Thursday, September 17, 2026

BDA Apartments

Good news BDA JK_Adv BDA Adv
Home Front Page ಪಡಿತರ ಕಾರ್ಡುದಾರರಿಗೆ ಗುಡ್ ನ್ಯೂಸ್: ಇ-ಕೆವೈಸಿ ಅಂತಿಮ ದಿನಾಂಕ ವಿಸ್ತರಣೆ

ಪಡಿತರ ಕಾರ್ಡುದಾರರಿಗೆ ಗುಡ್ ನ್ಯೂಸ್: ಇ-ಕೆವೈಸಿ ಅಂತಿಮ ದಿನಾಂಕ ವಿಸ್ತರಣೆ

ಬೆಂಗಳೂರು,ಸೆಪ್ಟಂಬರ್,17,2026 (www.justkannada.in):  ಇ-ಕೆವೈಸಿ  ಮಾಡಿಸಲು ಸರ್ವರ್ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಪಡಿತರ ಕಾರ್ಡುದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.

ಪಡಿತರ ಇ-ಕೆವೈಸಿ ಅಂತಿಮ ದಿನಾಂಕವನ್ನು ಅಕ್ಟೋಬರ್ 20ರವರೆಗೆ ವಿಸ್ತರಣೆ ಮಾಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. ಪಡಿತರ ಇ-ಕೆವೈಸಿ ಮಾಡಿಸಲು ಸೆಪ್ಟಂಬರ್ 30 ಅಂತಿಮ ದಿನಾಂಕವಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸರಿಯಾಗಿ ಇ-ಕೆವೈಸಿ ಆಗುತ್ತಿರಲಿಲ್ಲ. ೀ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಇ-ಕೆವೈಸಿ ಗಡುವು ಅಕ್ಟೋಬರ್ 20ಕ್ಕೆ ವಿಸ್ತರಣೆ ಮಾಡಿದೆ.

ಹಾಗೆಯೇ ಅಕ್ಟೋಬರ್ 1ರಿಂದ ಜಾರಿಯಾಗುವಂತೆ ನ್ಯಾಯಬೆಲೆ ಅಂಗಡಿ ವೇಳಾಪಟ್ಟಿ ಬದಲಾವಣೆ ಮಾಡಿದೆ. ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 7ರಿಂದ  ಮಧ್ಯಾಹ್ನ 12 ಗಂಟೆವರೆಗೆ ಓಪನ್ ಇರಬೇಕು  ಸಂಜೆ 4 ರಿಂದ 8ಗಂಟೆವರೆಗೆ ಪಡಿತರ ವಿತರಿಸಬೇಕು   ಪ್ರತಿದಿನ ಕಡ್ಡಾಯವಾಗಿ 8 ಗಂಟೆಗಳ ಕಾಲ ರೇಷನ್ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.Good news jk02_new jk02 new

 

English Summary
Title

Ration Card e-KYC Deadline Extended:

Short Description
The government has extended the ration card e-KYC deadline to prevent beneficiaries from losing their food grain subsidies. In Karnataka, the deadline for APL and BPL holders is now 20 October 2026 due to severe server glitches. Other states like Uttar Pradesh retain a 30 September 2026 cutoff. Cardholders must visit their nearest Fair Price Shop with their Aadhaar card for biometric authentication. Failing to link your Aadhaar will result in your ration card being deactivated or suspended. Ensure your family completes the verification online via official portals or offline to continue receiving state benefits uninterrupted.
Keywords
Good news, ration card holders, e-KYC, deadline, extended.