ಕಲಬುರುಗಿ,ಸೆಪ್ಟಂಬರ್,16,2026 (www.justkannada.in): ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ವಂದೇ ಮಾತರಂ ಗೀತೆ ಹಾಡಲು ಬರಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ವಂದೇ ಮಾತರಂ ವಿವಾದ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಮಗೆ ಎರಡು ಚರಣ ಮಾತ್ರ ಗೊತ್ತು. ಬಿಜೆಪಿ ಶಾಸಕರು ಅಪಮಾನ ಅಂತಾ ವೇದಿಕೆ ಬಿಟ್ಟು ಹೋಗಿದ್ದಾರೆ . ಆರ್.ಅಶೋಕ್, ಬಿವೈ ವಿಜಯೇಂದ್ರಗೆ ನಾನೇ ವೇದಿಕೆ ರೆಡಿ ಮಾಡುತ್ತೇನೆ. ಟೆಲಿಪ್ರಾಂಪ್ಟರ್ ಇಲ್ಲದೇ ವಂದೇ ಮಾತರಂ ಗೀತೆಯನ್ನ ಹಾಡಲಿ. ಬಿಜೆಪಿ ನಾಯಕರು ಸಂಪೂರ್ಣವಾಗಿ ವಂದೇ ಮಾತರಂ ಹಾಡಲಿ ಎಂದು ಟಾಂಗ್ ಕೊಟ್ಟರು.
ನಿನ್ನೆಯಿಂದ ಬಿಜೆಪಿ ನಾಯಕರು ಪ್ರಾಕ್ಟೀಸ್ ಮಾಡುತ್ತಿರಬಹುದು. ಪ್ರಾಕ್ಟೀಸ್ ಮಾಡಿಕೊಂಡಾದರೂ ಹಾಡಲಿ. ಮೋದಿ, ಅಮಿತ್ ಶಾಗೂ ವಂದೇ ಮಾತರಂ ಹಾಡಲು ಬರಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.







