಧ್ಕರ್
  2. ಆದಿಮೂಲಂ ಯೋಗಲಕ್ಷ್ಮಿ
  3. ತಮನ್ನಾ ಫಿರ್ದೋಸೆ ಜಿ.ಎಸ್.
  4. ಶಶ್ವತಿ ಎನ್.
  5. ಸಂಪತ್ ಕುಮಾರ್ ನಾಗರಾಜು ಜೋಶಿ

ಬಿಬಿಎ ಎಲ್‌ಎಲ್‌ಬಿ. (ಆನರ್ಸ್)

  1. ಪಿ.ಜಿ. ಲಿಶಾ
  2. ಅನನ್ಯಾ ವಿ.
  3. ಬಿಂದು ಡಿ.
  4. ಹರ್ಷಿತಾ ಎಸ್.
  5. ಕೃತಿ ಕೈಲಾರ್

ಎಲ್‌ಎಲ್‌ಬಿ. (3 ವರ್ಷ)

  1. ತಮಿಳ್ಝಿನಿ ವಿ.ಕೆ.
  2. ಕೆ.ಎಸ್. ಜಾಹ್ನವಿ
  3. ಚೇತನ್ ಪಿ.ಜಿ.
  4. ಲೋಬೋ ಲೊರೈನ್ ಲಾರೆನ್ಸ್
  5. ಛಾಯಾ
  6. ಭುವನ್ ಗೌಡ ಜಿ.ಆರ್.

English Summary
Title

JSS Law College Announces Toppers for 18th Graduation Day Ceremony

Short Description
JSS Law College will celebrate its 18th Graduation Day on September 26 at 4:30 PM. Ahead of the event, the prestigious institution announced its department toppers. Rohan V. Gangadkar emerged as the overall college topper, securing the first rank in the BA LLB (Hons) program, followed by Adimoolam Yogalakshmi and Tamanna Firdose G.S. in second and third places. Additionally, P.G. Lisha topped the BBA LLB (Hons) stream, while Tamilzhini V.K. and Alphonsa George bagged the first ranks in the 3-year LLB and 2-year LLM courses, respectively.
Keywords
JSS Law College, Graduation Day, toppers list, Rohan V Gangadkar, law colleges in Mysore, LLB and LLM course toppers