Wednesday, October 7, 2026

BDA Apartments

Selfless service BDA JK_Adv BDA Adv
Home Front Page ಹಿರಿಯ ಕ್ರೀಡಾ ಪತ್ರಕರ್ತ ಡಿ.ಗರುಡ ನಿಧನ

ಹಿರಿಯ ಕ್ರೀಡಾ ಪತ್ರಕರ್ತ ಡಿ.ಗರುಡ ನಿಧನ

ಬೆಂಗಳೂರು, ನವೆಂಬರ್ 08, 2019 (www.justkannada.in): ಗದುಗಿನ ಖ್ಯಾತ ನಾಟಕಕಾರ ಗರುಡ ಸದಾಶಿವರಾಯರ ಮೊಮ್ಮಗ ದಿಗಂಬರ ಯೋಗೇಶ ಗರುಡ (45) ನಿಧನರಾಗಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಡಿ.ಗರುಡ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಸುಮಾರು 12 ವರ್ಷ ಹಿರಿಯ ಕ್ರೀಡಾ ವರದಿಗಾರರಾಗಿದ್ದರು.

ವಿಜಯ ಕರ್ನಾಟಕದಲ್ಲಿ ಕ್ರೀಡಾ ಸಂಪಾದಕನಾಗಿ ಎರಡು ವರ್ಷ ಕೆಲಸ ಮಾಡಿದ್ದರು. ಅದರ ನಂತರ ಸಿಡ್ನಿ ರೇಡಿಯೋಗೆ ಅರೆಕಾಲಿಕ ವರದಿಗಾರರಾಗಿದ್ದರು. ಕೆಲ ಸುದ್ದಿ ವಾಹಿನಿಗಳು, ಆಕಾಶವಾಣಿಯ ಚರ್ಚಾ ಕಾರ್ಯಕ್ರಮ ಗಳಲ್ಲಿ ಸಕ್ರಿಯರಾಗಿದ್ದರು. ಭರತನಾಟ್ಯ ಮತ್ತು ರಂಗ ಕಲಾವಿದರಾಗಿ ಸಕ್ರೀಯರಾಗಿದ್ದರು. ಅವರಿಗೆ ಪತ್ನಿ ಶೋಭಾ ಲೋಕನಾಥ್ ಮತ್ತು ಪುತ್ರಿ ತಪಸ್ಯಾ( ೫ ವರ್ಷ) ಇದ್ದಾರೆ.